Advertisement
ಶಿವಸೇನೆ ಕಾರ್ಯಕರ್ತರು ಕನ್ನಡದ ಧ್ವಜ ಸುಟ್ಟು ಹಾಕಿದ್ದು, ಅವರ ವಿರುದ್ಧ ಸೂಕ್ತ ಕಾನೂನಿನ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಜೈ ಕನ್ನಡಿಗರ ಸೇನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
Related Articles
Advertisement
ಕರ್ನಾಟಕ ರಕ್ಷಣಾ ವೇದಿಕೆಯಿಂದಲೂ ಜಿಲ್ಲಾಧಿಕಾರಿ ಕಚೇರಿ ಎದುರು ಕೊಲ್ಲಾಪುರದಲ್ಲಿ ಕನ್ನಡ ಭಾವುಟ ಸುಟ್ಟು ಹಾಕಿದ ಶಿವಸೇನೆ ಮತ್ತು ಎಂಇಎಸ್ ಸಂಘಟನೆಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು. ಬೆಳಗಾವಿ ಜಿಲ್ಲೆಯಿಂದ ಎಂಇಎಸ್ ಹಾಗೂ ಶಿವಸೇನೆ ಎರಡೂ ಸಂಘಟನೆಗಳನ್ನು ಸಂಪೂರ್ಣವಾಗಿ ನಿಷೇಧ ಮಾಡಬೇಕು. ಕರ್ನಾಟಕ ಯಾವುದೇ ಭಾಗದಲ್ಲಿ ಇನ್ಮುಂದೆ ಈ ಸಂಘಟನೆಗಳ ಧ್ವಜ ಕಾಣದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು.
ಸಂಘಟನೆ ಜಿಲ್ಲಾಧಕ್ಷ ಮಹೇಶಕಾಶಿ, ತಾಲೂಕಾಧ್ಯಕ್ಷ ಪುನೀತ ರಾಜ ಕವಡೆ, ಅಶೋಕ್ ಬಿನಳ್ಳಿ, ಶರಣಗೌಡ ಪಾಟೀಲ, ಸಂತೋಷ ಖಣದಾಳ, ಸಿದ್ಧಣಗೌಡ ಪಾಟೀಲ, ಕಲ್ಯಾಣಿ ತಳವಾರ, ಮಂಜುಳಾ ರಾಠೊಡ, ಪೃಥ್ವಿರಾಜ ರಾಂಪೂರ, ಶ್ರೀಶೈಲ ಕಣ್ಣೂರ ಇದ್ದರು.
ಕನ್ನಡ ರಣಧೀರರ ಪಡೆ
ಕನ್ನಡ ಬಾವುಟ ಸುಟ್ಟು ಹಾಕಿದ ಶಿವಸೇನೆ ಮತ್ತು ಎಂಇಎಸ್ ಪುಂಡರ ಮೇಲೆ ತಕ್ಷಣವೇ ಎಫ್‌ಐಆರ್ ಹಾಕಿ ಕಠಿಣ ಕ್ರಮ ಜರುಗಿಸಬೇಕೆಂದು ಕನ್ನಡ ರಣಧೀರರ ಪಡೆ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗಳಿಗೆ ಕಾರ್ಯಕರ್ತರು ಮನವಿ ಸಲ್ಲಿಸಿದರು. ಕನ್ನಡದ ಧ್ವಜವನ್ನು ರಾಜಾರೋಷವಾಗಿ ಸುಟ್ಟು ಹಾಕಿರುವುದು ಅಪರಾಧವಾಗಿದೆ. ಇಂತಹ ಕಿಡಿಗೇಡಿಗಳನ್ನು ಕೂಡಲೇ ಪೊಲೀಸ್ ವಶಕ್ಕೆ ಪಡೆಯಬೇಕೆಂದು ಸಂಘಟನೆ ಜಿಲ್ಲಾಧ್ಯಕ್ಷ ಶೇಷಗಿರಿ ಮರತೂಕರ ಮನವಿ ಸಲ್ಲಿಸಿದರು. ಮುಖಂಡರಾದ ಮಹೇಶ ನಾಗನಹಳ್ಳಿ, ಮಲ್ಲಿಕಾರ್ಜುನ ಹೀರಾಪೂರ, ಸಾಯಿ ನಾಗನಹಳ್ಳಿ, ಶೇಖರ ಬೋಳವಾಡ, ಸಿದ್ದು, ಮಲ್ಲು ನರಬೋಳಿ, ನವೀನ, ವಿಶ್ವನಾಥ ಈ ಸಂದರ್ಭದಲ್ಲಿ ಇದ್ದರು.
ಮುಖಂಡರ ಖಂಡನೆ
ಕನ್ನಡಾಂಬೆ ಬಾವುಟ ಸುಟ್ಟು ಹಾಕಿ ಪುಂಡಾಟಿಕೆ ಮೆರೆದಿರುವ ಶಿವಸೇನೆ ಮತ್ತು ಎಂಇಎಸ್ ನಡೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ಸಂಚಾಲಕ ಮಂಜುನಾಥ ನಾಲವಾರಕರ್, ಕರವೇ (ಕನ್ನಡಿಗರ ಬಣ)ದ ಜಿಲ್ಲಾಧ್ಯಕ್ಷ ಆನಂದ ತೆಗನೂರ ಖಂಡಿದ್ದಾರೆ. ಕರ್ನಾಟಕ ಮತ್ತು ಕನ್ನಡಿಗರ ಸ್ವಾಭಿಮಾನ ಕೆಣಕುವ ಕೆಲಸಕ್ಕೆ ಪುಂಡರು ಕೈಹಾಕಿದ್ದಾರೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರ ಬೆಳಗಾವಿಯ ಸುವರ್ಣಸೌಧದಲ್ಲಿ ಅಧಿವೇಶನ ನಡೆಸುತ್ತಿರುವ ಸಂದರ್ಭದಲ್ಲಿಈಕೃತ್ಯ ಎಸಗಿಸುವುದು ಖಂಡನೀಯ ಎಂದು ಹೇಳಿದ್ದಾರೆ.