Advertisement

ಇಳಿದ ಪ್ರವಾಹ, ದಕ್ಷಿಣದ ಕಾಶ್ಮೀರ ಕೊಡಗಿನ ಕರುಣಾಜನಕ ಕಥೆ; watch

06:34 PM Aug 21, 2018 | Sharanya Alva |

ದಕ್ಷಿಣದ ಕಾಶ್ಮೀರ, ಭೂಲೋಕದ ಪ್ರಕೃತಿ ಸ್ವರ್ಗ ಎಂದು ಹೆಸರಾಗಿದ್ದ ಕೊಡಗು ವರುಣನ ಅಬ್ಬರ, ಪ್ರವಾಹಕ್ಕೆ ಸಿಲುಕಿ ನಲುಗಿ ಹೋಗಿದೆ. ಇದು ನಿಜಕ್ಕೂ ಕೊಡಗು, ಮಡಿಕೇರಿಯಾ, ಕುಶಾಲನಗರವಾ ಎಂದು ಅಚ್ಚರಿಪಡುವ ರೀತಿಯಲ್ಲಿ ಹಾಳಾಗಿದೆ ಹೋಗಿದೆ. ಮಳೆಗೆ ನೂರಾರು ಮನೆಗಳು, ವಿದ್ಯುತ್ ಕಂಬಗಳು, ರಸ್ತೆಗಳು, ಸೇತುವೆಗಳು, ಘಾಟಿಯ ಗುಡ್ಡ ಕುಸಿದು ಕೊಚ್ಚಿ ಹೋಗದೆ. ವಿವಿಧ ಪರಿಹಾರ ಕೇಂದ್ರದಲ್ಲಿ ಸುಮಾರು 7 ಸಾವಿರ ಮಂದಿ ಆಶ್ರಯ ಪಡೆದಿದ್ದಾರೆ. ಅಲ್ಲಿ ಒಬ್ಬೊಬ್ಬರದ್ದು ಒಂದೊಂದು ಕಥೆ…ಎನ್ ಡಿಆರ್ ಎಫ್, ಗೃಹರಕ್ಷಕ ದಳ, ಪೊಲೀಸ್ ಇಲಾಖೆ ಸಹಿತ ಸರಕಾರಿ ರಕ್ಷಣಾ ತಂಡಗಳು ಸಾರ್ವಜನಿಕರ ಸಹಕಾರದಲ್ಲಿ ಅಹೋರಾತ್ರಿ ರಕ್ಷಣಾ ಕಾರ್ಯದಲ್ಲಿ ತೊಡಗಿ ನೂರಾರು ಜೀವಗಳನ್ನು ಉಳಿಸಿದ್ದಾರೆ. ಮಡಿಕೇರಿಯ ತಂತಿಪಾಲದಲ್ಲಿ ಎನ್ ಡಿಆರ್ ಎಫ್ ಸಿಬ್ಬಂದಿಯೊಬ್ಬರು ಜೀವದ ಹಂಗು ತೊರೆದು 2 ತಿಂಗಳ ಮಗುವನ್ನು ರಕ್ಷಿಸಿರುವುದು, ಅಜ್ಜಿ, ಮಹಿಳೆಯರು, ಮಕ್ಕಳು, ವಿಕಲಚೇತನರನ್ನು ರಕ್ಷಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದೀಗ ಮಳೆಯ ಅಬ್ಬರ ನಿಂತಿದೆ..ಯುದ್ದೋಪಾದಿಯಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಆದರೆ ತಮ್ಮ ಕಣ್ಣೆದುರೇ ಮನೆ, ತೋಟ ನಾಶವಾಗುವ ಮೂಲಕ ಇಡೀ ಬದುಕೇ ಬೀದಿಗೆ ಬಿದ್ದಂತಾಗಿದೆ. ಕೆಲವು ಸಣ್ಣ ಪುಟ್ಟ ಗುಡ್ಡದ ಮೇಲಿನ ಮನೆಗಳು ನಾಮಾವಶೇಷವಾಗಿದೆ. ಮಳೆ, ಪ್ರವಾಹ ಇಳಿದ ಹಿನ್ನೆಲೆಯಲ್ಲಿ ಜನರು ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದ್ದು ನಿಧಾನಕ್ಕೆ ತಮ್ಮ, ತಮ್ಮ ಮನೆ, ಜಾಗದತ್ತ ಹೆಜ್ಚೆ ಹಾಕುತ್ತಿದ್ದಾರೆ. ಆದರೆ ಅಲ್ಲಿ ಉಳಿದಿರುವುದು ಈಗ ಅವಶೇಷಗಳು ಮಾತ್ರ, ತಾವು ಹಲವಾರು ವರ್ಷಗಳಿಂದ ಬದುಕಿ ಬಾಳಿದ್ದ ಮನೆ, ಪರಿಸರ, ಕಟ್ಟಿಕೊಂಡ ಕನಸುಗಳೆಲ್ಲಾ ಕೊಚ್ಚಿಕೊಂಡು ಹೋಗಿದೆ. ಈ ಕುರಿತ ವಿಡಿಯೋ ಚಿತ್ರಣ ಇಲ್ಲಿದೆ..

Advertisement
Advertisement

Udayavani is now on Telegram. Click here to join our channel and stay updated with the latest news.

Next