Advertisement

IPS Officer: ಎಡಿಜಿಪಿ ಪರ ನಿಂತ ಗೃಹ ಸಚಿವ ಪರಮೇಶ್ವರ್‌

01:56 AM Oct 01, 2024 | Team Udayavani |

ಬೆಂಗಳೂರು: ಐಪಿಎಸ್‌ ಅಧಿಕಾರಿ ಚಂದ್ರಶೇಖರ್‌ ಹೇಳಿಕೆ ಯನ್ನು ಸಮರ್ಥಿಸಿಕೊಂಡ ಗೃಹ ಸಚಿವ ಡಾ| ಜಿ. ಪರಮೇಶ್ವರ್‌, ನಮಗೆ ಓದುವುದಕ್ಕೆ, ಅರ್ಥಮಾಡಿ ಕೊಳ್ಳುವುದಕ್ಕೆ ಬಂದರೆ ಈ ರೀತಿಯ ಪ್ರಶ್ನೆಗಳೇ ಬರುವುದಿಲ್ಲ ಎಂದು ತೀಕ್ಷ್ಣವಾಗಿ ತಿರುಗೇಟು ನೀಡಿದರು.

Advertisement

ಹಿರಿಯ ಐಪಿಎಸ್‌ ಅಧಿಕಾರಿ ಏನು ಪದ ಬಳಕೆ ಮಾಡಿದ್ದಾರೆ ಎನ್ನುವುದನ್ನು ಸ್ವಲ್ಪ ಗಮನಿಸಲಿ. ಬರ್ನಾಡ್‌ ಷಾ ಆ ರೀತಿ ಹೇಳಿದ್ದಾ ರೆ ಅಂತಾ ಹೇಳಿದ್ದಾರೆಯೇ ಹೊರತು, ಕುಮಾರಸ್ವಾಮಿ ಅವರನ್ನು ಉಲ್ಲೇಖೀಸಿ ಹೇಳಿಲ್ಲವಲ್ಲ. ನಮಗೆ ಓದುವುದಕ್ಕೆ ಬರಬೇಕಲ್ಲವೇ? ಓದುವುದಕ್ಕೆ, ಅರ್ಥ ಮಾಡಿಕೊಳ್ಳಲು ಬಂದರೆ ಈ ರೀತಿಯ ಪ್ರಶ್ನೆಗಳು ಬರುವುದಿಲ್ಲ ಎಂದು ಹೇಳಿದರು.

ಬರ್ನಾಡ್‌ ಷಾ ಹೇಳಿರುವುದನ್ನು ಉಲ್ಲೇಖಿಸಿದ್ದಾರೆ. ಕುಮಾರಸ್ವಾಮಿ ಅವರು ತಮಗೇ ಅನ್ವಯಿಸುತ್ತದೆ ಎಂದು ಯಾಕೆ ಅಂದುಕೊಳ್ಳಬೇಕು? ಗಾದೆ ಮಾತು, ನಾಣ್ಣುಡಿ, ದೊಡ್ಡವರು ಹೇಳಿದ ಮಾತುಗಳನ್ನು ಒಂದು ಅರ್ಥದಲ್ಲಿ ಹೇಳುತ್ತಾರೆ. ನಮಗೆ ಹೇಗೆ ಬೇಕೋ ಹಾಗೆ ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ ಎಂದು ತಿಳಿಸಿದರು.

ಸ್ನೇಹಮಯಿ ಕೃಷ್ಣ ಇ.ಡಿ.ಗೆ ದೂರು ನೀಡಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಡಾ| ಪರಮೇಶ್ವರ್‌, ಇ.ಡಿ. ಅವರಿಗೆ ಮತ್ತೆ ದೂರು ಕೊಡಲಿ. ಅದೆಲ್ಲವನ್ನೂ ಕಾನೂನು ನೋಡಿಕೊಳ್ಳುತ್ತದೆ. ನಾವು ಪ್ರತಿಕ್ರಿಯಿಸಲು ಆಗುವುದಿಲ್ಲ ಎಂದರು.

ಮುಡಾ ಹಗರಣದಲ್ಲಿ ರಾಜ್ಯದ ಮುಖ್ಯಮಂತ್ರಿಗಳ ಹೆಸರು ಸೇರಿರುವ ಕಾರಣ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಅಷ್ಟೆ ಅಲ್ಲದೆ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್‌ ಅವರನ್ನು ಬದಲಾಯಿಸಿ ಖಡಕ್‌ ಅಧಿಕಾರಿಯನ್ನು ನಿಯೋಜಿಸಿ.
– ಎಚ್‌. ವಿಶ್ವನಾಥ್‌ , ವಿಧಾನ ಪರಿಷತ್‌ ಸದಸ್ಯ

Advertisement

ಎಡಿಜಿಪಿ ಚಂದ್ರಶೇಖರ್‌ ಬಿಳಿಯಾಗಿ ಸುಂದರವಾಗಿದ್ದಾರೆ. ನಮ್ಮ ಕುಮಾರಸ್ವಾಮಿ ಕಪ್ಪಗಿದ್ದಾರಲ್ವಾ, ಅದಕ್ಕೆ ಹಂದಿಗೆ ಹೋಲಿಕೆ ಮಾಡಿದ್ದಾರೆ. ಒಬ್ಬ ಅಧಿಕಾರಿ ಎಷ್ಟೇ ದೊಡ್ಡ ಹುದ್ದೆಯಲ್ಲಿರಲಿ ಶಾಸಕಾಂಗದ ಮುಂದೆ ಅವನು ಏನೂ ಅಲ್ಲ. ಅವನೊಬ್ಬ ನೌಕರ ಅಷ್ಟೇ .
– ಬಿ. ಸುರೇಶ್‌ ಗೌಡ , ಬಿಜೆಪಿ ಶಾಸಕ

ಎಡಿಜಿಪಿ ಅಮಾನತು ಮಾಡಿ: ಜೆಡಿಎಸ್‌ ಶಾಸಕರ ಒತ್ತಾಯ
ಬೆಂಗಳೂರು: ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಬಗ್ಗೆ ಐಪಿಎಸ್‌ ಅಧಿಕಾರಿ ಎಂ. ಚಂದ್ರಶೇಖರ್‌ ಅವಹೇಳನಕಾರಿ ಪದ ಬಳಕೆ ಮಾಡಿದ್ದು ಕೂಡಲೇ ಅಧಿಕಾರಿಯನ್ನು ಭಾರತೀಯ ಸೇವೆಯಿಂದ ಅಮಾನತುಗೊಳಿಸಿ ಶಿಸ್ತು ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ರಾಜ್ಯ ಸರಕಾರ ಶಿಫಾರಸು ಮಾಡಬೇಕು ಎಂದು ಜೆಡಿಎಸ್‌ ಶಾಸಕರು ಒತ್ತಾಯಿಸಿದರು.

ಈ ಸಂಬಂಧ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್‌ ಬಾಬು ನೇತೃತ್ವದಲ್ಲಿ ಸೋಮವಾರ ವಿಧಾನಸೌಧದಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರನ್ನು ಭೇಟಿಯಾದ ಜೆಡಿಎಸ್‌ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಸದಸ್ಯರ ನಿಯೋಗವು ಐಪಿಎಸ್‌ ಅಧಿಕಾರಿ ಚಂದ್ರಶೇಖರ್‌ ಅವರು ಒಬ್ಬ ಚುನಾಯಿತ ಪ್ರತಿನಿಧಿಯಾದ ಕುಮಾರಸ್ವಾಮಿ ವಿರುದ್ಧ ಅಸಭ್ಯ ಮತ್ತು ಅವಾಚ್ಯ ಪದಗಳನ್ನು ಬಳಸಿ ಪತ್ರವನ್ನು ಕಳುಹಿಸಿರುವುದು ಮತ್ತು ಆ ಪತ್ರವನ್ನು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವುದು ಭಾರತೀಯ ಆಡಳಿತಾತ್ಮಕ ಸೇವಾ ನಿಯಮಗಳಿಗೆ ವಿರುದ್ಧವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next