Advertisement

ವಿಪಕ್ಷಗಳ ಮೈತ್ರಿಗೆ UPA ಬದಲು INDIA ಎಂದು ಹೆಸರಿಟ್ಟಿದ್ದು ಯಾಕೆಂದರೆ…; ಮೋದಿ ವಾಗ್ದಾಳಿ

04:07 PM Jul 27, 2023 | Team Udayavani |

ಸಿಕಾರ್ (ರಾಜಸ್ಥಾನ): ವಿಪಕ್ಷಗಳ ಬಗ್ಗೆ ತಮ್ಮ ವಾಗ್ದಾಳಿ ಮುಂದುವರಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಅವರು ಯುಪಿಎ ಯಿಂದ ಇಂಡಿಯಾ (INDIA) ಗೆ ಬದಲಾಗಿದ್ದು ಅವರು ಮಾಡಿರುವ ತಪ್ಪುಗಳನ್ನು ಮುಚ್ಚಿಹಾಕಲು ಎಂದಿದ್ದಾರೆ.

Advertisement

ಅವರು ತಮ್ಮ ಮೈತ್ರಿಯ ಹೆಸರನ್ನು ಯುಪಿಎ ಬದಲಾಗಿ ಇಂಡಿಯಾ ಎಂದು ಮಾಡಿಕೊಂಡಿದ್ದಾರೆ. ಬಡವರ ವಿರುದ್ಧ ತಾವು ರೂಪಿಸಿದ ಸಂಚನ್ನು ಮರೆ ಮಾಚಲು ಅವರು ಈ ರೀತಿ ಮಾಡಿಕೊಂಡಿದ್ದಾರೆ ಎಂದು ರಾಜಸ್ಥಾನದ ಸಿಕಾರ್ ನಲ್ಲಿ ಪ್ರಧಾನಿ ಮೋದಿ ಹೇಳಿದರು.

ಮೋಸ ಮಾಡುವ ಕಂಪನಿಗಳು ಮಾಡುವಂತೆ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಹೆಸರು ಬದಲಾವಣೆ ಮಾಡಿಕೊಂಡಿದೆ. ಭಯೋತ್ಪಾದನೆಯ ಮುಂದೆ ಶರಣಾದ ತಮ್ಮ ಕಳಂಕವನ್ನು ಮರೆಮಾಚಲು ಅವರು ಈ ರೀತಿ ಮಾಡಿಕೊಂಡಿದ್ದಾರೆ. ಅವರದ್ದು ದೇಶ ವಿರೋಧಿಗಳು ಅನುಸಿರಸುವ ಮಾರ್ಗ. ಅವರು ಇಂಡಿಯಾ ಎಂದು ಹೆಸರಿಟ್ಟುಕೊಂಡು ದೇಶಪ್ರೇಮ ಮೆರೆಯುತ್ತಿದ್ದಾರೆ, ಆದರೆ ಅವರ ಉದ್ದೇಶ ದೇಶವನ್ನು ಕೊಳ್ಳೆ ಹೊಡೆಯುವುದಾಗಿದೆ ಎಂದರು.

ವಿಧಾನಸಭೆ ಚುನಾವಣೆ ನಡೆಯಲಿರುವ ರಾಜಸ್ಥಾನದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧವೂ ಟೀಕೆ ಮಾಡಿರುವ ಪ್ರಧಾನಿ ಮೋದಿ, ಉಚ್ಛಾಟಿತ ಸಚಿವ ರಾಜೇಂದ್ರ ಗುಧಾ ಅವರ ಕೆಂಪು ಡೈರಿ ಕಾಂಗ್ರೆಸ್ ಪಕ್ಷವನ್ನು ನಾಶ ಮಾಡಲಿದೆ ಎಂದರು.

ಇದನ್ನೂ ಓದಿ:ಸತ್ಯಾಂಶ ಹೊರಬರುವವರೆಗೆ ತಾಳ್ಮೆ ಇರಲಿ: ಉಡುಪಿ ಕಾಲೇಜಿಗೆ ಭೇಟಿ ನೀಡಿದ ಖುಷ್ಬೂ ಹೇಳಿಕೆ

Advertisement

ಕೆಲ ದಿನಗಳ ಹಿಂದೆ ರಾಜಸ್ಥಾನ ವಿಧಾನಸಭೆಯಲ್ಲಿ ನಡೆದ ಪ್ರಹಸನದಲ್ಲಿ ಆಗ ಸಚಿವರಾಗಿದ್ದ ರಾಜೇಂದ್ರ ಗುಧಾ ಅವರು ಕೆಂಪು ಡೈರಿಯನ್ನು ಪ್ರದರ್ಶಿಸಿದ್ದರು. ಆ ಡೈರಿಯಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಅಸಮರ್ಪಕ ಹಣಕಾಸು ವಹಿವಾಟು ನಡೆಸಿದ ಮಾಹಿತಿ ಎಂದಿದ್ದರು. ಅವರನ್ನು ಸಚಿವ ಸ್ಥಾನದಿಂದ ತೆಗೆದು ಹಾಕಲಾಗಿತ್ತು.

“ಈ ಕೆಂಪು ಡೈರಿ ಕಾಂಗ್ರೆಸ್ ನ ‘ಸುಳ್ಳಿನ ಅಂಗಡಿ’ಯ ಹೊಸ ಸಾಕ್ಷಿಯಾಗಿದೆ. ಕಾಂಗ್ರೆಸ್ ನ ಕೆಟ್ಟ ಕಾರ್ಯಗಳು ಈ ಡೈರಿಯಲ್ಲಿದೆ ಎಂದು ಹೇಳಲಾಗಿದೆ. ಇದೇ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣವಾಗಲಿದೆ” ಎಂದು ಪ್ರಧಾನಿ ಮೋದಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next