Advertisement
ಕೋಪ, ಪ್ರೇಮ, ದ್ವೇಷ, ಭಯ, ದುಃಖ, ಕಳವಳ, ಅಭದ್ರತಾಭಾವನೆ ಇವೆಲ್ಲವೂ ಹುಟ್ಟಿಕೊಳ್ಳಲು ನಮ್ಮ ಮನಸ್ಸಿನ ಅಂತರಂಗದಲ್ಲಿ ಆಗುವ ಬದಲಾವಣೆಗಳೇ ಕಾರಣ. ಅದರಿಂದಾಗಿ ನಮ್ಮ ಅಂತರಂಗವು ಒಮ್ಮೊಮ್ಮೆ ಕಳವಳಕಾರಿಯ ರೀತಿಯಲ್ಲಿರುತ್ತದೆ. ಈ ಭಾವನೆ ಮತ್ತು ವಿಪರೀತವೆನಿಸುವ ಲಕ್ಷಣಗಳನ್ನು ಸಹಜ ಶಕ್ತಿಯಾಗಿ ಮಾರ್ಪಡಿಸಿಕೊಳ್ಳುವ ನೈಪುಣ್ಯತೆ ವರ್ತಮಾನ ಪ್ರಪಂಚಕ್ಕೆ ತುಂಬಾ ಅವಶ್ಯಕ. ನಾವು ಸದಾ ಅಂತರಂಗದತ್ತ ದೃಷ್ಟಿ ಹಾಯಿಸಬೇಕು. ನಮಗೆ ನಾವೇ ಮಥಿಸಿಕೊಳ್ಳಬೇಕು. ನಕಾರಾತ್ಮಕ ಚಿಂತನೆಯನ್ನು ಬಿಟ್ಟು ಸಕಾರಾತ್ಮಕ ಧೋರಣೆಯಲ್ಲಿ ನಮ್ಮ ಆಲೋಚನೆಗಳು ಸಾಗಬೇಕು. ಜೀವನದ ಬಗೆಗಿನ ಅಭದ್ರತಾ ಭಾವನೆಯನ್ನು ದೂರಮಾಡುವ ಕುರಿತಾದ ಮಾರ್ಗಗಳನ್ನು ತಿಳಿದುಕೊಳ್ಳಬೇಕು.
Related Articles
Advertisement
ನಿಜವಾಗಿಯೂ ಅಭದ್ರತೆಗೆ ಕಾರಣವಾಗುವ ವಿಷಯಗಳ ಬಗ್ಗೆ ಸ್ಪಂದಿಸುವುದಿಲ್ಲ. ಅಭದ್ರತೆಯ ಬಗ್ಗೆ ನಮ್ಮ ಮನಸ್ಸಿನಲ್ಲಿ ಅನಗತ್ಯವಾಗಿ ಕಾಡುವ ಅನುಮಾನಗಳು, ಹಲವು ಸಂದರ್ಭಗಳಲ್ಲಿ ಮಿತಿ ಮೀರುತ್ತವೆ. ನಿಮಗಿಷ್ಟವಾದವರು ನಿಮ್ಮಿಂದ ದೂರವಾಗಿ ಮತ್ಯಾರನ್ನೋ ಪ್ರೇಮಿಸುತ್ತಿದ್ದಾರೆಂದು, ಅವರ ಬೆನ್ನಹಿಂದೆ ಸುತ್ತುತ್ತಿದ್ದಾರೆಂದು, ನಿಮಗಿಂತಲೂ ಸಮರ್ಥನಾದ ವ್ಯಕ್ತಿಯಹುಡುಕಾಟದಲ್ಲಿದ್ದಾರೆಂದು, ನಿಮ್ಮ ಸ್ಥಾನದಲ್ಲಿ ಇನ್ನೋಬ್ಬರಿಗೆ ಅವಕಾಶ ಕೊಡುತ್ತಾರೇನೋ ಎಂಬಂತಹ ಸಂಗತಿಗಳು ನಿಮ್ಮಲ್ಲಿನ ಅಭದ್ರತೆಯ ಭಾವವನ್ನು ಪುಟಿದೆಬ್ಬಿಸುತ್ತದೆ.
ಅಭದ್ರತೆ ಎಂಬುದು ಒಂದು ಭಾವೋದ್ವೇಗದ ಅಲಾರಂ. ಗಡಿಯಾರದಂತೆ. ಸ್ನೇಹಿತರು ಅತಿ ಕಡಿಮೆ ಸಮಯವನ್ನು ನಿಮ್ಮೊಂದಿಗೆ ಕಳೆದಾಗ, ಅಕ್ಕ ಪಕ್ಕದ ಸಹೋದ್ಯೋಗಿಗಳು ನಿಮಗಿಂತಲೂ ಎಲ್ಲ ವಿಧದಲ್ಲೂ ಚೆನ್ನಾಗಿದ್ದರೂ ನಿಮ್ಮಲ್ಲಿನ ಈ ಗಡಿಯಾರವು ಅತ್ತಿಂದಿತ್ತ ಚಲಿಸಲು ಪ್ರಾರಂಭಿಸುತ್ತದೆ.
ಇತಂಹ ಅಭದ್ರತಾ ಭಾವವು ಮನೆ ಮಾಡಿಕೊಳ್ಳಲಿಕ್ಕೆ, ಅದು ಇನ್ನಷ್ಟು ವೃದ್ಧಿಯಾಗಲು ಆತ್ಮವಿಶ್ವಾಸದ ಕೊರತೆಯೇ ಪ್ರಮುಖ ಕಾರಣವಾಗಿರುತ್ತದೆ. ಜೀವನವೆಂದರೆ ಅಭದ್ರತೆಯಿಂದ ಬದುಕುವುದಲ್ಲ. ಸದಾ ನಮ್ಮ ಅಂತರಂಗದ ಮಥನ ಮಾಡಿ ಕೊಳ್ಳಬೇಕು. ನಾವು ಆಳವಾಗಿ ದೃಷ್ಟಿಹಾಯಿಸಿದರೆ ಪ್ರತಿಯೊಂದು ಆನಂದದ ಹಿಂದೆ ಒಂದು ವಿಷಾದ, ಪ್ರತಿಯೊಂದು ವಿಷಾದದ ಪಕ್ಕದಲ್ಲೇ ಒಂದು ಆನಂದ ಇರುತ್ತದೆ. ಇದು ನಿಜವಾದ ಜೀವನ ಎಂಬುದರ ಅರಿವು ಇರಲಿ.