Advertisement

Pakistan ತಾಕತ್ತೇನೆಂದು ಖುದ್ದು ಪರೀಕ್ಷಿಸಿ ಬಂದಿರುವೆ:ಮೋದಿ!

01:12 AM May 24, 2024 | Team Udayavani |

ಹೊಸದಿಲ್ಲಿ: “ಪಾಕಿಸ್ಥಾನದ ತಾಕತ್ತು ಏನೆಂದು ನಾನೇ ಖುದ್ದು ಲಾಹೋರ್‌ಗೆ ಹೋಗಿ ಪರೀಕ್ಷಿಸಿ ಬಂದಿದ್ದೇನೆ. ಆ ದೇಶದ ಬಂಡವಾಳ ಆಗಲೇ ಬಯಲಾಗಿದೆ’!”ಪಾಕಿಸ್ಥಾನದ ಬಳಿ ಅಣು ಬಾಂಬ್‌ ಇದೆ. ಹೀಗಾಗಿ ಅವರನ್ನು ಭಾರತ ಗೌರವಿಸಬೇಕು’ ಎಂಬ ಕಾಂಗ್ರೆಸ್‌ ನಾಯಕ ಮಣಿಶಂಕರ್‌ ಅಯ್ಯರ್‌ ಅವರ ಹೇಳಿಕೆಗೆ ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ ರೀತಿಯಿದು.

Advertisement

ಗುರುವಾರ ಸಂದರ್ಶನವೊಂದರಲ್ಲಿ ಮಾತನಾಡಿದ ಮೋದಿ, 2015ರ ತಮ್ಮ ಪಾಕ್‌ ಭೇಟಿ ಬಗ್ಗೆ ಪ್ರಸ್ತಾವಿಸುತ್ತಾ, “ನಾನು ಅಂದು ಪಾಕ್‌ಗೆ ಹೋದಾಗ ಅನೇಕ ಪತ್ರಕರ್ತರು ನನ್ನನ್ನು, “ಹೇ ವೀಸಾ ಇಲ್ಲದೇ ನೀವು ಬಂದುಬಿಟ್ಟಿರಾ’ ಎಂದು ಪ್ರಶ್ನಿಸಿದ್ದರು. ಆಗ ನಾನು, ಒಂದು ಕಾಲದಲ್ಲಿ ಇದು ನನ್ನ ದೇಶವೂ ಆಗಿತ್ತು ಎಂದೆ. ಆ ದೇಶದ ತಾಕತ್ತು ಮತ್ತು ಬಂಡವಾಳವೇನೆಂದು ನನಗೆ ಆಗಲೇ ಗೊತ್ತಾಗಿದೆ’ ಎಂದು ಹೇಳಿದ್ದಾರೆ.

ವಿದೇಶಾಂಗ ನೀತಿಯ ವಿಚಾರದಲ್ಲಿ ವಿಪಕ್ಷಗಳು ನನ್ನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದವು. ಆದರೆ ನಾನು ನನ್ನ ಅವಧಿಯಲ್ಲಿ ಜಾಗತಿಕ ನಾಯಕರೊಂದಿಗೆ ಔಪಚಾರಿಕ ಸಂಬಂಧ ಮಾತ್ರವಲ್ಲದೇ ಅನೌಪಚಾರಿಕ ಬಾಂಧವ್ಯವನ್ನೂ ಬೆಳೆಸಿಕೊಂಡೆ ಎಂದಿದ್ದಾರೆ. ಅಲ್ಲದೇ 370ನೇ ವಿಧಿ ರದ್ದು, ಮುಸ್ಲಿಂ ಮೀಸಲಾತಿ ಸೇರಿ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

ನಾನಿದ್ದಿದ್ದರೆ ಕರ್ತಾರ್ಪುರ ಎಂದೋ ವಶಕ್ಕೆ: ಮೋದಿ
70 ವರ್ಷಗಳ ಕಾಲ ನಾವು ಕರ್ತಾರ್ಪುರ ಸಾಹಿಬ್‌ ಅನ್ನು ಬೈನಾಕ್ಯುಲರ್‌ನಲ್ಲಿ ನೋಡಬೇಕಾಗಿತ್ತು. ನಾನೇನಾದರೂ ಅಂದು ಪ್ರಧಾನಿ ಆಗಿರುತ್ತಿದ್ದರೆ, ಆ ಸೈನಿಕರ ಹಸ್ತಾಂತರದ ಬದಲಿಗೆ ಕರ್ತಾರ್ಪುರ ಸಾಹಿಬ್‌ ಅನ್ನು ವಾಪಸ್‌ ಪಡೆಯುತ್ತಿದ್ದೆ ಎಂದಿದ್ದಾರೆ.

“ಕೈ’ ಗೆದ್ದರೆ ರಾಮ್‌ ರಾಮ್‌ ಹೇಳುವವರು ಜೈಲಿಗೆ: ಪಿಎಂ
ಹರಿಯಾಣದ ಜನ ಪ್ರತೀ10 ಹೆಜ್ಜೆಗೆ ಒಮ್ಮೆ ರಾಮ್‌ ರಾಮ್‌ ಎನ್ನುತ್ತಾರೆ. ಕಾಂಗ್ರೆಸ್‌ ಅಧಿಕಾರಕ್ಕೇರಿದರೆ ರಾಮ್‌ ರಾಮ್‌ ಎನ್ನುವ ಎಲ್ಲರನ್ನೂ ಜೈಲಿಗಟ್ಟುತ್ತದೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ. ಆ ಪಕ್ಷವು ಭಾರತವನ್ನು ವಿಭಜಿಸಿ, ತನ್ನ ವೋಟ್‌ಬ್ಯಾಂಕ್‌ ಅನ್ನು ಓಲೈಸಲು ಈಗಾಗಲೇ ಎರಡು ಮುಸ್ಲಿಂ ದೇಶಗಳನ್ನು ಸೃಷ್ಟಿಸಿದೆ ಎಂದೂ ಮೋದಿ ಹೇಳಿದ್ದಾರೆ.

Advertisement

“ಹಸು ಹಾಲು ಕೊಡೋ ಮೊದಲೇ ತುಪ್ಪಕ್ಕೆ ಜಗಳ’
ಒಂದು ಕಡೆ ನಿಮ್ಮ ಸೇವಕ ಮೋದಿ ಇದ್ದರೆ, ಮತ್ತೂಂದೆಡೆ ಕೋಮುವಾದಿ ಇಂಡಿಯಾ ಕೂಟವಿದೆ. ನೀವೇ ಆಯ್ಕೆ ಮಾಡಿ. ಹಸು ಹಾಲು ಕೊಡುವ ಮುನ್ನವೇ ತುಪ್ಪಕ್ಕೆ ಜಗಳ ನಡೆದಂತೆ, ಇಂಡಿಯಾ ಕೂಟನ ದಲ್ಲಿ ಪ್ರಧಾನಿ ಹುದ್ದೆ ಜಗಳ ಆರಂಭವಾಗಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next