Advertisement
ಬೆಳ್ತಂಗಡಿಯ ಪೆರೊಡಿತ್ತಾಯಕಟ್ಟೆಯ ಅಲಂಗಾಯಿಯಲ್ಲಿರುವ ರೈತ ಸ್ಟೀವನ್ ಡಿಸೋಜರ ಅಡಕೆಯ ತೋಟದೊಳಗೆ ಎಗ್ ಫ್ರೂಟ್ ಮರ ಗೊಂಚಲು ಗೊಂಚಲಾಗಿ ಹಣ್ಣುಗಳನ್ನು ಬಿಟ್ಟಿದೆ. ಮಳೆಗಾಲ ಆರಂಭವಾದ ಮೇಲೆ ಅದು ಪಕ್ವವಾಗುವುದು ವಾಡಿಕೆ. ಹಸುರಾಗಿರುವ ಸಿಪ್ಪೆ, ಹಳದಿ ವರ್ಣಕ್ಕೆ ತಿರುಗುತ್ತ ಕಡು ಹಳದಿಯಾದಾಗ ಮೃದುವಾಗುತ್ತದೆ. ಹೊರಗಿನ ಸಿಪ್ಪೆ ಬಿರಿದು ಕೈಯಿಂದ ತೆಗೆಯುವಷ್ಟು ಮೆತ್ತಗಾಗುತ್ತದೆ.
Related Articles
Advertisement
ಹಣ್ಣಿನೊಳಗಿರುವ ಬೀಜದಿಂದ ಗಿಡ ತಯಾರಿಸಿ ನೆಟ್ಟರೆ ಫಸಲು ಬರುವುದು ನಿಧಾನ. ಗ್ರಾಫ್ಟ್ ಕಸಿಯ ಗಿಡ ಶೀಘ್ರ ಹಣ್ಣು ಕೊಡುವುದಂತೆ. ಒಂದು ಮರದಿಂದ 500ರ ವರೆಗೂ ಹಣ್ಣನ್ನು ಪಡೆಯಬಹುದು. ಕೊಬ್ಬು, ಪೊ›ಟೀನ್, ರಂಜಕ, ಸುಣ್ಣ, ಕಬ್ಬಿಣ, ಬಿ ಜೀವಸಣ್ತೀ, ಕೆರೋಟಿನ್ ಮೊದಲಾದ ಪೋಷಕಾಂಶಗಳಿರುವ ಈ ಹಣ್ಣು ಆರೋಗ್ಯದ ದೃಷ್ಟಿಯಿಂದ ಲಾಭದಾಯಕ. ಚರ್ಮ ಮತ್ತು ಕೂದಲಿನ ಆರೋಗ್ಯ ಕಾಪಾಡುತ್ತದೆ.
ಎದೆಯುರಿ, ಅಧಿಕ ರಕ್ತದ ಒತ್ತಡಗಳಿಗೂ ಮದ್ದಾಗುವುದಂತೆ. ತೊಗಟೆ ಮತ್ತು ಬೇರುಗಳಿಂದಲೂ ವಿವಿಧ ರೋಗನಾಶಕ ಚಿಕಿತ್ಸೆ ಮಾಡುತ್ತಾರೆಂಬ ವಿವರಗಳಿವೆ. ಮರಕ್ಕೆ ಕೊಂಬೆ ಸಾಯುವ ರೋಗ ಬರುತ್ತದೆ. ಆಗ ಆ ಕೊಂಬೆಯನ್ನು ಕತ್ತರಿಸದಿದ್ದರೆ ಇಡೀ ಮರವನ್ನು ರೋಗ ವ್ಯಾಪಿಸುತ್ತದೆ. ಎಲೆ ಚುಕ್ಕಿ ರೋಗವೂ ಬಾಧಿಸುವುದುಂಟು. ಗಾಳಿಗೆ ಕೊಂಬೆ ಮುರಿಯುತ್ತದೆ. ಹಣ್ಣು ಮರದಲ್ಲೇ ಆದರೆ ಅದನ್ನು ಚೀಲ ಕಟ್ಟಿ ಕೊಯ್ಯಬೇಕು.
ನೆಲಕ್ಕೆ ಬಿದ್ದರೆ ಹಣ್ಣು ಒಡೆದು ಹೋಗುತ್ತದೆ. ಕೆಳಗೆ ಬಿದ್ದ ಹಣ್ಣಿಗೆ ಕೀಟಗಳು ತಕ್ಷಣ ಆವರಿಸುತ್ತವೆ. ಹೀಗಾಗಿ ಮಾರುಕಟ್ಟೆಗೆ ಸಾಗಿಸುವುದು ಕಷ್ಟವಾಗಿದೆ ಎನ್ನುತ್ತಾರೆ ಸ್ಟೀವನ್. ಕೇರಳ, ತಮಿಳುನಾಡು, ಮಹಾರಾಷ್ಟ್ರಗಳ ರೈತರು ಇದನ್ನು ವ್ಯಾಪಕವಾಗಿ ಬೆಳೆದು ಮಾರುಕಟ್ಟೆಗೆ ಒಯ್ಯುತ್ತಾರೆ. ಈ ತಂತ್ರಜಾnನವನ್ನು ತಿಳಿದುಕೊಂಡರೆ ಇದರ ಅಧಿಕ ಕೃಷಿ ಮಾಡಿದರೂ ಗೆಲ್ಲಬಹುದೆನಿಸುತ್ತದೆ. ಮೂವತ್ತು ಅಡಿಯವರೆಗೆ ಎತ್ತರ ಬೆಳೆಯುವ ಈ ಮರ ನೂರಾರು ವರ್ಷ ಬದುಕುತ್ತದಂತೆ.
* ಪ. ರಾಮಕೃಷ್ಣ ಶಾಸ್ತ್ರಿ