Advertisement
ಶನಿವಾರ ಶ್ರೀಕೃಷ್ಣಮಠದ ಸುವರ್ಣ ಗೋಪುರ ಸಮರ್ಪಣೋತ್ಸವದ ಅಂಗವಾಗಿ ರಾಜಾಂಗಣದಲ್ಲಿ ನಡೆದ ರಾಷ್ಟ್ರಗೋಪುರಂ ಸಮಾರಂಭದಲ್ಲಿ ಮಾತನಾಡಿದ ಅವರು, ಈಗಿನ ಬುದ್ಧಿಜೀವಿಗಳು ನಮ್ಮದು ಸೋಲಿನ ಇತಿಹಾಸ. ನಾವು ಖಡ್ಗ ಹಿಡಿಯಲಿಲ್ಲ ಎನ್ನುತ್ತಾರೆ. ನಮ್ಮದು ಸಾಮರಸ್ಯದ ಇತಿಹಾಸ, ಸಂಘರ್ಷದ ಇತಿಹಾಸ. ಇತರ ರಾಷ್ಟ್ರಗಳ ಮೇಲೆ ದಂಡೆತ್ತಿ ಹೋಗಿ ಆಕ್ರಮಣ ನಡೆಸಿದರೆ ಮಾತ್ರ ಅಮೆರಿಕನ್ನರು ನಾಗರಿಕತೆ ಎಂದು ಹೇಳುತ್ತಾರೆ. ಭಾರತದವರು ದಂಡೆತ್ತಿ ಹೋಗದೆ ಇದ್ದರೂ, ಚೀನಾ, ಜಪಾನ್, ಆಗ್ನೇಯ ಏಷ್ಯಾ, ಇರಾನ್‌ಗೆ ಜ್ಞಾನವನ್ನು ಕೊಟ್ಟರು ಎಂದರು.
Related Articles
1835ರಲ್ಲಿ ಮೆಕಾಲೆ ಬ್ರಿಟಿಷರಂತೆ ಭಾರತೀಯ ರನ್ನು ಬೆಳೆಸುವ ಇಂಗ್ಲಿಷ್ ಶಿಕ್ಷಣ ಕ್ರಮವನ್ನು ಆರಂಭಿಸಿದ. ಇದಕ್ಕೂ ಮುನ್ನ ಥಾಮಸ್ ಮನ್ರೊ ಬಂಗಾಳ ಮತ್ತು ಬಿಹಾರದಲ್ಲಿ ಅಧ್ಯಯನ ನಡೆಸಿ ಕೊಟ್ಟ ವರದಿಯಲ್ಲಿ ಒಂದು ಲಕ್ಷ ಗುರುಕುಲ ಶಾಲೆಗಳಿದ್ದವು ಎಂದಿದೆ. ರಾಮಾಯಣ, ಮಹಾ ಭಾರತ ಕಾಲದಲ್ಲಿಯೂ ಗುರುಕುಲ ಪದ್ಧತಿ ಇತ್ತು. ಜಾತಿಭೇದ ಇರಲಿಲ್ಲ. ಕೃಷ್ಣ ಮತ್ತು ಕುಚೇಲ ಒಟ್ಟಿಗೆ ಕಲಿತರು.
Advertisement
ವಿದ್ಯಾರ್ಥಿ- ಶಿಕ್ಷಕರ ಅನುಪಾತ ಅಂದು ಇಂದು…ನಲಂದ ವಿ.ವಿ.ಯಲ್ಲಿ 10,000 ವಿದ್ಯಾರ್ಥಿಗಳಿಗೆ 2,000 ಶಿಕ್ಷಕರಿದ್ದರು. ಇದು 5:1 ಅನುಪಾತದಲ್ಲಿದ್ದರೆ ಈಗ 30:1 ಅನುಪಾತವನ್ನೂ ಪಾಲಿಸಲಾಗುತ್ತಿಲ್ಲ. ತಕ್ಷಶಿಲೆಯಲ್ಲಿ ಪಾಣಿನಿ, ಚರಕ, ಚಾಣಕ್ಯ ಶಿಕ್ಷಕರಾಗಿದ್ದರು. ಇಂಗ್ಲಿಷರು ವಿಜ್ಞಾನ, ಭಾಷೆ, ಗಣಿತ, ಸಮಾಜ, ಭೂಗೋಲ ಹೀಗೆ ಎಲ್ಲವನ್ನೂ ಸ್ವಲ್ಪ ಸ್ವಲ್ಪ ಕಲಿಸಿಕೊಡುವ, ಪರಿಪೂರ್ಣತೆ ಸಾಧಿಸದ ಶಿಕ್ಷಣವನ್ನು ನಮಗೆ ನೀಡಿದರು. ಇದು ಬ್ರಿಟಿಷರಿಗೆ ಅನುಕೂಲವಾಗುವಂತೆ ರೂಪಿಸಿದ ಶಿಕ್ಷಣ ಕ್ರಮ. ಆಗ 12 ವರ್ಷ ಕಲಿತ ಅನಂತರ ಗುರು ದಕ್ಷಿಣೆ ನೀಡುವ ಕ್ರಮವಿದ್ದರೆ ಈಗ ಮೊದಲೇ ದಕ್ಷಿಣೆ ನೀಡಬೇಕು, ಇಲ್ಲವಾದರೆ ಶಿಕ್ಷಣ ನಿರಾಕರಣೆಯ ಕ್ರಮವಿದೆ. ಮಾರ್ಕ್ಸ್- ಭಾರತೀಯರ ಚಿಂತನೆ
ಇತರಲ್ಲಿರುವ ಸಂಪತ್ತನ್ನು ದೋಚಿಕೊಂಡು ಬದುಕಬೇಕು ಎಂದು ಕಾರ್ಲ್ ಮಾರ್ಕ್ಸ್ ಹೇಳಿದರೆ ಭಾರತೀಯ ಶತ ಕೈಗಳಿಂದ ಸಂಪಾದಿಸಿ ಸಾವಿರ ಕೈಗಳಲ್ಲಿ ಕೊಡಬೇಕು ಎಂದು ಹೇಳಿದರು. ಕೊಡುವಾಗಲೂ ಶ್ರದ್ಧೆಯಿಂದ ಕೊಡಬೇಕು ಎಂದರು. ಪ್ಲಾಸ್ಟಿಕ್ ಸರ್ಜರಿ ಹೇಳಿಕೆಗೆ ಅಳುಕೇಕೆ?
ಪ್ರಧಾನಿಯವರು ಭಾರತದವರು ಮೊದಲು ಪ್ಲಾಸ್ಟಿಕ್ ಸರ್ಜರಿ ಮಾಡಿದರು ಎಂದಾಗ ಬುದ್ಧಿಜೀವಿಗಳಿಂದ ಆಕ್ಷೇಪ ವ್ಯಕ್ತವಾಯಿತು. ಅಮೆರಿಕದ ವಿ.ವಿ.ಗಳು, ವೈದ್ಯಕೀಯ ಕಾಲೇಜುಗಳಲ್ಲಿ ಶುಶ್ರುತನನ್ನು ಫಾದರ್ ಆಫ್ ಸರ್ಜರಿ ಎಂದು ಚಿತ್ರ ಹಾಕಿದ್ದಾರೆ. ಮೊದಲ ಕೆಟರ್ಯಾಕ್ಟ್ ಸರ್ಜರಿ ನಡೆಸಿದವ ಶುಶ್ರುತ. ಇದಕ್ಕೇಕೆ ವೈಜ್ಞಾನಿಕತೆ ಬೇಡ?
ಮೌಡ್ಯ ಮತ್ತು ವೈಜ್ಞಾನಿಕತೆ ಬಗ್ಗೆ ಆಗಾಗ ಚರ್ಚೆ ನಡೆಯುತ್ತದೆ. ಇಂತಹ ಸೆಕೆಯಲ್ಲಿಯೂ ಕೋಟು, ಟೈ ಕಟ್ಟಿಕೊಳ್ಳುವ ಹಿಂದಿರುವ ವೈಜ್ಞಾನಿಕತೆ ಏನು?