Advertisement
ಕನಕಗಿರಿಯಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಿಮ್ಮ ಧ್ಯಾನ ವಿಕಾಸ್, ಮಕ್ಕಳ ಶಿಕ್ಷಣ, ನಿಮ್ಮ ಸಮಸ್ಯೆಯ ಕಡೆ ಇರಲಿ. ನಿಮ್ಮ ನಾಯಕನು ಅಭಿವೃದ್ಧಿ ಮಾಡಲಿಲ್ಲ ಎಂದರೆ ಅವರು ನಾಯಕರಲ್ಲ. ಸರಕಾರದ ಧರ್ಮ ಜನರ ಭವಿಷ್ಯ ಕಟ್ಟಬೇಕು. ಜನರ ವಿಕಾಸ, ಅಭಿವೃದ್ಧಿ ಮಾಡಬೇಕು. ನಿಮ್ಮ ಏಳ್ಗೆ ಬಗ್ಗೆ, ನಿಮ್ಮ ರಾಜ್ಯದ ಬಗ್ಗೆ ಜಾಗೃತರಾಗಬೇಕು. ಮತ ನೀಡುವ ಮೊದಲು ಬಿಜೆಪಿ ಏನು ಮಾಡಿದೆ, ಕಾಂಗ್ರೆಸ್ ಏನು ಮಾಡಿದೆ, ಮುಂದೆ ಏನು ಮಾಡಬೇಕು ಎಂದು ಯೋಚಿಸಿ ಮತ ನೀಡಿ. ಪೂರ್ಣ ಬಹುಮತದ ಸರಕಾರ ಕೊಡಿ. ದುರ್ಬಲ ಸರಕಾರ ಕೊಡಬೇಡಿ. ಅವರು ಸರಕಾರ ಉಳಿಸಿಕೊಳ್ಳುವುದರಲ್ಲೇ ಕಾಲಹರಣ ಮಾಡುತ್ತಾರೆ ಎಂದರು.
ದೇಶದ ರೈತ ಪ್ರತೀ ದಿನದ ಆದಾಯ 27 ರೂ. ಇದ್ದರೆ, ದೇಶದ ಪ್ರಧಾನಿ ಸ್ನೇಹಿತನ ಆದಾಯ ದಿನಕ್ಕೆ 16 ಸಾವಿರ ಕೋಟಿ ಇದೆ. ಜನಪರ ಕೆಲಸ ಮಾಡುವ ಯೋಜನೆಗಳನ್ನು ಮೋದಿ ತನ್ನ ಸ್ನೇಹಿತರಿಗೆ ಕೊಟ್ಟಿದ್ದಾರೆ. ಸಣ್ಣ, ಮಧ್ಯಮ ಕೈಗಾರಿಕೆ ಮುಚ್ಚಿದ್ದಾರೆ. ಬಿಜೆಪಿ ನೇತಾರರು, ಪ್ರಧಾನಿ, ಗೃಹ ಸಚಿವ, ಸಿಎಂ ಅವರು ನಿಮ್ಮ ಬಳಿ ಬಂದು ತಮ್ಮ ಭಾಷಣ ಮಾಡಿ ಹೋಗುತ್ತಾರೆ. ಆದರೆ ನಿಮ್ಮ ಸಮಸ್ಯೆ ಕೇಳಲು ಬರಲ್ಲ. ಅವರು ಶಾಲೆ, ಆಸ್ಪತ್ರೆ, ಮಹಿಳೆ, ಬೆಲೆ ಏರಿಕೆಯ ಬಗ್ಗೆ ಮಾತನಾಡಲ್ಲ. ಪ್ರಧಾನಿಯೂ ವಿಪಕ್ಷಗಳು ತಮಗೆ ಟೀಕೆ ಮಾಡಿರುವ ಬಗ್ಗೆ ಪಟ್ಟಿ ಮಾಡಿ ಹೇಳುತ್ತಾರೆ. ಅಭಿವೃದ್ಧಿ ಬಗ್ಗೆ ಮಾತನಾಡಲ್ಲ. ಧರ್ಮ, ಜಾತಿ ಬಗ್ಗೆ ಮಾತನಾಡುತ್ತಾರೆ. ಇದರಿಂದ ಜನರ ಹೊಟ್ಟೆ ತುಂಬೋದಿಲ್ಲ ಎಂದರು.