Advertisement
ನಗರದ ನೀಲಾಂಬಿಕಾ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಆಯೋಜಿಸಲಾಗಿದ್ದ ಆಧುನಿಕ ಕನ್ನಡ ಕಾವ್ಯದ ತಾತ್ವಿಕ ನೆಲೆಗಳು ಕುರಿತ ಉಪನ್ಯಾಸ ಹಾಗೂ ದಸರಾ ಕವಿಗೋಷ್ಠಿಯಲ್ಲಿ ಆಶಯ ನುಡಿಗಳನ್ನಾಡಿದ ಅವರು, ಕನ್ನಡ ಅಸ್ಮಿತೆಯನ್ನು ಕಟ್ಟಿದ ನೆಲ ಕಲ್ಯಾಣ. ಕನ್ನಡ ಭಾಷೆ ಸಾಹಿತ್ಯದ ಬೆಳವಣಿಗೆಯ ಸಂದರ್ಭದಲ್ಲಿ ವಚನಗಳ ಬಹುಮುಖ ದಾಖಲೆಗಳಾಗುತ್ತಿವೆ ಎಂದರು. ಬಸವಣ್ಣನ ಲೋಕ ಚಿಂತನೆ, ಅಲ್ಲಮ ಕೊಟ್ಟ ಜಾಗತಿಕ ಜ್ಞಾನ, ಅಕ್ಕಮಹಾದೇವಿಯ ಮಹಿಳಾ ಚಿಂತನೆಯ ಧೋರಣೆಗಳು ಸಾಂಸ್ಕೃತಿಕ ಬಹುತ್ವದ ಆಯಾಮಗಳ ಮೂಲಕ ವಚನಗಳು ಕನ್ನಡ ಅಸ್ಮಿತೆಯನ್ನು ಕಟ್ಟಿವೆ. ಆತ್ಮಕ್ಕೆ ಸ್ಪಂದಿಸುವ ಕಾವ್ಯ ಸಾಕಷ್ಟು ಪ್ರತಿರೋಧ, ಸಂಘರ್ಷಗಳಲ್ಲಿಯೇ ಹುಟ್ಟುತ್ತವೆ. ಮಾತು, ಘೋಷಣೆಗಳು ಕೂಡ ಕನ್ನಡ ದಲಿತ ಬಂಡಾಯ ಘಟ್ಟದಲ್ಲಿ ಕವಿತೆಗಳಾದವು ಎಂದು ಹೇಳಿದರು.
Related Articles
Advertisement
ಡಾ| ಬಿ.ಬಿ. ಕಾಳಗಿ ಅಧ್ಯಕ್ಷತೆ ವಹಿಸಿದ್ದರು. ಪುಸ್ತಕ ಪ್ರಾಧಿಕಾರದ ಸದಸ್ಯೆ ಡಾ| ಜಯದೇವಿ ಗಾಯಕವಾಡ, ಗುವಿವಿಯಿಂದ ಡಾಕ್ಟರೇಟ್ ಪಡೆದ ಡಾ| ಬಸವರಾಜ ಖಂಡಾಳೆ, ಡಾ| ಶಿವಲಿಲಾ ಮಠಪತಿ ಅವರನ್ನು ಇದೇವೇಳೆ ಸನ್ಮಾನಿಸಲಾಯಿತು. ತಾಲೂಕು ಕಸಾಪ ಅಧ್ಯಕ್ಷ ರುದ್ರಮಣಿ ಮಠಪತಿ, ಉಪಾಧ್ಯಕ್ಷ ರಮೇಶ ಉಪಾಪುರೆ, ಮಾಜಿ ಅಧ್ಯಕ್ಷ ಪ್ರಭುಲಿಂಗಯ್ಯ ಟಂಕಸಾಲಿಮಠ, ರತಿಕಾಂತ ಕೋಹಿನೂರ, ಶಂಕರಕುಕ್ಕಾ ಪಾಟೀಲ, ಗಂಗಾಧರ ಸಾಲಿಮಠ, ಬಸವಣ್ಣಪ್ಪ ನೇಲೋಗಿ, ಶಿವಕುಮಾರ ಜಡಗೆ ಉಪಸ್ಥಿತರಿದ್ದರು. ಭೀಮಾಶಂಕರ ಬಿರಾದಾರ ಸ್ವಾಗತಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ದೇವಿಂದ್ರ ಬರಗಾಲೆ ವಂದಿಸಿದರು. ರಾಜಕುಮಾರ ಹೂಗಾರ ನಿರೂಪಿಸಿದರು.