Advertisement

Panchamasali ಸಮುದಾಯದವರು ಸಿಎಂ ಆದರೂ 2-ಎ ಹೋರಾಟ ನಿಲ್ಲದು

11:11 PM Sep 29, 2023 | Team Udayavani |

ಕುಷ್ಟಗಿ: ಪಂಚಮಸಾಲಿ ಸಮುದಾಯದವರು ಸಿಎಂ ಆದರೂ, ಪಂಚಮಸಾಲಿ ಸಮಾಜಕ್ಕೆ 2-ಎ ಮೀಸಲಾತಿ ನಿಲ್ಲಿಸುವುದಿಲ್ಲ ಎಂದು ಕೂಡಲ ಸಂಗಮಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

Advertisement

ಇಲ್ಲಿನ ಶ್ರೀ ಮಲ್ಲಿಕಾರ್ಜುನ ದಾಸೋಹ ಭವನದಲ್ಲಿ ಸೆ.30ರಂದು 2-ಎ ಮೀಸಲಾತಿಗೆ ಆಗ್ರಹಿಸಿ ಹಿರೇವಂಕಲಕುಂಟಾದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ಹೋರಾಟದ ಹಿನ್ನೆಲೆಯಲ್ಲಿ ನಡೆದ ಪೂರ್ವಭಾವಿ ಸಭೆಯ ಸಾನಿಧ್ಯವಹಿಸಿ ಮಾತನಾಡಿದರು.

ಪಂಚಮಸಾಲಿಗಳಿಗೆ ಮಂತ್ರಿ ಸ್ಥಾನ ಕೊಟ್ಟರೂ ಖುಷಿಯಾಗಿಲ್ಲ, ಶಾಸಕರಾದರೂ ಖುಷಿಯಾಗಿಲ್ಲ ಈ ಸಮಾಜದವರಿಗೆ ಮೀಸಲಾತಿ ಸಿಗುವವರೆಗೂ ಬಿಡುವುದಿಲ್ಲ ಎಂಬುದು ನಿಪ್ಪಾಣಿ ಹೋರಾದಿಂದಲೇ ಸಿಎಂ ಸಿದ್ದರಾಮಯ್ಯ ಅವರಿಗೆ ಗೊತ್ತಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲು ಪಂಚಮಸಾಲಿಗಳ ಶ್ರಮವಿದ್ದು ಸಮಾಜದ ಶೇ.50ರಷ್ಟು ಜನರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿದೆ ಋಣವಿದ್ದು ಆ ಋಣ ತೀರಿಸಲು ಈ ಸಮಾಜಕ್ಕೆ 2-ಎ ಮೀಸಲಾತಿ ಕಲ್ಪಿಸಬೇಕಿರುವುದು ಅವಶ್ಯಕತೆ ಹಾಗೂ ಅನಿವಾರ್ಯತೆಯೂ ಇದೆ ಎಂದರು.

ಕಿತ್ತೂರ ರಾಣಿ ಚನ್ನಮ್ಮ ಕಾಲದಿಂದಲೂ ಪಂಚಮಸಾಲಿ ಸಮಾಜದ ಹೋರಾಟಕ್ಕೆ ಕೆಲವು ಅತೃಪ್ತ ಮನಸ್ಸುಗಳು ಅಡ್ಡಿಯಾಗಿವೆ. ಈ ಸಮಾಜದವರು 2-ಎ ಮೀಸಲಾತಿಯಿಂದ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮುಂದೆ ಬಂದರೆ ತಪ್ಪು ಗ್ರಹಿಕೆಯಿಂದ ಹೇಗಾದರೂ ಈ ಸಮಾಜದವರನ್ನು 3-ಎ ದಿಂದ 2-ಎಗೆ ಬರಬಾರದು ಎಂದು ಷಡ್ಯಂತ್ರ ರೂಪಿಸಲಾಗಿದೆ ಎಂದರು.

ರಮೇಶಕುಮಾರ ಎನ್ನುವ ಬಗ್ಗೆ ಈ ಸಮಾಜದ ಬಗ್ಗೆ ಕುರಡು, ಕುಂಟರಿಗೆ ಮೀಸಲಾತಿ ಕೊಡಬಹುದು ಆದರೆ ಈ ಸಮಾಜದವರು ಮೈಗಳ್ಳರು ಎನ್ನುವ ನೆಗಟೀವ್ ಮಾತಿಗೆ 28ಸಾವಿರ ಮತದಾರರಿರುವ ಗೌಡ್ರು ಲಿಂಗಾಯತರು ಆ ವ್ಯಕ್ತಿಗೆ ಮತ ಹಾಕದೇ ಸೋಲಿಸಲು ಕಾರಣರಾದರು. ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸಹಕರಿಸಿದವರನ್ನು ಜಾತಿ ಮತ ನೋಡದೇ ಗೆಲ್ಲಿಸಿದ್ದು, ನಮ್ಮ ಜನ ಇಷ್ಟು ಶ್ಯಾಣ್ಯಾ ಆಗ್ಯಾರ ಅಂತ ಗೊತ್ತಿರಲಿಲ್ಲ ಎಂದರು.

Advertisement

ಪಂಚಮಸಾಲಿ ಸಮಾಜಕ್ಕೆ ಕೊನೆಯ ಘಳಿಗೆಯಲ್ಲಿ ಆಗಿನ ಸಿಎಂ ಬಸವರಾಜ ಬೊಮ್ಮಾಯಿ ಅವರು ಮೀಸಲಾತಿ ಕಲ್ಪಿಸಿದ್ದರೆ ಅವರಿಗೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ವಿಳಂಬ ಮಾಡಿರುವುದಕ್ಕೆ ಈ ರೀತಿಯಾಗಿರುವ ಬಗ್ಗೆ ಸತ್ಯ ಗೊತ್ತಾದಾಗ ಪ್ರಧಾನಮಂತ್ರಿ ನರೇಂದ್ರ ಮೋದಿ ತಡ ಮಾಡದೇ 2-ಎ ಹಾಗೂ 2-ಡಿಗೂ ತಡೆಯಾಜ್ಞೆ ಇದ್ದಾಗ, ಕೇಂದ್ರ ಸರ್ಕಾರದಿಂದ ವಕೀಲರೊಬ್ಬರನ್ನು ನೇಮಿಸಿಕೊಂಡು 2-ಡಿ ಮೀಸಲಾತಿ ತಡೆಯಾಜ್ಞೆ ತೆರವುಗೊಳಿಸಿ ಮೀಸಲಾತಿ ಘೋಷಣೆ ಆಗಿತ್ತು. ಪ್ರಧಾನಮಂತ್ರಿಗಳು ಈ ಸಮಾಜಕ್ಕೆ 2-ಡಿ ಮೀಸಲಾತಿ ನೀಡಿರುವುದು ಸ್ವೀಕರಿಸಿದ್ದೆವು. ಆದರೆ ಈ ಮೀಸಲಾತಿ ನೀಡುವ ಸಂಧರ್ಭದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಅದು ಕೂಡ ಸಾದ್ಯವಾಗಲಿಲ್ಲ.

ಕಾಂಗ್ರೆಸ್ ಪಕ್ಷದಿಂದ ಪಂಚಮಸಾಲಿ ಸಮಾಜದವರು ಹೆಚ್ಚಿಗೆ ಗೆಲ್ಲುತ್ತಿರಲಿಲ್ಲ ಮೀಸಲಾತಿ ಹೋರಾಟ ಶುರು ಮಾಡಿದ ಮೇಲೆ ಕಾಂಗ್ರೆಸ್ 15 ಜನ ಪಂಚಮಸಾಲಿಗಳಿಗೆ ಟಿಕೇಟ್ ನೀಡಿದ್ದು ಇದರಲ್ಲಿ 11 ಜನ ಶಾಸಕರಾಗಿದ್ದು ಈ ಸಮಾಜದ ಋಣ ಕಾಂಗ್ರೆಸ್ ಸರ್ಕಾರದ ಮೇಲಿದ್ದು ಆ ಋಣವನ್ನು ಪಂಚಮಸಾಲಿ ಸಮಾಜಕ್ಕೆ 2-ಎ ಮೀಸಲಾತಿ ನೀಡುವ ಮೂಲಕ ಆ ಋಣ ತೀರಿಸಬೇಕಿದೆ ಎಂದರು.

ಹಿರೇವಂಕಲಕುಂಟದಲ್ಲಿ ಸೆ.30ರಂದು ನಡೆಯುವ ಹೋರಾಟವನ್ನು ರಾಷ್ಟ್ರೀಯ ಹೆದ್ದಾರಿ-50ರಲ್ಲಿ ನಡೆಸಲು ಉದ್ದೇಶಿಸಿದ್ದು, ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ಒಳ್ಳೆಯ ಆರಂಭ ಜೊತೆಗೆ ಇಷ್ಟ ಲಿಂಗದ ಜಾಗೃತಿಯಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next