ಬೆಂಗಳೂರು:ಕೇಂದ್ರ ಬಜೆಟ್‌ನಿಂದ ರಾಜ್ಯದ ಜನರಿಗೆ ಚೆಂಬು ಸಿಕ್ಕಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಎರಡು ವರ್ಷಗಳಿಂದ ಲಕ್ಷಾಂತರ ಮಂದಿ ಮೃತಪಟ್ಟಿದ್ದಾರೆ. ಕೋಟ್ಯಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಜನರಿಗೆ ಏನಾದರೂ ಕೊಡುಗೆ ಸಿಗುತ್ತದೆ ಎಂಬ ನಿರೀಕ್ಷೆ ಯಿತ್ತು. ಆದರೆ, ಕೇಂದ್ರ ಸರ್ಕಾರ ಬಡವರು ಹಾಗೂಜನಸಾಮಾನ್ಯರ ಪರ ಇಲ್ಲ ಎಂಬುದು ಸಾಬೀತಾಗಿದೆ ಎಂದು ಹೇಳಿದ್ದಾರೆ.
ತೆರಿಗೆದಾರರಿಗೆ ಏನೂ ರಿಲೀಫ್ ಇಲ್ಲ. ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ಮುಂದುವರಿಸುವ ಬಗ್ಗೆ ಪ್ರಸ್ತಾಪವಿಲ್ಲ. ಮುಂದೆಯೂ ಸಿಗುವ ಖಾತರಿಯೂ ಇಲ್ಲ . ಮೋದಿ ಮುಂದುವರಿದರೆ ಚೆಂಬೇ ಗತಿ. ಕೇಂದ್ರ ಬಜೆಟ್‌ನಲ್ಲೂ ಜನರಿಗೆ ಅದೇ ಸಿಕ್ಕಿದೆ ಎಂದು ಹೇಳಿದರು.
ಇದನ್ನೂ ಓದಿ:ರಾಜ್ಯದ ಕೋವಿಡ್ ಪ್ರಕರಣಗಳಲ್ಲಿ ಗಣನೀಯ ಇಳಿಕೆ : ಪಾಸಿಟಿವಿಟಿ ದರ 13.45%
ಎಂಟು ಲಕ್ಷ ಕೋಟಿ ದೊಡ್ಡವರ ಸಾಲ ಮನ್ನಾ ಮಾಡಿದ್ದಾರೆ. ಆದರೆ, ಬಜೆಟ್‌ನಲ್ಲಿ ರೈತರು,ಬಡವರಿಗೆ ಹೊಸ ಕಾರ್ಯಕ್ರಮವಿಲ್ಲ. ಬಿಪಿಎಲ್ ಕಾರ್ಡ್ ನವರಿಗೆ ಸಬ್ಸಿಡಿ ಕೊಡಬಹುದಿತ್ತು.
ಶ್ರೀಮಂತರ ತೆರಿಗೆ ಕಡಿತ ಮಾಡಲಾಗಿದೆ. ಬಡವರ ಮೇಲೆ ತೆರಿಗೆ ಬಾರ ಮುಂದುವರಿಸಲಾಗಿದೆ. ಇವರು ಯಾರ ಪರ ಎಂಬುದು ಗೊತ್ತಾಗಿದೆ ಎಂದರು.