Advertisement

ಕೇವಲ ಅಧಿಕಾರಕ್ಕಾಗಿ ಆಡಳಿತ ನಡೆಸುವ ಪಕ್ಷ ಎಂದರೇ ಅದು ಬಿಜೆಪಿ: ರಾಮಲಿಂಗಾರೆಡ್ಡಿ

06:25 PM Jan 03, 2021 | Team Udayavani |

ಬೆಂಗಳೂರು: ಬಿಜೆಪಿ ದುರಾಡಳಿತದಲ್ಲಿ ಬಿಬಿಎಂಪಿ ಇಡೀ ವಿಶ್ವಕ್ಕೆ ಅತ್ಯಂತ ಕೆಟ್ಟ ಸಂದೇಶ  ರವಾನೆಯಾಗುವ ರೀತಿಯಲ್ಲಿ ಆಡಳಿತ ನಡೆಸಿತ್ತು ಗಾರ್ಡನ್ ಸಿಟಿ ಗಾರ್ಬೇಜ್ ಸಿಟಿಯಾಗಿ ರೂಪಗೊಂಡಿತ್ತು. ಇದನ್ನು ತಡೆಯಲು ಮತ್ತೆ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬರಬೇಕಾಯ್ತು ಬಿಜೆಪಿಗೆ ಜನರ ಸಮಸ್ಯೆ ಬಗ್ಗೆ ಕಾಳಜಿ ಇಲ್ಲ ಈ ಎಲ್ಲ ವೈಫಲ್ಯಗಳ ವಿರುದ್ಧ ಕಾರ್ಯಕರ್ತರು ಧ್ವನಿ ಎತ್ತಬೇಕೆಂದು ಮಾಜಿ ಗೃಹ ಸಚಿವ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ರಾಮಲಿಂಗಾರೆಡ್ಡಿ ಕರೆ ನೀಡಿದ್ದಾರೆ.

Advertisement

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ 2021ನೇ ವರ್ಷವೂ ಸಂಘಟನೆ ಹಾಗೂ ಹೋರಾಟದ ವರ್ಷವಾಗಿ ಸಂಕಲ್ಪ ಮಾಡಿರುವ ಹಿನ್ನೆಲೆಯಲ್ಲಿ, ಇಂದು ಬೆಂಗಳೂರು  ಮಹಾನಗರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ  ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿತ್ತು

ಈ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ರಾಮಲಿಂಗಾರೆಡ್ಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಲುಪಿಸಿ ಜನಪರ ಹೋರಾಟ ಮಾಡಲು ಕೆಪಿಸಿಸಿ ಅಧ್ಯಕ್ಷ ನೀಡಿರುವ ಕರೆಗೆ ಅನುಗುಣವಾಗಿ ಪ್ರಚಾರ ಸಮಿತಿ ಪದಾಧಿಕಾರಿಗಳು, ಸರಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸಿ ಹೋರಾಟ ನಡೆಸಲು ಮುಂದಾಗಬೇಕೆಂದು ತಿಳಿಸಿದರು.

ಇದನ್ನೂ ಓದಿ:  ಕೋವಿಡ್ ಲಸಿಕೆಗೆ ಅನುಮತಿ;DCGI ನಿರ್ಧಾರವನ್ನು ಸ್ವಾಗತಿಸಿ, ಇದೊಂದು ಐತಿಹಾಸಿಕ ಕ್ಷಣ ಎಂದ WHO

ಕೇಂದ್ರದಲ್ಲಿ ಬಾರಿ ಪ್ರಚಾರದಲ್ಲಿ ನಿರತರಾಗಿರುವ ಪ್ರಧಾನಿ ನರೇಂದ್ರ ಮೋದಿ, ಅಭಿವೃದ್ಧಿ ಕಡೆ ಗಮನ ಹರಿಸದೆ ಕೇವಲ ವಿದೇಶವನ್ನ ಸುತ್ತಿ ದೇಶದ ಹಣವನ್ನು ನುಂಗುತ್ತಿದ್ದಾರೆ. ಇವರು  ಕೇವಲ ಪ್ರಚಾರಕ್ಕಾಗಿ ಇರುವ ಪ್ರಧಾನ ಮಂತ್ರಿಗಳಾಗಿದ್ದಾರೆ. ಇಂದು  ರಾಜ್ಯ ಸರ್ಕಾರ ಹಿಂದಿನ ಕಾಂಗ್ರೆಸ್ ಸರ್ಕಾರ ತನ್ನ ಆಡಳಿತದ ವೈಫಲ್ಯವೆಂದು ಟೀಕಿಸಿತ್ತು. ಇಂದು ಆಡಳಿತ ನಡೆಸುತ್ತಿರುವ ಯಡಿಯೂರಪ್ಪನವರ ಸರ್ಕಾರ ದುರಾಡಳಿತದಲ್ಲಿ ಎಷ್ಟು ಪರ್ಸೆಂಟ್  ಹಣವನ್ನು ಪಡೆಯುತ್ತಿದ್ದಾರೆ ಎಂಬುದನ್ನು ತಿಳಿಸಬೇಕು. ಕೇವಲ ಅಧಿಕಾರಕ್ಕಾಗಿ ಆಡಳಿತ ನಡೆಸುವ ಪಕ್ಷ ಅದು ಬಿಜೆಪಿ ಪಕ್ಷ ಎಂದು ಇಂದು ಸಾಬೀತಾಗಿದೆ ಎಂದು ಕಿಡಿಕಾರಿದರು.

Advertisement

ಇನ್ನು ಸಭೆಯ ಅಧ್ಯಕ್ಷತೆ ವಹಿಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್ ಮಾತನಾಡಿ, ಕಾರ್ಯಕರ್ತರು 2021ರ ಈ ವರ್ಷವನ್ನು ಕೆಪಿಸಿಸಿ ಅಧ್ಯಕ್ಷರ ನೀಡಿರುವ ಸೂಚನೆ ಮೇರೆಗೆ ಜನಪರ ಹೋರಾಟಕ್ಕೆ ಸಂಕಲ್ಪವನ್ನು ತೊಟ್ಟು ವರ್ಷದ ಪ್ರಾರಂಭದಲ್ಲೇ ಉತ್ಸಾಹದಿಂದ ಸಭೆ ಸೇರಿರುವುದು ಅತ್ಯಂತ ಶ್ಲಾಘನೀಯ ಎ೦ದರು. ಬಿಜೆಪಿಯ ಪ್ರತಿ ವೈಫಲ್ಯಗಳನ್ನು  ಜನರಿಗೆ ತಲುಪಿಸಬೇಕು. ಮುಂದಿನ ದಿನಗಳಲ್ಲಿ ದೇಶಕ್ಕೆ ರಾಜ್ಯಕ್ಕೆ ಕಾಂಗ್ರೆಸ್ ಆಡಳಿತ ಬರಬೇಕು. ಅದಕ್ಕೆ ತಕ್ಕಂತೆ ಸಂಘಟನೆಯನ್ನು  ಬಲಿಷ್ಠವಾಗಿ ತಳಮಟ್ಟದಿಂದ ಪಕ್ಷವನ್ನು ಸಂಘಟಿಸಲು ಕಾರ್ಯೋನ್ಮುಖರಾಗಬೇಕೆಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಎಂ. ರಾಮಚಂದ್ರಪ್ಪ, ಕಾಂಗ್ರೆಸ್  ಪ್ರಚಾರ ಸಮಿತಿ ಬೆಂಗಳೂರು ಉಸ್ತುವಾರಿಗಳಾದ ಎಸ್. ಮನೋಹರ್, ಎಂ ಎ ಸಲೀಂ ಮತ್ತು  ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ  ಜಿ. ಜನಾರ್ಧನ್ ಎ.ಆನಂದ್ ಎಲ್. ಜಯಸಿಂಹ ಹಾಗೂ ಪಕ್ಷದ ಮುಖಂಡರಾದ ಶೇಖರ್ ಜಿ ಪ್ರಕಾಶ್. ಆದಿತ್ಯ. ಮಹೇಶ್ ಪುಟ್ಟರಾಜ  ಶಶಿಭೂಷಣ್  ಹಾಗೂ ಪಕ್ಷದ ಮುಖಂಡರು ಪದಾಧಿಕಾರಿಗಳು ಭಾಗವಹಿಸಿದ್ದರು.

ಇದನ್ನೂ ಓದಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ; ಯಡಿಯೂರಪ್ಪ ಅವರೇ ಸುಪ್ರೀಂ: ಅರುಣ್ ಸಿಂಗ್

Advertisement

Udayavani is now on Telegram. Click here to join our channel and stay updated with the latest news.

Next