Advertisement
ಶುದ್ಧ ನೀರಿನ ವ್ಯವಸ್ಥೆ ಇಲ್ಲದ್ದರಿಂದ ಚರಂಡಿ ನೀರು ಸೇರಿದ ನದಿಯಿಂದ ಮತ್ತೆ ಲಿಫ್ಟ್ ಮಾಡಿದ ನೀರನ್ನೇ ಶುದ್ಧೀಕರಿಸಿ ಬಿಡುತ್ತಿರುವುದರಿಂದ ಅನಿವಾರ್ಯವಾಗಿ ಸಾರ್ವಜನಿಕರು ಅದೇ ನೀರು ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.
Related Articles
Advertisement
ಚರಂಡಿ ನೀರಿನ ಸಂಸ್ಕರಣಾ ಘಟಕ ಎಲ್ಲಿ?: ಯಾದಗಿರಿ ನಗರಕ್ಕೆ ಶುದ್ಧ ಕುಡಿವ ನೀರಿನ ಘಟಕಗಳಿಲ್ಲ. ಜೊತೆಗೆ ನಗರದಿಂದ ಹೊರಹೋಗುವ ಚರಂಡಿ ನೀರು ಸಂಸ್ಕರಿಸಲು ಯಾವುದೇ ಸಂಸ್ಕರಣಾ ಘಟಕಗಳು ಇಲ್ಲದ್ದರಿಂದ ಮಲೀನ ನೀರು ಜನರ ಒಡಲು ಸೇರಲು ಇಲ್ಲಿನ ನಗರಾಡಳಿತ- ಜಿಲ್ಲಾಡಳಿತಗಳ ನಿರ್ಲಕ್ಷ್ಯವೇ ಕಾರಣವೆಂದು ಸಾರ್ವಜನಿಕರು ದೂರುತ್ತಿದ್ದಾರೆ.
ಜನರಿಗೆ ಕುಡಿಯಲು ನೀರು ಸರಬರಾಜು ಮಾಡುವ ಶುದ್ಧೀಕರಣ ಘಟಕ ಹಳ್ಳದ ಕೆಳಗಡೆ ಇರುವುದರಿಂದ ನಗರದ ಹೃದಯ ಭಾಗದಲ್ಲಿರುವ ಹಳ್ಳ ಸೇರಿದ ಚರಂಡಿ ಮಲೀನ ನೀರು ತನ್ನಿಂದ ತಾನೇ ನೀರು ಶುದ್ಧೀಕರಣ ಘಟಕ ಸೇರುತ್ತದೆ. ಚರಂಡಿ ನೀರು ನೇರವಾಗಿ ಹಳ್ಳದಿಂದ ಭೀಮಾ ನದಿಗೆ ಹರಿಯುತ್ತಿದ್ದರಿಂದ ಹಳ್ಳಕ್ಕೆ ಸೇರುವ ಮುನ್ನ ಚರಂಡಿ ನೀರು ಸಂಸ್ಕರಿಸುವ ಘಟಕ ಇಲ್ಲದಿರುವುದರಿಂದ ಮಲೀನ ನೀರು ಎಷ್ಟು ಬಾರಿ ಶುದ್ಧೀಕರಿಸಿದರೂ ಅದರಿಂದ ಉತ್ತಮ ನೀರು ಕೊಡಲು ಸಾಧ್ಯವಿಲ್ಲ ಎನ್ನುವುದು ಜನರ ಅಭಿಪ್ರಾಯ.
ನಗರದಲ್ಲಿ ಹರಿಯುವ ಚರಂಡಿ ನೀರು ಒಂದೆಡೆ ಸಂಗ್ರಹಿಸಿ ನೀರು ಪುನರ್ ಬಳಕೆಗೆ ಯೋಗ್ಯವನ್ನಾಗಿ ಮಾಡಬೇಕು. ಆಗ ಮಾತ್ರ ಚರಂಡಿ ನೀರು ಭೀಮಾ ನದಿಗೆ ನೇರವಾಗಿ ಸೇರುವುದಿಲ್ಲ. ವಾರಕ್ಕೊಮ್ಮೆ ನಗರಸಭೆ ವತಿಯಿಂದ ಚರಂಡಿ ಸ್ವತ್ಛಗೊಳಿಸಬೇಕು. ಮಳೆ ಬಂದಾಗ ಚರಂಡಿ ನೀರಿನೊಂದಿಗೆ ಘನ ತ್ಯಾಜ್ಯವೂ ಭೀಮಾ ನದಿ ಸೇರುತ್ತದೆ. ಅದೇ ಮಲೀನ ನೀರು ಮತ್ತೆ ನಗರಕ್ಕೆ ಸರಬರಾಜು ಆಗುತ್ತಿರುವುದು ಕಳವಳಕಾರಿ. -ಉಮೇಶ ಮುದ್ನಾಳ, ಜಿಲ್ಲಾಧ್ಯಕ್ಷರು, ಟೋಕರಿ ಕೋಲಿ ಸಮಾಜ, ಯಾದಗಿರಿ
-ಮಹೇಶ ಕಲಾಲ