Advertisement

ಎತ್ತಿನಬಂಡಿ ಉರುಳಿ ನಾಲ್ವರ ದುರ್ಮರಣ

11:02 PM Jun 01, 2019 | Team Udayavani |

ಹೊಳೆನರಸೀಪುರ: ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಉದ್ದೂರು ಹೊಸಳ್ಳಿ ಗ್ರಾಮದಲ್ಲಿ ಶನಿವಾರ ಕೃಷಿ ಚಟುವಟಿಕೆಗೆ ತೆರಳುತ್ತಿದ್ದ ಎತ್ತಿನಗಾಡಿ ಕೆರೆ ದಾಟುವ ವೇಳೆ ಕೆರೆಗೆ ಮಗುಚಿ ಬಿದ್ದು, ಗಾಡಿಯಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ.

Advertisement

ಗ್ರಾಮದ ರೈತ ರಾಜೇಗೌಡ (48) ಪತ್ನಿ ಶಾರದಮ್ಮ (45) ಅಕ್ಕನ ಮಕ್ಕಳಾದ ರುಚಿತ (8) ಧೃತಿ (5) ಮೃತ ದುರ್ದೈವಿಗಳು. ಶನಿವಾರ ಬೆಳಗ್ಗೆ ಎಂದಿನಂತೆ ತಮ್ಮ ಭೂಮಿಗೆ ಜೋಳ ಬಿತ್ತನೆ ಮಾಡುವ ಸಲುವಾಗಿ ಇವರು ಹೊರಟಿದ್ದರು.

ಎತ್ತಿನಗಾಡಿಯಲ್ಲಿ ಬೀಜದ ಜೋಳ ಮತ್ತು ಕೃಷಿಗೆ ಅಗತ್ಯವಾಗಿ ಬೇಕಾಗಿರುವ ಪರಿಕರಗಳನ್ನು ತುಂಬಿಕೊಂಡು, ತಮ್ಮ ಕುಟುಂಬದ ಪುಟಾಣಿಗಳನ್ನು ಕರೆದುಕೊಂಡು ಹೊರಟಿದ್ದರು. ಕೆರೆ ಏರಿ ಮೇಲೆ ಇದ್ದ ಹೂಳನ್ನು ದಾಟಿ ಹೋಗುವಾಗ ಎತ್ತುಗಳು ಕಾಲು ಜಾರಿ ಕೆರೆಗೆ ಬಿದ್ದವು. ಬಿದ್ದ ರಭಸಕ್ಕೆ ಕೆರೆಯಲ್ಲಿದ್ದ ನೀರಿನಲ್ಲಿ ಗಾಡಿಯ ಮೇಲಿದ್ದವರು ಬಿದ್ದು, ಮುಳುಗಿ ಸಾವನ್ನಪ್ಪಿದಾರೆ.

ವಿಷಯ ತಿಳಿಯುತ್ತಿದ್ದಂತೆ ಹಳ್ಳಿ ಮೈಸೂರು ಪೊಲೀಸ್‌ ಠಾಣೆಯ ಪಿಎಸ್‌ಐ ರಾಜಪ್ಪ ಹಾಗೂ ಸಿಬ್ಬಂದಿಗಳು ಆಗಮಿಸಿ, ಗ್ರಾಮಸ್ಥರ ನೆರವಿನೊಂದಿಗೆ ಮೃತದೇಹವನ್ನು ಹೊರ ತೆಗೆದರು. ಬಳಿಕ, ಮೃತದೇಹಗಳನ್ನು ಸ್ಥಳದಲ್ಲಿಯೇ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next