Advertisement

ಗುಡಿ ಮೇಲೆ ಬಿದ್ದ ಫ‌ಲಕ 

12:42 PM May 22, 2017 | Team Udayavani |

ಮಹದೇವಪುರ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ವೈಟ್‌ಫೀಲ್ಡ್‌ ಹಾಗೂ ಬಿದರಹಳ್ಳಿ ಭಾಗ ತತ್ತರಸಿ ಹೋಗಿದೆ.  ವರ್ತೂರು ಕೋಡಿ ಬಳಿ ನೊರೆ ತಡೆಯಲೆಂದು ಬಿಡಿಎ ನಿರ್ಮಿಸಿದ್ದ ಕಬ್ಬಿಣದ ಮೆಷ್‌ ಇತ್ತೀಚೆಗಷ್ಟೇ ಬಿರು­ಗಾಳಿಗೆ ಕುಸಿದು ಬಿದ್ದಿತ್ತು.

Advertisement

ಅದರ ಮುಂದುವರಿದ ಭಾಗವಾಗಿ ಮಳೆಗೆ ಈ ಭಾಗದಲ್ಲಿ ಸಾಕಷ್ಟು ಹಾನಿಯಾಗಿದೆ. ಶನಿವಾರ ರಾತ್ರಿ ಬಿರುಗಾಳಿ ಮಳೆಗೆ ವೈಟ್‌ಪೀಲ್ಡ್‌ ಮುಖ್ಯರಸ್ತೆ ಬದಿಯ ವಿದ್ಯುತ್‌ ಕಂಬದ ಮೇಲೆ ಬಾರಿ ಗಾತ್ರದ ಮರಗಳು ಉರುಳಿ ಬಿದ್ದವು. ಹೀಗಾಗಿ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್‌ ಕಡಿತಗೊಂಡು ಕತ್ತಲಾವರಿಸಿತು. 

ರಾಷ್ಟ್ರೀಯ ಹೆದ್ದಾರಿ 75 ರ ಅವಲಹಳ್ಳಿ ಸಮೀಪದ ಶನಿಮಹಾತ್ಮ ದೇವಸ್ಥಾನ ಮೇಲೆ ಬೃಹತ್‌ ಗಾತ್ರದ ಜಾಹಿರಾತು ಪಲಕ ಉರಳಿಬಿದ್ದು, ದೇವಸ್ಥಾನ ಸೇರಿದಂತೆ, ಪಕ್ಕದ ಮನೆಗಳ ಛಾವಣಿಗಳಿಗೆ ಹಾನಿಗೊಳ­ಗಾ­ದವು.  

ಜಾಹಿರಾತು ಪಲಕ ತೆರವು­ಗೊಳಿಸಲು ಸಂಜೆವರೆಗೂ ಕ್ರೆ„ನ್‌ ಮೂಲಕ ಕಾರ್ಯಾಚರಣೆ ನಡೆಸಲಾ­ಯಿತು. ಹೊಸಕೋಟೆ ಮತ್ತು ಕಾಡು­ಗುಡಿ ಮುಖ್ಯರಸ್ತೆಯ ಗೊರವಿಗೆರೆ ಗೇಟ್‌ ಸಮೀಪ ಬೃಹತ್‌ ಜಾಹಿರಾತು ಪಲಕ ರಸ್ತೆಗೆ ಉರಳಿಬಿತ್ತು. ಅದೃಷ್ಟವಶಾತ್‌ ಯಾವುದೇ ಪ್ರಾಣ­ಹಾನಿ ಸಂಭವಿಸಿಲ.

ರೈತರ ಮೊಗದಲ್ಲಿ ಮಂದಹಾಸ 
ಈ ನಡುವೆ ಮಳೆ ಇಲ್ಲಿನ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಸತತ ಬರದಿಂದಾಗಿ ಇಲ್ಲಿನವರು ಬೆಳೆ ಬೆಳೆಯಲು ಮುಂದಾಗಿರಲಿಲ್ಲ. ಸತತ ಮೂರು ದಿನ ಉತ್ತಮವಾಗಿ ಮಳೆ ಸುರಿದಿರುವುದರಿಂದ ರೈತರು ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. ಬತ್ತಿ ಹೋಗಿದ್ದ ಬೋರ್‌ವೆಲ್‌ಗ‌ಳಲ್ಲಿ ಅಲ್ಪಸ್ವಲ್ಪ ನೀರು ಕಾಣಿಸಿಕೊಂಡಿ­ರುವುದು ರೈತರ ಸಂತಸವನ್ನು ಇಮ್ಮಡಿಗೊಳಿಸಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next