Advertisement

ಹೈಕೋರ್ಟ್‌ನಲ್ಲಿ ಬಾಕಿ ಪ್ರಕರಣ ಹೆಚ್ಚಳಕ್ಕೆ ನ್ಯಾ|ವೀರಪ್ಪ ಕಳವಳ

08:40 AM Sep 25, 2022 | Team Udayavani |

ಕಲಬುರಗಿ: ಈಚೆಗೆ ರಾಜ್ಯದ ಹೃಕೋರ್ಟ್‌ನಲ್ಲಿ ಇತ್ಯರ್ಥಗೊಳ್ಳುವ ಪ್ರಕರಣಗಳು ಹೆಚ್ಚಾಗಿ ಬಾಕಿ ಉಳಿಯುತ್ತಿವೆ. ಈ ನಿಟ್ಟಿನಲ್ಲಿ ಇನ್ನಷ್ಟು ಗಂಭೀರ ಪ್ರಯತ್ನ ನಡೆಯಬೇಕಿದೆ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ಹೈಕೋರ್ಟ್‌ ನ್ಯಾಯಮೂರ್ತಿ ಬಿ. ವೀರಪ್ಪ ಕಳವಳ ವ್ಯಕ್ತಪಡಿಸಿದರು.

Advertisement

ನಗರದಲ್ಲಿ ಶನಿವಾರ ಜಿಲ್ಲಾ ಕೋರ್ಟ್‌ ಸಂಕೀರ್ಣದಲ್ಲಿ ನ್ಯಾಯವಾದಿಗಳ ಸಂಘ ಆಯೋಜಿಸಿದ್ದ 50ವರ್ಷಗಳ ಕಾಲ ವಕೀಲ ವೃತ್ತಿ ಮಾಡಿದ ಹಿರಿಯರ ವಕೀಲರಿಗೆ ಸನ್ಮಾನಿಸಿ ಅವರು ಮಾತನಾಡಿದರು.

ಕಲಬುರಗಿ ಹೈಕೋರ್ಟ್‌ ಪೀಠ ಆರಂಭವಾದಾಗ ಐದು ಸಾವಿರ ಪ್ರಕರಣಗಳು ಇದ್ದವು. ಈಗ 25ಸಾವಿರ ಪ್ರಕರಣಗಳು ಇವೆ. ಇಷ್ಟೊಂದು ಪ್ರಕರಣಗಳು ಇತ್ಯರ್ಥಗೊಳ್ಳಬೇಕಾದರೆ, ನ್ಯಾಯಾಧೀಶರು, ವಕೀಲರು ಎಲ್ಲರೂ ಸೇರಿಕೊಂಡು ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡಬೇಕಾಗುತ್ತದೆ. ಇದಕ್ಕೆ ಇಚ್ಛಾಶಕ್ತಿಯೂ ಬೇಕು. ಈ ಭಾಗದಲ್ಲಿನ ಪರಿಸರವೂ ಇದಕ್ಕೆ ಕಾರಣವಾಗುತ್ತದೆ. ಎಲ್ಲವನ್ನು ತೂಗಿಸಿಕೊಂಡು ಹೋದಾಗ ಈ ಭಾಗದಲ್ಲಿನ ಪ್ರಕರಣಗಳನ್ನು ಒಂದು ಚೌಕಟ್ಟಿನಲ್ಲಿ ವಿಲೇವಾರಿ ಮಾಡಬಹುದು ಎಂದರು.

ಈಗ ವಿಮಾನವೂ ಆಗಿದೆ: ಹಿಂದೆ ಕಲಬುರಗಿಗೆ ಬರಬೇಕೆಂದರೆ ಬೆಂಗಳೂರಿನಿಂದ ಹೈದ್ರಾಬಾದ್‌ ವರೆಗೆ ವಿಮಾನದಲ್ಲಿ ಬಂದು, ಅಲ್ಲಿಂದ ರಸ್ತೆ ಮೂಲಕ ಬರಬೇಕಿತ್ತು. ಇದೀಗ ಕೇವಲ ಒಂದು ಗಂಟೆಯಲ್ಲಿ ಬೆಂಗಳೂರಿನಿಂದ ವಿಮಾನದ ಮೂಲಕ ಕಲಬುರಗಿಗೆ ಬರಬಹುದು. ಸರ್ಕಾರ ಇಷ್ಟೊಂದು ಸವಲತ್ತುಗಳನ್ನು ಒದಗಿಸಿಕೊಟ್ಟಿದೆ. ಹೀಗಾಗಿ, ನ್ಯಾಯದಾನ ಮಾಡುವಲ್ಲಿ ವಿಳಂಬವಾಗದಂತೆ ನೋಡಿ ಕೊಳ್ಳಬೇಕಿದೆ. ಕಾಲಮಿತಿಯಲ್ಲಿ ನ್ಯಾಯದಾನ ಸಿಕ್ಕರೆ ಕಕ್ಷಿದಾರರಿಗೂ ಅನುಕೂಲವಾಗುತ್ತದೆ ಎಂದರು.

ಹೈಕೋರ್ಟ್‌ ನ್ಯಾಯಮೂರ್ತಿ ಗಳಾದ ಎಚ್‌.ಬಿ.ಪ್ರಭಾಕರ ಶಾಸ್ತ್ರಿ, ಬಿ. ಶ್ಯಾಮಪ್ರಸಾದ್‌, ಪಿ.ಎಸ್‌. ದಿನೇಶ್‌ ಕುಮಾರ್‌, ಎಚ್‌.ಟಿ. ನರೇಂದ್ರಪ್ರಸಾದ್‌, ಶಿವಶಂಕರ ಅಮರಣ್ಣವರ, ಅಶೋಕ ಎಸ್‌. ಕಿಣಗಿ, ಕರ್ನಾಟಕ ವಕೀಲರ ಪರಿಷತ್‌ ಅಧ್ಯಕ್ಷ ಕಾಶಿನಾಥ ಮೋತಕಪಲ್ಲಿ, ಜಿಲ್ಲಾ ನ್ಯಾಯವಾದಿಗಳ ಸಂಘದ 50ವರ್ಷ ವಕೀಲ ವೃತ್ತಿ ಪೂರೈಸಿದ ಹಿರಿಯರಿಗೆ ಸನ್ಮಾನ ನ್ಯಾಯವಾದಿಗಳಾಗಿ ವೃತ್ತಿಯಲ್ಲಿ 50 ವರ್ಷ ಪೂರೈಸಿದ ಹಿರಿಯ ವಕೀಲರಾದ ಗುರುಲಿಂಗಪ್ಪ ಮಹಾಗಾಂವ, ಸಿ.ವಿ. ಮಾಲಿಪಾಟೀಲ, ಬಿ.ಡಿ.ಹಂಗರಕಿ, ಮೋಹನರಾವ್‌ ಕಕ್ಕೇರಿ, ಡಿ.ಎಸ್‌. ಪಾಟೀಲ ಅವರನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಅರಾಧೆ ಸನ್ಮಾನಿಸಿದರು.

Advertisement

ಯುವ ವಕೀಲರು ಪ್ರತಿಜ್ಞೆ ಮಾಡಲಿ ಈ ಭಾಗದಲ್ಲಿನ ನ್ಯಾಯದಾನ ಮತ್ತು ಪ್ರಕರಣಗಳ ಇತ್ಯರ್ಥಕ್ಕೆ ಯುವ ವಕೀಲರು ಪ್ರತಿಜ್ಞೆ ಮಾಡಬೇಕು. ಆಗಲೇ ಪ್ರಕರಣಗಳು ವಿಲೇವಾರಿ ವೇಗ ಪಡೆಯುತ್ತದೆ. ಅದೂ ಅಲ್ಲದೇ, ಕೆಲಸದ ಸಮಯವನ್ನು ಹೆಚ್ಚಳ ಮಾಡಬೇಕು. ಇದರಿಂದ ಕಕ್ಷಿದಾರರಿಗೆ ಸಮಯಕ್ಕೆ ಸರಿಯಾಗಿ ನ್ಯಾಯ ಸಿಗಲು ಸಾಧ್ಯವಿದೆ ಎಂದು ನ್ಯಾಯಮೂರ್ತಿ ಬಿ. ವೀರಪ್ಪ ಹೇಳಿದರು.

ಬೆಳಗ್ಗೆ 10:30ರಿಂದ ಮಧ್ಯಾಹ್ನ 1:30ರವರೆಗೆ, ಮಧ್ಯಾಹ್ನ 2:30ರಿಂದ ಸಂಜೆ 4:45ರ ವರೆಗೆ ಕೋರ್ಟ್‌ ಕಲಾಪಗಳಲ್ಲಿ ಭಾಗವಹಿಸುವ ಪ್ರತಿಜ್ಞೆ ಮಾಡಬೇಕು. ಬೆಂಗಳೂರಿನಲ್ಲಿ ನಾವು ಬೆಳಗ್ಗೆ ನ್ಯಾಯಾಲಯಕ್ಕೆ ಬಂದರೆ ರಾತ್ರಿ 8:30ಕ್ಕೆ ವಾಪಸ್‌ ಮನೆಗೆ ತೆರಳುತ್ತೇವೆ. ಹೀಗಾಗಿ, ವಕೀಲರು ಕರ್ತವ್ಯಪ್ರಜ್ಞೆ ಬೆಳೆಸಿಕೊಳ್ಳಬೇಕು. ಉತ್ತಮವಾಗಿ ವಾದ ಮಾಡಿ ಪ್ರಕರಣಗಳನ್ನು ಗೆದ್ದರೆ ಮಾತ್ರವೇ ಉತ್ತಮ ಜೀವನ ನಡೆಸಲು ಮತ್ತು ನ್ಯಾಯಮೂರ್ತಿಗಳಾಗಲು ಸಾಧ್ಯ. ಈಗ ನಮ್ಮಲ್ಲಿ ಕೇವಲ ಶೇ. 60ರಷ್ಟು ಮಾತ್ರವೇ ಉತ್ತಮ ವಕೀಲರು ಸಿಗುತ್ತಾರೆ. ಆ ನಿಟ್ಟಿನಲ್ಲಿ ಎಲ್ಲರ ಪ್ರಯತ್ನಗಳು ನಿರಂತರವಾಗಿ ನಡೆಯಬೇಕು ಎಂದರು.

ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಏರ್ಪಡಿಸಿದ್ದ ಹಿರಿಯ ವಕೀಲರ ಸನ್ಮಾನ ಕಾರ್ಯಕ್ರಮದಲ್ಲಿ 50 ವರ್ಷ ವೃತ್ತಿ ಪೂರೈಸಿದ ವಕೀಲರನ್ನು ನ್ಯಾಯಮೂರ್ತಿ ವಿ. ವೀರಪ್ಪ ಸನ್ಮಾನಿಸಿದರು. ಅಧ್ಯಕ್ಷ ರಾಜಕುಮಾರ ಕಡಗಂಚಿ, ಪ್ರಧಾನ ಕಾರ್ಯದರ್ಶಿ ಪಿ.ಎನ್‌. ಕಪನೂರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next