Advertisement

ಪಾಕ್‌ ಕ್ರಿಕೆಟಿಗರ ಚಿತ್ರ ತೆರವು ಈಗ ಜೈಪುರದ ಸರದಿ

01:20 AM Feb 19, 2019 | Team Udayavani |

ಜೈಪುರ: ಮುಂಬಯಿ ಕ್ರಿಕೆಟ್‌ ಕ್ಲಬ್‌ ಆಫ್ ಇಂಡಿಯಾ ಹಾಗೂ ಪಂಜಾಬ್‌ನ ಮೊಹಾಲಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ತೂಗುಹಾಕಲಾಗಿದ್ದ ಪಾಕಿಸ್ಥಾನಿ ಕ್ರಿಕೆಟಿಗರ ಚಿತ್ರಗಳನ್ನು ತೆರವುಗೊಳಿಸಿದ ಬೆನ್ನಲ್ಲೇ, ಜೈಪುರದ “ಸವಾಯ್‌ ಮಾನ್‌ ಸಿಂಗ್‌ ಕ್ರೀಡಾಂಗಣ’ದಲ್ಲಿರುವ ಪಾಕ್‌ ಕ್ರಿಕೆಟಿಗರ ಭಾವಚಿತ್ರಗಳನ್ನೂ ತೆಗೆದುಹಾಕಲಾಗಿದೆ. 

Advertisement

ಪುಲ್ವಾಮದಲ್ಲಿ ನಡೆದ ಭಾರತೀಯ ಯೋಧರ ಹತ್ಯಾಕಾಂಡದ ಅನಂತರ ಈ ಕ್ರಮ ತೆಗೆದುಕೊಳ್ಳಲಾಗಿದೆ. ಪಾಕ್‌ ಪ್ರೇರಿತ ಉಗ್ರಕೃತ್ಯಕ್ಕೆ ದೇಶಾದ್ಯಂತ ಕ್ರಿಕೆಟಿಗರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next