Advertisement

ಶಿಖರ ಏರುವುದು ಸುಲಭವಲ

04:19 PM Jun 12, 2018 | |

ಸೊರಬ: ಸಾಧನೆಗೆ ಶಿಕ್ಷಣ, ಸೌಲಭ್ಯಗಳು ಮುಖ್ಯವಾಗುವುದಿಲ್ಲ. ಗುರಿ ಸಾಧಿಸಬೇಕೆಂಬ ಛಲವಿದ್ದಲ್ಲಿ ಅಗತ್ಯ ಸೌಲತ್ತುಗಳನ್ನು ದೊರಕಿಸುವ ಹೃದಯ ವೈಶಾಲ್ಯ ಇರುವವರು ಸಮಾಜದಲ್ಲಿ ಇರುತ್ತಾರೆ. ಇಂತಹವರ ನೆರವು
ಸಾಧಕರಿಗೆ ಬೆನ್ನೆಲಬಾಗಿ ನಿಲ್ಲುತ್ತದೆ ಎಂದು ಮೌಂಟ್‌ ಎವರೆಸ್ಟ್‌ ಶಿಖರರೋಹಿ ವಿಕ್ರಮ್‌ ಹೊನ್ನಾಳಿ ಹೇಳಿದರು.

Advertisement

ತಾಲೂಕಿನ ಆನವಟ್ಟಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಜಯಪ್ಪ ಸಭಾಂಗಣದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರೊಂದಿಗೆ ತಮ್ಮ ಶಿಖರಾರೋಹಣದಲ್ಲಿ ಆದ ಅನುಭವಗಳನ್ನು ಹಂಚಿಕೊಂಡು ಅವರು ಮಾತನಾಡಿದರು.

ಮೌಂಟ್‌ ಎವರೆಸ್ಟ್‌ನಂತ ಶಿಖರ ಏರುವುದು ಸುಲಭದ ಮಾತಲ್ಲ. ಕಣ್ಣು ಸುತ್ತ ನೋಡಿದಷ್ಟು ದೂರ ಹಿಮದಿಂದ
ಆವೃತವಾದ ಶಿಖರಗಳು, ಕೊರೆಯುವ ಚಳಿ, ಕುಡಿಯಲು ನೀರು ಬೇಕೆಂದರೂ ಮಂಜನ್ನೇ ಕರಗಿಸಿ ಕುಡಿಯಬೇಕಾದ ಅನಿವಾರ್ಯತೆ ಇರುತ್ತದೆ ಎಂದರು.

 ಅಗತ್ಯವಿದ್ದಷ್ಟು ಮಾತ್ರ ಆಹಾರ ಸೇವನೆ ಹಾಗೂ ಪ್ರಕೃತಿಯೊಂದಿಗೆ ಹೋರಾಟ ಮಾಡಿ ಹಳ್ಳಕೊಳ್ಳ, ಪ್ರಪಾತಗಳನ್ನು ದಾಟಿ ಶಿಖರ ಏರುವುದು ಅತ್ಯಂತ ಕಷ್ಟಕರ. ಇಂತಹ ಅನುಭವಗಳೊಂದಿಗೆ ನಾನು ಶಿಖರದ ತುದಿಗೇರಿ ರಾಷ್ಟ್ರದ ಹಾಗೂ ಕನ್ನಡ ನಾಡಿನ ಒಬ್ಬ ಪ್ರತಿನಿ ಯಾಗಿ ಕನ್ನಡದ ಮತ್ತು ರಾಷ್ಟ್ರ ಧ್ವಜವನ್ನು ಹಾರಿಸಿದ್ದು ನನ್ನ ಮನಸ್ಸಿನಲ್ಲಿ ಬಹಳ ಉಲ್ಲಾಸ ನೀಡಿತು ಎಂದು ಹೇಳಿದರು.

ಹಿಮಗಳಿಂದ ಆವೃತವಾದ ಗಿರಿ ಪರ್ವತಗಳನ್ನು ಏರುವ ಮೊದಲು ನಮಗೆ ಅಗತ್ಯ ತರಬೇತಿ ನೀಡಿದ್ದಲ್ಲದೆ, ಸಲಕರಣೆಯನ್ನು ಸಹ ಒದಗಿಸಲಾಗಿತ್ತು. ಏ. 11ರಂದು ಶಿಖರಾರೋಹಣವನ್ನು ಆರಂಭಿಸಿದ ನಾವು, ಮೇ 17ಕ್ಕೆ
ಹಿಂದುರಿಗಿದೇವು. ಶಿಖರ ಏರುವ ಸಂದರ್ಭದಲ್ಲಿ ಒಂದು ಮತ್ತು ಎರಡನೇ ಹಂತ ದಾಟುವಾಗ ಕೊಂಚ ನಿರಳರಾಗಿದ್ದ ನಾವು, ಮೂರನೇ ಹಂತಕ್ಕೆ ಪಾದಾರ್ಪಣೆ ಮಾಡಿದಾಗ ಪ್ರಕೃತಿಯ ಪ್ರತಿರೋಧ ಎದುರಿಸಬೇಕಾಯಿತು.

Advertisement

ಗಿರಿ ಶಿಖರ ಏರಿದಂತೆ ಆಮ್ಲಜನಕದ ಕೊರತೆಯಿಂದಾಗಿ ಉಸಿರಾಡಲು ತೊಂದರೆಯಾದಾಗ ಐದು ಕೆ.ಜಿ. ತೂಕ
ಆಕ್ಸಿಜನ್‌ ಸಿಲಿಂಡರ್‌ ಆಳವಡಿಸಿಕೊಂಡು ಉಸಿರಾಟದ ತೊಂದರೆಯನ್ನು ನಿವಾರಿಸಿಕೊಳ್ಳುವಂತಾಯಿತು ಎಂದರು.
 
ಆಳದ ಪ್ರಪಾತಗಳನ್ನು ದಾಟುವಾಗ ಶೇರ್ಪಗಳ ಸಹಾಯದಿಂದ ದಾಟಿದೆವು. ಶಿಖರದ ಮೇಲೇರುತ್ತಿದ್ದಂತೆ ಅಲ್ಲಲ್ಲಿ ಕೊಳ್ಳಗಳಲ್ಲಿ ನಾಲ್ಕಾರು ಪರ್ವತಾರೋಹಿಗಳ ಶವವನ್ನು ಕಂಡಾಗ ಎದೆ ನಡುಗಿತು. ಆದರೂ ಗುರಿ ಮುಟ್ಟಲೇ ಬೇಕೆಂಬ ಛಲದಿಂದ ನಾವಿದ್ದ 25 ಜನರ ತಂಡದಲ್ಲಿ 8 ಜನ ಮಾತ್ರ ಶಿಖರದ ತುದಿಗೇರಲು ಸಾಧ್ಯವಾಯಿತು ಎಂದು
ಹೇಳಿದರು.

 ಶಿಖರದ ತುದಿಗೆ ಪಾದಾರ್ಪಣೆ ಮಾಡುತ್ತಿದ್ದಂತೆ ಮೈಯಲ್ಲಾ ರೋಮಾಂಚನ, ವಿಶ್ವದ ಅತ್ಯಂತ ಎತ್ತರದ ಪ್ರದೇಶ ಮುಟ್ಟಿದ ಹೆಮ್ಮೆ. ಕನ್ನಡ ನಾಡಿನ ಹಾಗೂ ದೇಶದ ಧ್ವಜ ಹಾರಿಸಿದ್ದು ಪದಗಳಲ್ಲಿ ಹೇಳಲು ಅಸಾಧ್ಯ ಎಂದು ತಮ್ಮ ಪರ್ವತಾರೋಹಣ ಸಂದರ್ಭದಲ್ಲಾದ ಅನುಭವಗಳನ್ನು ಹಂಚಿಕೊಂಡರು. 

ಈ ವೇಳೆ ಮೌಂಟ್‌ ಶಿಖರ ಏರಿದ ಪ್ರಥಮ ಪರ್ವತಾರೋಹಿಗಳಾದ ಥೇನ್‌ ಸಿಂಗ್‌ ಮತ್ತು ಎಡ್ಮಂಡ್‌ ಹಿಲ್ಲರಿ ಸ್ನೇಹದ ಬಗ್ಗೆ ಸ್ಮರಿಸಿ, ಇವರಲ್ಲಿ ಇದುವರೆಗೂ ಪ್ರಥಮ ಮೌಂಟ್‌ ಎವರೆಸ್ಟ್‌ ಶಿಖರದ ತುದಿಗೆ ಕಾಲಿಟ್ಟ ಪರ್ವತಾರೋಹಿ ಯಾರೆಂಬುದು ಅವರು ಇದುವರೆಗೂ ಹೇಳಿಲ್ಲ. ಇದೇ ಸ್ನೇಹ. ಸಾಧನೆಗಿಂತ ಸ್ನೇಹ ದೊಡ್ಡದು ಎಂಬುವುದನ್ನವರು ತೋರಿಸಿ ಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಬಿಇಒ ಮಂಜುನಾಥ್‌, ಉಪ ಪ್ರಾಂಶುಪಾಲ ಪರಮೇಶ್ವರಪ್ಪ, ಜಿಪಂ ಮಾಜಿ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ್‌, ಗ್ರಾಪಂ
ಉಪಾಧ್ಯಕ್ಷ ಕೇಶವ ರಾಯ್ಕರ್‌, ಸದಸ್ಯರಾದ ಉಮೇಶ್‌ ಉಡುಗಣಿ, ಖಲಂದರ್‌ ಸಾಬ್‌, ಕೃಷ್ಣಮೂರ್ತಿ, ರೂಪಾ ಇತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next