Advertisement

ವಿಮಾನದ ತುರ್ತುದ್ವಾರ ತೆರೆದ ಪ್ರಯಾಣಿಕ!

07:40 AM May 27, 2023 | Team Udayavani |

ಸಿಯೋಲ್‌: ದಕ್ಷಿಣ ಕೊರಿಯಾದ ಡಾಯೆಗು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‌ ಆಗುತ್ತಿದ್ದ ವಿಮಾನವೊಂದರ ಪ್ರಯಾಣಿಕ ಲ್ಯಾಂಡಿಂಗ್‌ಗೆ ಮುಂಚೆಯೇ ತುರ್ತುದ್ವಾರ ತೆರೆದಿದ್ದಾರೆ. ಇದರಿಂದ ಉಳಿದ ಪ್ರಯಾಣಿಕರು ಉಸಿರಾಟ ಸಮಸ್ಯೆಗೆ ಸಿಲುಕಿ 9 ಮಂದಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ವರದಿಯಾಗಿದೆ.

Advertisement

ಏಷಿಯಾನಾ ಏರ್‌ಲೈನ್ಸ್‌ನ ವಿಮಾನವೊಂದು 200 ಪ್ರಯಾಣಿಕರನ್ನು ಹೊತ್ತು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‌ ಆಗುತ್ತಿತ್ತು. ಲ್ಯಾಂಡಿಂಗ್‌ಗೆ ಇನ್ನೂ 200 ಮೀಟರ್‌ (650 ಅಡಿ) ಎತ್ತರವಿರುವಾಗಲೇ ಪ್ರಯಾಣಿಕರೊಬ್ಬರು ತುರ್ತು ದ್ವಾರ ತೆರೆದಿದ್ದಾರೆ. ಇದರಿಂದ ಗಾಳಿ ವಿಮಾನದ ಒಳನುಗ್ಗಿದ್ದು, ಅದರ ರಭಸಕ್ಕೆ 9 ಪ್ರಯಾಣಿಕರಿಗೆ ಉಸಿರಾಟದ ಸಮಸ್ಯೆಯಾಗಿದೆ.

ಆದಾಗ್ಯೂ, ಯಾವುದೇ ಅಪಾಯವಿಲ್ಲದಂತೆ ವಿಮಾನ ಲ್ಯಾಂಡ್‌ ಆಗಿದ್ದು, ಕೂಡಲೇ ಸಮಸ್ಯೆಯಾದ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ತುರ್ತುದ್ವಾರ ತೆರೆದ ವ್ಯಕ್ತಿಯನ್ನು ಬಂಧಿಸಲಾಗಿದೆ. ದ್ವಾರ ತೆರೆದಿದ್ದಕ್ಕೆ ಕಾರಣವೇನೆಂದು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next