Advertisement

ಸಾಮಾಜಿಕ ನ್ಯಾಯಕೊಟ್ಟ ಅರಸು ವ್ಯಕ್ತಿತ್ವ ಸ್ಮರಣೀಯ

10:43 AM Aug 21, 2017 | |

ಆಳಂದ: ಸಾಮಾಜಿಕ ನ್ಯಾಯ ಒದಗಿಸಿಕೊಟ್ಟ ಮಾಜಿ ಮುಖ್ಯಮಂತ್ರಿ ದಿ| ಡಿ. ದೇವರಾಜ ಅರಸು ಅವರದ್ದು
ಅವಿಸ್ಮರಣೀಯ ವ್ಯಕ್ತಿತ್ವ ಎಂದು ಶಾಸಕ ಬಿ.ಆರ್‌. ಪಾಟೀಲ ಹೇಳಿದರು. ಪಟ್ಟಣದ ತಹಶೀಲ್ದಾರ ಕಚೇರಿ ಆವರಣದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಡಿ. ದೇವರಾಜ ಅರಸು ಅವರ 102ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅರಸು ಅವರು ನೀಡಿದ ಮೀಸಲಾತಿ ಸೌಲಭ್ಯ ಪಡೆದ ಸಮುದಾಯಗಳು ಎಂದಿಗೂ ಮರೆಯದಂತ್ತಿದೆ. ಅರಸು ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಬಹುದೊಡ್ಡ ಕ್ರಾಂತಿ ಮಾಡಿದ್ದಾರೆ. ಮೀಸಲಾತಿ ಮೂಲಕ ಹಿಂದುಳಿದ, ಶೋಷಿತ ವರ್ಗಕ್ಕೆ ನೀಡಿದ ಕೊಡುಗೆ ಲಾಭ ಪಡೆದವರು ದೊಡ್ಡ ಸಂಖ್ಯೆಯಲ್ಲಿ ಸೇರಿ ಸ್ಮರಣೆ ಮಾಡಬೇಕು. ಆದರೆ ಕೊಡುಗೆ ನೀಡಿದ ವ್ಯಕ್ತಿಗಳನ್ನೇ ಜನರು ಮರೆಯುತ್ತಿರುವುದು ಸರಿಯಲ್ಲ ಎಂದು ಹೇಳಿದರು. ಜನಪರ ಕೆಲಸ ಮಾಡಿದ ಅರಸು ಸೇರಿ ಬಸವಣ್ಣ, ವಿ.ಪಿ.ಸಿಂಗ್‌, ಮಹಾತ್ಮಗಾಂಧೀಜಿ ಅನುಭವ ನೋಡಿದ್ದೇವೆ. ಗಾಂಧಿಧೀಜಿ ಯಾವ ಹುದ್ದೆಯಲ್ಲೂ ಇರಲಿಲ್ಲ. ಅವರ ಕಾರ್ಯದ ಬೆನ್ನಿಗೆ ನಿಲ್ಲಲ್ಲಿಲ್ಲ. ಅದೇ ಪರಿಸ್ಥಿತಿ ಅರಸರಿಗೂ ಆಗಿದೆ. 80ರ ದಶಕದಲ್ಲಿ ಅರಸು ಅವರಿಂದ ಲಾಭ ಪಡೆದವರು ಸಹ ಅವರ ಬೆಂಬಲಕ್ಕೆ ಅಂದು ನಿಂತುಕೊಳ್ಳಲಿಲ್ಲ ಎಂದು ಹೇಳಿದರು. ಅರಸು ಸರಳ ಸಜ್ಜನಿಕೆ ವ್ಯಕ್ತಿಯಾಗಿದ್ದಾರೆ. ಹಿಂದೆ ಕಲಬುರಗಿಗೆ ಬಂದಾಗ ಅವರ ಬೆಂಬಲಕ್ಕೆ ಯಾರು ನಿಲ್ಲಲಿಲ್ಲ. ಒಬ್ಬರೆ ಕಾರಿನಲ್ಲಿ ಹೋದರು ಮಾತನಾಡಿಸಲಿಲ್ಲ. ಇಂಥ ಸ್ಥಿತಿ ಪರಿರ್ವನೆ ಮಾಡಿದವರೆಲ್ಲರಿಗೂ ಬಂದಿದೆ. ಹುಸಿ ಭರವಸೆ ಮತ್ತು ರಾಜಿಸಂಧಾನ ವೊಂದಿದ್ದರೆ ರಾಜಕೀಯದಲ್ಲಿ ಏನೆಲ್ಲ ಆಗುತ್ತದೆ
ಎಂದು ಹೇಳಿದರು. ತಹಶೀಲ್ದಾರ ಬಸವರಾಜ ಎಂ. ಬೆಣ್ಣೆಶಿರೂರ,‌ ಉಪನ್ಯಾಸಕ ರಮೇಶ ಮಾಡಿಯಾಳ
ಮಾತನಾಡಿದರು. ಪುರಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ ಪಾಟೀಲ, ಉಪಾಧ್ಯಕ್ಷ ಅಜಗರ ಅಲಿ ಹವಾಲ್ದಾರ, ಹಿಂದುಳಿದ ವರ್ಗದ ವಿಸ್ತೀಣಾ ಧಿಕಾರಿ ಅಂಬವ್ವ ಬಿ. ಪೂಜಾರಿ, ಗ್ರೇಡ್‌-2 ತಹಶೀಲ್ದಾರ ಬಿ.ಜಿ. ಕುದರಿ ಮತ್ತು ಎಇಇ ತಾನಾಜಿ
ವಾಡೇಕರ್‌, ಗ್ರಾಮೀಣ ಎಇಇ ಅಬ್ದುಲ ಸಲಾಂ ಪಿಎಸ್‌ಐ ಸುರೇಶ ಪ್ರಭು, ಪುರಸಭೆ ಸದಸ್ಯ ಕಭೀರಾ ಬೇಗಂ, ಸುಲೇಮಾನ್‌ ಮುಕುಟ್‌, ಸೂರ್ಯಕಾಂತ ಬೋಸ್ಲೆ, ಕಂದಾಯ ನಿರೀಕ್ಷಕ ಶರಣಬಸಪ್ಪ ಹಕ್ಕಿ, ರಮೇಶ ಮಾಳಿ ಪಾಲ್ಗೊಂಡಿದ್ದರು. ಕಲ್ಯಾಣಿ ಬಿಜ್ಜರ್ಗಿ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next