Advertisement

ಫೋನಿ ಚಂಡ ಮಾರುತ ಮತ್ತಷ್ಟು ತೀವ್ರ

11:26 PM Apr 27, 2019 | mahesh |

ಚೆನ್ನೈ: ಬಂಗಾಲ ಕೊಲ್ಲಿಯ ಆಗ್ನೇಯ ಭಾಗದಲ್ಲಿ ಉಂಟಾಗಿರುವ ತೀವ್ರ ವಾಯಭಾರ ಕುಸಿತವು, ರವಿವಾರ ಭಾರೀ ಚಂಡಮಾರುತವಾಗಿ ಬದಲಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಫೋನಿ ಎಂಬ ಹೆಸರಿನ ಈ ಚಂಡಮಾರುತದ ಪರಿ ಣಾಮವಾಗಿ, ಎ. 29 ಮತ್ತು 30 ರಂದು ಕರ್ನಾಟಕದ ದಕ್ಷಿಣ ಒಳನಾಡು ಹಾಗೂ ಕೇರಳದ ಕೆಲವು ಭಾಗಗಳಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ. ತಮಿಳುನಾಡಿನ ಉತ್ತರ ಕರಾವಳಿ ಮತ್ತು ಆಂಧ್ರಪ್ರದೇಶದ ದಕ್ಷಿಣ ಕರಾವಳಿಯಲ್ಲಿ ಎ. 30 ಮತ್ತು ಮೇ 1ರಂದು ಮಧ್ಯಮ ಪ್ರಮಾಣದ ಮಳೆ ಬೀಳಲಿದೆ ಎಂದೂ ಇಲಾಖೆ ತಿಳಿಸಿದೆ.

Advertisement

ಸದ್ಯ ಇದು ಬಂಗಾಲ ಕೊಲ್ಲಿ ಯಲ್ಲಿದ್ದು, ತಮಿಳುನಾಡು ಕರಾವಳಿ ಯತ್ತ ಸಾಗು ತ್ತಿದೆ. ಎ. 30ರಂದು ಸಂಜೆಯ ವೇಳೆಗೆ ಉತ್ತರ ತಮಿಳು ನಾಡು, ದಕ್ಷಿಣ ಆಂಧ್ರಪ್ರದೇಶದ ಕರಾ ವಳಿಯ ಸಮೀಪ ದಲ್ಲಿ ಫೋನಿ ಚಂಡ ಮಾರುತ ಹಾದು ಹೋಗ ಲಿದೆ ಯಾದರೂ, ಇಲ್ಲಿ ಅಪ್ಪಳಿ ಸುವ ಸಾಧ್ಯತೆ ಕಡಿಮೆ ಇದೆ. ಸದ್ಯ ಚಂಡಮಾರುತದ ಗತಿಯನ್ನು ನಾವು ವೀಕ್ಷಿಸುತ್ತಿದ್ದೇವೆ ಎಂದು ಹವಾಮಾನ ಇಲಾ ಖೆಯ ಹೆಚ್ಚುವರಿ ನಿರ್ದೇಶಕ ಮೃತ್ಯುಂಜಯ ಮೊಹಾಪಾತ್ರ ಹೇಳಿ ದ್ದಾರೆ. ಬಾಂಗ್ಲಾದೇಶ ಸಲಹೆ ಮಾಡಿದ ಫೋನಿ ಹೆಸರನ್ನು ಈ ಚಂಡಮಾರುತಕ್ಕೆ ಇಡಲಾ ಗಿದೆ. ಫೋನಿಯ ಎಫೆಕ್ಟ್ನಿಂ ದಾಗಿ ಎ. 28ರಂದು ಶ್ರೀಲಂಕಾ, ತಮಿಳು ನಾಡು, ಆಂಧ್ರಪ್ರದೇಶ ಕರಾವಳಿ ಯಲ್ಲಿ ಸಮು ದ್ರದ ಅಬ್ಬರ ಹೆಚ್ಚಿರಲಿದೆ. ದಕ್ಷಿಣದ ರಾಜ್ಯಗಳ ಕರಾವಳಿಯಲ್ಲಿ ದೈತ್ಯ ಅಲೆ ಗಳು ಏಳಲಿವೆ. ಹೀಗಾಗಿ, ಯಾವುದೇ ಕಾರಣಕ್ಕೂ ಸಮುದ್ರಕ್ಕಿಳಿಯ ದಂತೆ ಈ ರಾಜ್ಯಗಳ ಮೀನುಗಾರರಿಗೆ ಸೂಚಿ ಸಲಾಗಿದೆ. ಈ ರಾಜ್ಯಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ ಎಂದು ಅಧಿ ಕಾರಿಗಳು ಮಾಹಿತಿ ನೀಡಿದ್ದಾರೆ.

ಉತ್ತರದಲ್ಲಿ ಉಷ್ಣ ವಾತಾವರಣ: ಈ ಮಧ್ಯೆ ಉತ್ತರ ಭಾರತದಲ್ಲಿ ಉಷ್ಣ ವಾತಾ ವರಣ ಮುಂದುವರಿಯಲಿದ್ದು, ಕೆಲವೆಡೆ ಉಷ್ಣಗಾಳಿ ಬೀಸಲಿದೆ. ಉತ್ತರ ಭಾರತದಲ್ಲಿ 46 ಡಿಗ್ರಿವರೆಗೆ ತಾಪಮಾನ ಏರಿಕೆ ಕಾಣಲಿದೆ ಎಂದು ಇಲಾಖೆ ಹೇಳಿದೆ.

ಆರ್ಥಿಕ ಬಿಕ್ಕಟ್ಟಿನಿಂದಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಿರುವ ಜೆಟ್‌ ಏರ್‌ವೇಸ್‌ ಅನ್ನು ಉಳಿಸಿ ಎಂದು ಆಗ್ರಹಿಸಿ ಸಂಸ್ಥೆಯ ಉದ್ಯೋಗಿಗಳು ಶನಿವಾರ ದಿಲ್ಲಿಯಲ್ಲಿ ಮೊಂಬತ್ತಿ ಮೆರವಣಿಗೆ ನಡೆಸಿದರು. ಈ ವೇಳೆ, ದುಃಖ ತಾಳಲಾರದೆ ಕಣ್ಣೀರು ಹಾಕಿದ ಸಹೋದ್ಯೋಗಿಯನ್ನು ಯುವತಿಯೊಬ್ಬರು ಸಂತೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next