Advertisement

ಬೆಳಗಾವಿಗೆ ಬಂದವ್ರು ಇಂಡೋನೇಷ್ಯಾದವ್ರು

03:38 PM Apr 02, 2020 | Suhan S |

ಬೆಳಗಾವಿ: ದೆಹಲಿಯ ನಿಜಾಮುದ್ದಿನ್‌ ಜಮಾತ್‌ ಮರ್ಕಜ್‌ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ, ಬೆಳಗಾವಿಗೆ ಬಂದು, ಸದ್ಯ ಹೋಮ್‌ ಕ್ವಾರಂಟೈನ್‌ ನಲ್ಲಿರುವ ಹತ್ತೂ ಜನ ಇಂಡೋನೇಷಿಯಾ ಮೂಲದವರಾಗಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ| ಬಿ.ಎನ್‌. ತುಕ್ಕಾರ ತಿಳಿಸಿದ್ದಾರೆ.

Advertisement

ದೆಹಲಿಯಲ್ಲಿ ನಡೆದ ಮರ್ಕಜ್‌ನಲ್ಲಿ ಪಾಲ್ಗೊಂಡು ಬೆಳಗಾವಿಗೆ ಬಂದಿರುವ ಇಂಡೋನೇಷಿಯಾ ಮೂಲದ ಈ 10 ಜನರ ಹೋಮ್‌ ಕ್ವಾರಂಟೈನ್‌ ಅವಧಿ ಮುಕ್ತಾಯವಾಗಿದೆ. ಎಲ್ಲರ ವೈದ್ಯಕೀಯ ತಪಾಸಣೆ ನಡೆಸಲಾಗಿದ್ದು, ಇವರಲ್ಲಿ ಕೋವಿಡ್‌ -19ರ ಲಕ್ಷಣಗಳು ಕಂಡು ಬಂದಿಲ್ಲ ಎಂದು ವಿವರಿಸಿದ್ದಾರೆ.

ಇಂಡೋನೇಷಿಯಾ ಮೂಲದ ಈ 10 ಜನರು ಧರ್ಮ ಪ್ರಚಾರಕ್ಕಾಗಿ ಬೆಳಗಾವಿಗೆ ಆಗಮಿಸಿದ್ದಾರೆ. ಎಲ್ಲರ ಗಂಟಲು ದ್ರವ ಮಾದರಿಯನ್ನು ತಪಾಸಣೆಗಾಗಿ ಕಳುಹಿಸಲಾಗಿದೆ. ಸದ್ಯ ಈ ಗುಂಪಿನಲ್ಲಿ ಯಾವುದೇ ರೋಗದ ಲಕ್ಷಣಗಳಿಲ್ಲ. ಎಲ್ಲರೂ ನಗರದ ಮಸೀದಿಯೊಂದರಲ್ಲಿ ವಾಸವಾಗಿದ್ದಾರೆ. ನಿತ್ಯ ವೈದ್ಯರು ಅವರ ಆರೋಗ್ಯದ ಬಗ್ಗೆ ನಿಗಾ ಇಟ್ಟಿದ್ದಾರೆ. ಸದ್ಯದ ಮಟ್ಟಿಗೆ ಅಂತೂ ಯಾವುದೇ ಕೋವಿಡ್‌-19ರ ಲಕ್ಷಣಗಳಿಲ್ಲ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.

ಬೆಂಗಳೂರಿನ ಧಾರ್ಮಿಕ ಮುಖಂಡರ ಸೂಚನೆಗೆ ಮೇರೆಗೆ ಧರ್ಮ ಪ್ರಚಾರಕ್ಕಾಗಿ ಈ ಎಲ್ಲರೂ ಬೆಳಗಾವಿಗೆ ಆಗಮಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಲಾಕ್‌ಡೌನ್‌ ಆದೇಶ ನೀಡಿದಾಗಿನಿಂದ ಬೆಳಗಾವಿಯಲ್ಲಿಯೇ ವಾಸವಾಗಿದ್ದಾರೆ. ಇವರ ಸಂಪರ್ಕದಲ್ಲಿ ಯಾರು ಬಂದಿದ್ದು, ಯಾವಾಗ ಬಂದಿದ್ದರು ಎಂಬುದರ ಬಗ್ಗೆ ಆರೋಗ್ಯ ಇಲಾಖೆ ಮಾಹಿತಿ ಕಲೆ ಹಾಕುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next