Advertisement
ನಾನು ನಮ್ಮ ಮನೆ ದೇವರ ದರ್ಶನಕ್ಕೆಂದು ಬಳ್ಳಾರಿಗೆ ಬಂದಿದ್ದೆ. ಆದರೆ ಕೆಟ್ಟ ಸುದ್ದಿ ಕೇಳಬೇಕಾಯಿತು. ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದ ಜಯೇಶ್ ಪೂಜಾರಿ ಅಲಿಯಾಸ್ ಶಾಹಿದ್ ಶೇಖ್ ಎಂಬಾತ ನನ್ನ ಕೊಲೆಗೆ ಸ್ಕೆಚ್ ಹಾಕಿರುವ ವಿಚಾರವನ್ನು ಬಹಿರಂಗಪಡಿಸಿದ್ದಾನೆ ಎಂಬುದು ತಿಳಿದುಬಂದಿದೆ. ಈ ಕುರಿತು ಸಂಬಂಧಪಟ್ಟ ಉನ್ನತ ಪೊಲೀಸ್ ಅ ಧಿಕಾರಿಗಳು, ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದೇನೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.
ಹಿಂದಿನಿಂದಲೂ ನಾನು ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷದ ಸೂಚನೆಯನ್ನು ಯಾವಾಗಲೂ ಪಾಲಿಸಿದ್ದೇನೆ. ಈಗಲೂ ಪಕ್ಷ ಹೇಳಿದಂತೆಯೇ ಚುನಾವಣ ರಾಜಕೀಯದಿಂದ ನಿವೃತ್ತಿ ಪಡೆದಿದ್ದೇನೆ ಎಂದು ಕೆ.ಎಸ್. ಈಶ್ವರಪ್ಪ ಹೇಳಿದರು.
Related Articles
Advertisement
ಬೂತ್ ಮಟ್ಟದ ಕಾರ್ಯಕರ್ತನಾಗಿದ್ದ ನನ್ನನ್ನು ಉಪಮುಖ್ಯಮಂತ್ರಿ ಮಾಡಿದರು. ಈಗ ಪಕ್ಷದ ಕೆಲಸ ಮಾಡು ಎಂದಿದ್ದಾರೆ, ಮಾಡುತ್ತೇನೆ. ಮಗನಿಗೆ ಟಿಕೆಟ್ ಕೊಟ್ಟರೆ ಸಂತೋಷ. ಬಿಜೆಪಿ ಅಧಿ ಕಾರಕ್ಕೆ ಬರಲು ಯಾವ ಕೆಲಸ ಮಾಡುವುದಕ್ಕೂ ಸಿದ್ಧ. ಹಿಂದೆ ಪಕ್ಷಕ್ಕೆ ಅಭ್ಯರ್ಥಿಗಳೇ ಸಿಗುತ್ತಿರಲಿಲ್ಲ. ಆಕಾಂಕ್ಷಿಗಳು ಹೆಚ್ಚಾಗಿರುವುದು ಗಮನಿಸಿದರೆ ಪಕ್ಷ ಬೆಳೆದಿರುವುದು ಗೊತ್ತಾಗುತ್ತದೆ. ಟಿಕೆಟ್‌ಗಾಗಿ ಕೆಲವರು ಈಗ ಹಠಕ್ಕೆ ಬಿದ್ದಿದ್ದಾರೆ. ಬಿಜೆಪಿ ಬಿಟ್ಟು ಹೋಗುತ್ತಾರೆ ಅಂದರೆ ಅವರು ಬಿಜೆಪಿಗೆ ಯೋಗ್ಯರಲ್ಲ ಎಂದೇ ಅರ್ಥ ಎನ್ನುವ ಮೂಲಕ ಪರೋಕ್ಷವಾಗಿ ಲಕ್ಷ್ಮಣ ಸವದಿಗೆ ಟಾಂಗ್ ಕೊಟ್ಟರು.