Advertisement

ಜಾತಿಯಿಂದ ವ್ಯಕ್ತಿ ಅಳೆಯುವುದು ಸಲ್ಲ: ಬಿರಾದಾರ

12:41 PM Jan 22, 2018 | |

ಔರಾದ: ಇಂದಿನ ದಿನಮಾನದಲ್ಲಿ ಜಾತಿ ವ್ಯವಸ್ಥೆ ಎಲ್ಲ ರಂಗ ಆಕ್ರಮಿಸುತ್ತಿದೆ. ಇದರಿಂದ ಹಲವು ಸಾಮಾಜಿಕ ಕಂದಕಗಳು ಸೃಷ್ಟಿಯಾಗುತ್ತಿವೆ. ಆದ್ದರಿಂದ ಒಬ್ಬ ವ್ಯಕ್ತಿಯನ್ನು ಜಾತಿಯಿಂದ ಅಳೆಯದೆ ಅವನಲ್ಲಿರುವ ಒಳ್ಳೆಯ ನಡೆ-ನುಡಿ, ಆಚಾರ-ವಿಚಾರಗಳಿಂದ ಅಳೆಯಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ಮಹೇಶ ಬಿರಾದಾರ ಹೇಳಿದರು.

Advertisement

ಪಟ್ಟಣದ ತಹಶೀಲ್ದಾರ ಕಚೇರಿ ಆವರಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಲಾಗಿದ್ದ ನಿಜಶರಣ ಅಂಬಿಗರ
ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು. ನೇರ ಹಾಗೂ ದಿಟ್ಟ ನುಡಿಗಳಿಂದ ಹೆಸರು ವಾಸಿಯಾಗಿದ್ದ ಅಂಬಿಗರ ಚೌಡಯ್ಯ ಓರೆ ಕೋರೆಗಳನ್ನು ಯಾರ ಹಂಗಿಲ್ಲದೆ ನಿರ್ಭಯವಾಗಿ ಖಂಡಿಸುತ್ತಿದ್ದರು. ಈಗ ನಮ್ಮ ನಡುವೆ ಓಲೆ„ಕೆ ರಾಜಕಾರಣ ಮಾಡುವ ನಾಯಕರು ತುಂಬಿ ತುಳುಕುತ್ತಿದ್ದು,ಅಂಥವರು ಅಂಬಿಗರ ಚೌಡಯ್ಯನವರ ತತ್ವಾದರ್ಶಗಳನ್ನು ಜೀವನದಲ್ಲಿ ಅನುಕರಣೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಅಸಂಘಟಿತ ಸಮಾಜಗಳ ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತಿ ವರ್ಷ ಹಲವಾರು ಯೋಜನೆ ಜಾರಿಗೆ ತಂದಿವೆ. ರಾಜ್ಯದಲ್ಲಿ ಬಹುಸಂಖ್ಯಾತರಾಗಿರುವ ಗಂಗಾಮತಸ್ಥರು ಸಂಘಟಿತರಾಗಿ ಸರ್ಕಾರದಿಂದ ಸಿಗುವ ಪ್ರತಿಯೊಂದು ಸೌಲಭ್ಯಗಳ ಸದುಪಯೋಗ ಪಡೆದುಕೊಂಡು ಸಮಾಜದ ಮುಖ್ಯವಾಹಿನಿಗೆ ಬರಲು ಮುಂದಾಗಬೇಕು ಎಂದು ಹೇಳಿದರು. 

ಶಾಸಕ ಪ್ರಭು ಚವ್ಹಾಣ ಮಾತನಾಡಿ, ದೇಶದ ಅಖಂಡತೆಗೆ ಪ್ರತಿಯೊಬ್ಬರು ಶ್ರಮಿಸಲು ಮುಂದಾಗಬೇಕು. ಇಂದಿನ
ಯುಗದಲ್ಲಿನ ಯುವಕರು ಪಾಶ್ಚಾತೀಕರಣ ಸಂಸ್ಕೃತಿಗೆ ಮಾರು ಹೋಗದೆ ಸ್ವದೇಶಿ ಸಂಸ್ಕೃತಿಯನ್ನು ಅನುಕರಣೆ ಮಾಡಿಕೊಂಡು ದೇಶದ ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿ ಶ್ರೀಮಂತಗೋಳಿಸಲು ಮುಂದಾಗಬೇಕು ಎಂದು ಹೇಳಿದರು. 

ಇದಕ್ಕೂ ಮುನ್ನ ಪಟ್ಟಣದ ಬಸವೇಶ್ವರ ವೃತ್ತದ ಬಳಿ ನಿಜ ಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ತಹಶೀಲ್ದಾರ ಎಂ. ಚಂದ್ರಶೇಖರ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಶಾಲೆ ಕಾಲೇಜಿನ ವಿದ್ಯಾರ್ಥಿಗಳು,
ಪಟ್ಟಣ ವಿವಿಧ ಕಲಾ ತಂಡದ ಯುವಕರು ಹಾಗೂ ಮುಖಂಡರು ಮತ್ತು ಜನ ನಾಯಕರು ಭಾಗವಹಿಸಿದ್ದರು.

Advertisement

ಜಿಪಂ ಸದಸ್ಯ ಮಾರುತಿ ಚವ್ಹಾಣ, ಶಿಕ್ಷಣಾಧಿಕಾರಿ ಚವ್ಹಾಣಶೆಟ್ಟಿ, ಸಿಪಿಐ ರಮೇಶಕುಮಾರ ಮೈಲುರಕರ್‌
ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಶಾಲೆ ಕಾಲೇಜಿನ ಮಕ್ಕಳು ಹಾಗೂ ಪಟ್ಟಣದ ಮುಖಂಡರು
ಕಾರ್ಯಕ್ರಮದಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next