Advertisement

ಮೂಲ ಜಾನಪದ ಕಲೆ ಉಳಿಯಬೇಕಿದೆ

01:16 PM Sep 11, 2017 | |

ಧಾರವಾಡ: ಮೂಲ ಜಾನಪದ ಸಾಹಿತ್ಯ, ದಾಟಿಗಳು ಮತ್ತು ಆಶಯಗಳ ಉಳಿವಿಗೆ ಸಂಘಟಿತ ಪ್ರಯತ್ನ ನಡೆಯುವ ಅಗತ್ಯವಿದೆ ಎಂದು ಹಿರಿಯ ಜಾನಪದ ವಿದ್ವಾಂಸ ಡಾ| ಸೋಮಶೇಖರ ಇಮ್ರಾಪೂರ ಹೇಳಿದರು. ಬಸವಶಾಂತಿ ಮಿಷನ್‌ ಟ್ರಸ್ಟ್‌ ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆ ಆಶ್ರಯದಲ್ಲಿ ಆಶ್ರಯದಲ್ಲಿ ರವಿವಾರ ವಿದ್ಯಾವರ್ಧಕ ಸಂಘದಲ್ಲಿ ಆಯೋಜಿಸಿದ್ದ ಜಾನಪದ ಸಮಾವೇಶ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

Advertisement

ಇತ್ತೀಚೆಗೆ ಜಾನಪದ ಶೈಲಿಯಲ್ಲಿ ರಚನೆಯಾದಂತ ಎಲ್ಲ ಸಾಹಿತ್ಯವನ್ನು ಜಾನಪದ ಎಂದು ಪ್ರತಿಬಿಂಬಿಸಲಾಗುತ್ತಿದೆ. ಅಲ್ಲದೇ ಮೂಲ ಜಾನಪದ ದಾಟಿಯನ್ನು ಹೊರತುಪಡಿಸಿ ಸಿನಿಮಾ ಸಾಹಿತ್ಯದ ದಾಟಿಯಲ್ಲಿ ಜಾನಪದ ಕಲಾವಿದರು ಕಲೆಯ ದರ್ಶನ ನೀಡುತ್ತಿದ್ದಾರೆ. ಮೂಲ ಜಾನಪದ ದಾಟಿಯನ್ನು ಉಳಿಸಿ-ಬೆಳೆಸುವ ಕಾರ್ಯಕ್ಕೆ ಕಲಾವಿದರು ಮುಂದಾಗಬೇಕು. ಜಾನಪದ ಪ್ರಪಂಚ ದೊಡ್ಡದಿದೆ. ಜಾನಪದ ಕಲೆ ನಿರಂತರ ಬದಲಾವಣೆಗೊಳ್ಳುತ್ತಿರುವ ಕಲೆ ಎಂಬುವುದನ್ನು ಅರಿತುಕೊಳ್ಳಬೇಕು ಎಂದರು.

ಜಾನಪದ ಚಲನಶೀಲ: ಜನರ ಬಾಯಿಂದ ಹುಟ್ಟಿದಂತ ಈ ಜಾನಪದ ಕಲೆಗೆ ಅಂತ್ಯ ಎಂಬುವುದು ಇಲ್ಲ. ಇದು ಆಯಾ ಕಾಲ ಘಟ್ಟಕ್ಕೆ ತಕ್ಕಂತೆ ಬದಲಾವಣೆಗೊಳ್ಳುವ ಒಂದು ಸಂಸ್ಕೃತಿ. ಇದೀಗ ಸದ್ಯದ ಆಧುನಿಕ ಬದುಕಿಗೆ ತಕ್ಕಂತೆ ಜಾನಪದ ಸಂಸ್ಕೃತಿ ಬದಲಾಗಿದೆ. ಇದನ್ನು ಪ್ರತಿಯೊಬ್ಬರು ಮೊದಲು ಅರಿತುಕೊಳ್ಳಬೇಕು. ಆದರೆ, ಇತ್ತೀಚೆಗೆ ಇದು ಯಾವುದರ ಅರಿವು ಇಲ್ಲದೆ ಜಾನಪದ ಅಳಿದು ಹೋಗುತ್ತಿದೆ. ನಾಶ ಹೊಂದುತ್ತಿದೆ ಎನ್ನುವುದು ತಪ್ಪು. ಈ ಕುರಿತು ಎಲ್ಲರೂ ಮನನ ಮಾಡಿಕೊಳ್ಳುವ ಅವಶ್ಯಕತೆಯಿದೆ ಎಂದರು.

ಶರಣರು ಜಾನಪದ ಕಟ್ಟಿದರು: ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ, 12ನೇ ಶತಮಾನದ ಬಸವಾದಿ ಶರಣರು ಸಹ ಈ ಜಾನಪದ ಕಲೆಗೆ ಪೊತ್ಸಾಹಿಸಿದ್ದಾರೆ. ಸಂತ ಶಿಶುವಿನಹಾಳ ಶರೀಫ್‌ರಂತ ದಾರ್ಶನಿಕರು ಅಂದು ಹಾಡಿದಂತ ತತ್ವಪದಗಳು ಇಂದಿಗೂ ನಮ್ಮ ಜೀವನದಲ್ಲಿ ಪ್ರಸ್ತುತವಾಗಿವೆ.

ಹೀಗಾಗಿ ಎಲ್ಲರೂ ಇಂದಿನ ಯಾಂತ್ರಿಕ ಬದುಕಿನಿಂದ ಹೊರ ಬಂದು ನಮ್ಮ ಸಂಸ್ಕೃತಿಯತ್ತ ಮುಖ ಮಾಡಬೇಕಿದೆ ಎಂದು ಹೇಳಿದರು. ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಡಾ| ಡಿ.ಬಿ. ನಾಯಕ, ಸದಾನಂದ ಡಂಗನವರ, ಪಂಚನಗೌಡ ದ್ಯಾಮನಗೌಡರ, ಡಾ| ಶ್ರೀಶೈಲ ಹುದ್ದಾರ, ಮಹಾದೇವ ಹೊರಟ್ಟಿ, ಬಸಲಿಂಗಯ್ಯ ಹಿರೇಮಠ, ಡಾ| ಡಿ.ಎಂ. ಹಿರೇಮಠ, ಡಾ| ಲಿಂಗರಾಜ ಅಂಗಡಿ ಇದ್ದರು.   

Advertisement
Advertisement

Udayavani is now on Telegram. Click here to join our channel and stay updated with the latest news.

Next