ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಅಕ್ಟೋಬರ್/ ನವೆಂಬರ್ 2016ರ ಪದವಿ ಪರೀಕ್ಷೆಯ ಕಾಲೇಜುವಾರು ಅಂಕಪಟ್ಟಿಗಳ ವಿತರಣೆ ಕಾರ್ಯ ಈಗಾಗಲೇ ಪ್ರಾರಂಭವಾಗಿದ್ದು, ಎಲ್ಲ ವಿದ್ಯಾರ್ಥಿಗಳು ಫೆ. 15ರ ಒಳಗೆ ಪಡೆಯಬಹುದು. ಆಸಕ್ತ ವಿದ್ಯಾರ್ಥಿಗಳು ಅವರ ಉತ್ತರ ಪತ್ರಿಕೆಗಳನ್ನು ವೈಯಕ್ತಿಕವಾಗಿ ನೋಡಲು /ಅಥವಾ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಇಷ್ಟಪಡುವ ವಿದ್ಯಾರ್ಥಿಗಳು ಫೆ. 28ರೊಳಗೆ ಕಾಲೇಜಿನ ಮುಖಾಂತರ ಸಲ್ಲಿಸಬಹುದು. ಮಾ. 15ರ ಒಳಗೆ ಮರುಮೌಲ್ಯಮಾಪನದ ಫಲಿತಾಂಶವನ್ನು ಅಂತಿಮಗೊಳಿಸಲಾಗುವುದು ಎಂದು ಪರೀಕ್ಷಾಂಗ ಕುಲಸಚಿವರು ತಿಳಿಸಿದ್ದಾರೆ.
ಉತ್ತರ ಪತ್ರಿಕೆ ವಿತರಣೆ, ಪ್ರಶ್ನೆ ಪತ್ರಿಕೆ ವಿತರಣೆ, ಹಾಲ್‌ಟಿಕೆಟ್, ಕೋಡಿಂಗ್, ಡೀಕೋಡಿಂಗ್, ಮೌಲ್ಯಮಾಪನಕ್ರಿಯೆ, ಫಲಿತಾಂಶಗಳ ಗಣಕೀಕರಣ ಹೀಗೆ ಎಲ್ಲ ಪ್ರಕ್ರಿಯೆಗಳನ್ನು ಕ್ರಮಬದ್ಧವಾಗಿ ಹಾಗೂ ಮುಂಜಾಗ್ರತೆಯಿಂದ ಮಾಡಲಾಗಿದೆ. ಫಲಿತಾಂಶವನ್ನು ವಿಶ್ವವಿದ್ಯಾನಿಲಯದ ಜಾಲತಾಣದಲ್ಲಿ ಪ್ರಕಟಿಸುವುದರ ಜತೆಗೆ, ಕಾಲೇಜುವಾರು ಫಲಿತಾಂಶಗಳನ್ನು ಆಯಾಯ ಕಾಲೇಜುಗಳ ಅಧಿಕೃತ ಕಾಲೇಜು ಪೋರ್ಟಲ್‌ಗೆ ಅಪ್‌ಲೋಡ್ ಮಾಡಲಾಗಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ಅಕ್ಟೋಬರ್/ನವೆಂಬರ್ 2016ರ ಪದವಿ ಪರೀûಾ ಫಲಿತಾಂಶಗಳು ಜ. 23 – 24ರಿಂದ ವಿಶ್ವವಿದ್ಯಾನಿಲಯದ ಜಾಲತಾಣದಲ್ಲಿ ಲಭ್ಯವಿವೆ. ಪರೀûಾ ಫಲಿತಾಂಶ ಪ್ರಕ್ರಿಯೆಯ ಪ್ರತಿ ಹಂತದಲ್ಲಿ
ಕ್ರಮಬದ್ಧವಾಗಿ ಪರಿಶೀಲಿಸಿ ದೋಷಮುಕ್ತ ಫಲಿತಾಂಶವನ್ನು ಪ್ರಕಟಿಸಲಾಗಿರು ತ್ತದೆ. ಆದುದರಿಂದ ಪ್ರಕಟಗೊಂಡಿರುವ ಪರೀûಾ ಫಲಿತಾಂಶದಲ್ಲಿ ಯಾವುದೇ ಗೊಂದಲಕ್ಕೆ ಆಸ್ಪದವಿಲ್ಲ, ಮತ್ತು ಈ ವರೆಗೆ ಫಲಿಂತಾಶದಲ್ಲಿ ವ್ಯತ್ಯಯ ಇರುವುದರ ಬಗ್ಗೆ ವಿದ್ಯಾರ್ಥಿಗಳಿಂದ/ಕಾಲೇಜುಗಳಿಂದ ದೂರುಗಳು ಬಂದಿರುವುದಿಲ್ಲ.
ಮೌಲ್ಯಮಾಪಕರು ಅಂಕಗಳನ್ನು ನಮೂದಿಸುವಾಗ ತಪ್ಪು ಎಸಗಿರುವ ಸಾಧ್ಯತೆಗಳನ್ನು ತಪ್ಪಿಸಲು, ಎಲ್ಲ ಮೌಲ್ಯಮಾಪನ ಕೇಂದ್ರಗಳಲ್ಲಿ ವಿಷಯವಾರು ಓ.ಎಂ. ಆರ್. ಪರಿಶೀಲಕರನ್ನು ಹೆಚ್ಚುವರಿಯಾಗಿ ನೇಮಕ ಮಾಡಲಾಗಿರುತ್ತದೆ. ಕಾಲೇಜು/ಕಚೇರಿಯಿಂದ ತಪ್ಪು ನೋಂದಾವಣಿ, ಆಂತರಿಕ ಮೌಲ್ಯಮಾಪನ ಅಂಕಗಳ ವ್ಯತ್ಯಯ/ಬಿಟ್ಟು ಹೋಗಿರುವಂತದ್ದು, ವಿದ್ಯಾರ್ಥಿಗಳೂ ಉತ್ತರ ಪತ್ರಿಕೆಯಲ್ಲಿ ಸಬೆjಕ್ಟ್ ಕೋಡ್ ಅಥವಾ ನೋಂದಣಿ ಸಂಖ್ಯೆಯನ್ನು ತಪ್ಪು ನಮೂದಿಸಿರುವುದು, ಪ್ರವೇಶಾತಿ ಅನುಮೋದನೆಗೆ ಬಾಕಿ, ಇಂತಹ ಕೆಲವು ಕಾರಣಗಳಿಂದ ಕೆಲವು ವಿದ್ಯಾರ್ಥಿಗಳ ಫಲಿತಾಂಶ ಪ್ರಕಟನೆಯನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ. ಈ ಬಗ್ಗೆ ಕಾಲೇಜು ಮತ್ತು ಸಂಬಂಧಿಸಿದ ಕಚೇರಿಗಳಿಗೆ ಸೂಕ್ತವಾದ ಸ್ಪಷ್ಟೀಕರಣ ಪಡೆದ ಅನಂತರ ಬಾಕಿ ಇರುವ ಫಲಿತಾಂಶಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು.
ಈ ಬಾರಿ, ತಡೆ ಹಿಡಿದಿರುವ ಫಲಿತಾಂಶ ಶೇಕಡಾ 0.1ಕ್ಕಿಂತ ಕಡಿಮೆ. ಮೇ 2016ರ ಪರೀಕ್ಷೆಯ ಬಾಕಿ ಇರುವ ಸುಮಾರು 300 ಅಂಕಪಟ್ಟಿಗಳನ್ನು ನೀಡಲಾಗುತ್ತಿದೆ. ಅಂಕಪಟ್ಟಿ ಪಡೆಯಲು ಬಾಕಿ ಇರುವ ಕಾಲೇಜುಗಳ ಪ್ರಾಂಶುಪಾಲರಿಗೆ ಸಿಬಂದಿಯನ್ನು ಫೆ. 10-14ರೊಳಗೆ ವಿಶ್ವವಿದ್ಯಾನಿಲಯಕ್ಕೆ ಕಳುಹಿಸಿ, ಅವುಗಳನ್ನು ಪಡೆದುಕೊಳ್ಳಲು ತಿಳಿಸ ಲಾಗಿದೆ ಎಂದವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಫಲಿತಾಂಶದ ಬಗ್ಗೆ ಮಾಹಿತಿ ಗಾಗಿ ಹೆಲ್ಪ್ಡೆಸ್ಕ್ ತೆರೆಯಲಾಗಿದೆ. ವಿಶ್ವವಿದ್ಯಾನಿಲಯದ ಅಧಿಕೃತ ಜಾಲ ತಾಣವನ್ನು ಹ್ಯಾಕ್ ಮಾಡಲಾಗಿದೆ ಎಂಬ ವಿಚಾರ ಅಧಾರರಹಿತ ಹಾಗೂ ಸತ್ಯಕ್ಕೆ ದೂರವಾಗಿದೆ. ವಿದ್ಯಾರ್ಥಿಗಳು ಫಲಿತಾಂಶ ಮತ್ತು ಅಂಕಪಟ್ಟಿಯ ಬಗ್ಗೆ ಏನಾದರೂ ದೂರುಗಳಿದ್ದರೆ, ತಮ್ಮ ಕಾಲೇಜು ಪ್ರಾಂಶಪಾಲರ ಮುಖಾಂತರ ಮಾಹಿತಿ ನೀಡಬಹುದು ಎಂದವರು ತಿಳಿಸಿದ್ದಾರೆ.