Advertisement

ಚಿನ್ನ ಕೊಂಡರೆ ಬದುಕು ಬಂಗಾರ 

04:33 PM May 29, 2020 | mahesh |

ಬಂಗಾರ, ಚಿನ್ನ, ಸ್ವರ್ಣ, ಕನಕ ಅಂತೆಲ್ಲ ಕರೆಸಿಕೊಳ್ಳುವ ಈ ಲೋಹದ ಮೇಲೆ ಭಾರತೀಯರಿಗೆ ಯಾಕಿಷ್ಟು ಮೋಹ? ಇದಕ್ಕೆ ಹಲವು ಉತ್ತರಗಳಿವೆ. ಅದಿರಲಿ, ಈಗ ಕೋವಿಡ್ ಕಾಡುತ್ತಿರುವ ಈ ಹೊತ್ತಿನಲ್ಲಿ ಸುರಕ್ಷಿತ ಹೂಡಿಕೆಯಾಗಿ, ಭಾರತೀಯರು ಭಾವಿಸುತ್ತಿರುವುದು ಚಿನ್ನವನ್ನೇ! ಇದರಿಂದೇನು ಲಾಭ? ಯಾವ್ಯಾವ ರೀತಿಯಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಬಹುದು? ಇಲ್ಲಿದೆ ವಿವರ.

Advertisement

ಬಂಗಾರ ಏಕೆ ಸುರಕ್ಷಿತ?
ಕೋವಿಡ್ ಪರಿಣಾಮ ಉದ್ಯಮರಂಗ ಕುಸಿದಿದೆ. ಅದರ ಫ‌ಲಶೃತಿಯಾಗಿ ಷೇರು ಮಾರುಕಟ್ಟೆಯಲ್ಲಿ ವಿಪರೀತ ಚಂಚಲತೆಯಿದೆ. ಷೇರು ಮೌಲ್ಯ, ಈಕ್ವಿಟಿ, ಮ್ಯೂಚುವಲ್‌ ಫ‌ಂಡ್‌ಗಳ ಮೌಲ್ಯದಲ್ಲೂ ಕುಸಿತವಾಗಿದೆ. ಅಲ್ಲದೇ ರಿಯಲ್‌ ಎಸ್ಟೇಟ್‌ ಉದ್ಯಮವೂ ಸ್ತಬಟಛಿವಾಗಿದೆ. ಬ್ಯಾಂಕ್‌ಗಳ ನಿಗದಿತ ಠೇವಣಿ, ಇತರೆ ಉಳಿತಾಯಗಳ ಮೇಲಿನ ಬಡ್ಡಿ ಕಡಿಮೆಯಾಗುತ್ತಲೇ ಇದೆ. ಇಂತಹ ಹೊತ್ತಿನಲ್ಲಿ ಬದಲಾಗದ ಮೌಲ್ಯ ಹೊಂದಿರುವ, ಎಲ್ಲ ಕಾಲಕ್ಕೂ ಒಂದೇ ಮೌಲ್ಯದ
ಭರವಸೆ ನೀಡುತ್ತಿರುವ ಲೋಹ ಚಿನ್ನ. ಇಂತಹ ಹೊತ್ತಿನಲ್ಲೂ 10 ಗ್ರಾಮ್‌ ಚಿನ್ನದ ಬೆಲೆ 40,000 ರೂ.ಗಿಂತ ಕಡಿಮೆಯಾಗಿಲ್ಲ.

ಬ್ಯಾಂಕ್‌ಗಳಿಗೂ ಸ್ವರ್ಣದ ಮೇಲೆಯೇ ನಂಬಿಕೆ
ಎಲ್ಲಕ್ಕಿಂತ ಮುಖ್ಯವಾಗಿ ವಿಶ್ವದ ಎಲ್ಲ ಪ್ರಮುಖ ಬ್ಯಾಂಕ್‌ಗಳಿಗೂ ಚಿನ್ನದ ಮೇಲೆ ಗರಿಷ್ಠ ನಂಬಿಕೆಯಿದೆ. ಆದ್ದರಿಂದ ದೇಶಗಳ ಕೇಂದ್ರ ಬ್ಯಾಂಕ್‌ಗಳು ತಮ್ಮ ಸಂಗ್ರಹದಲ್ಲಿ ಚಿನ್ನದ ಪ್ರಮಾಣ ಹೆಚ್ಚಿಸಿಕೊಳ್ಳುತ್ತಿವೆ. ಅಷ್ಟು ಮಾತ್ರವಲ್ಲ, ಚಿನ್ನ ಅಡವಿಟ್ಟರೆ, ಸಾಲ ಪಡೆಯುವುದು ಸುಲಭ. ಚಿನ್ನದ ಆಭರಣಗಳ ಮೇಲೆ ಆಸಕ್ತಿ ಏರಿಳಿಕೆಯಾಗುತ್ತಿದ್ದರೂ, ವಿವಿಧ ರೂಪದ ಹೂಡಿಕೆಗಳನ್ನು ಪರಿಗಣಿಸಿದರೆ ಚಿನ್ನ ನಷ್ಟ ಮಾಡುವುದಿಲ್ಲ. 2019ರಲ್ಲಿ ಉಳಿದ ರೂಪದ ಹೂಡಿಕೆ ಭಾರೀ ಚಂಚಲ ಫ‌ಲಿತಾಂಶ ನೀಡಿದ್ದರೂ, ಚಿನ್ನ ಮಾತ್ರ ಶೇ.25ರ ಲಾಭ ತಂದುಕೊಟ್ಟಿದೆ.

ಬಂಗಾರದ ಮೇಲೆ ಹೂಡಿಕೆಗೆ ಹಲವು ದಾರಿ
ಆಭರಣ ಕೊಂಡುಕೊಳ್ಳಿ
ಆಭರಣವನ್ನು ಖರೀದಿಸುವುದೇನೋ ಖುಷಿಯ ವಿಚಾರವೇ. ಆದರೆ ಅದನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳುವುದು ಒಂದು ಸವಾಲು. ಹಾಗೆಯೇ ವಿನ್ಯಾಸ ಹಳತೆನಿಸುವುದು ಇನ್ನೊಂದು ಪ್ರಶ್ನೆ. ಎಲ್ಲಕ್ಕಿಂತ ಮುಖ್ಯವಾಗಿ ವಿನ್ಯಾಸ ರಚನೆಯ ಖರ್ಚನ್ನು
(ಮೇಕಿಂಗ್‌ ಚಾರ್ಜ್‌) ಕಂಪನಿಗಳು ಗ್ರಾಹಕರ ಮೇಲೇ ಹಾಕುತ್ತವೆ. ಅದು ಶೇ. 6ರಿಂದ 25ವರೆಗೆ ಇರುತ್ತದೆ. ಇದು ಕೈಬಿಸಿಯಾಗುವ ಸಂಗತಿ.

ಸವರನ್‌ ಗೋಲ್ಡ್‌ ಬಾಂಡ್‌ಗಳು
ಇದು ಕೇಂದ್ರ ಸರ್ಕಾರ ಎರಡು ಮೂರು ತಿಂಗಳಿಗೊಮ್ಮೆ ಬಿಡುಗಡೆ ಮಾಡುವ ಚಿನ್ನದ ಬಾಂಡ್‌. ಕನಿಷ್ಠ ಒಂದು ಗ್ರಾಮ್‌ ಮೌಲ್ಯದಿಂದ ಬೇರೆ ಬೇರೆ ಮೌಲ್ಯದ ಬಾಂಡ್‌ಗಳನ್ನು ಸರ್ಕಾರ ಬಿಡುಗಡೆ ಮಾಡುತ್ತದೆ. ಕೊಳ್ಳಲು ಒಂದು ವಾರ ಅವಕಾಶವಿರುತ್ತದೆ. ಇದನ್ನು ಆರ್‌ಬಿಐ ವೆಬ್‌ ಸೈಟ್‌, ಅಂಚೆ ಕಚೇರಿ, ಬ್ಯಾಂಕ್‌ಗಳಲ್ಲಿ ಖರೀದಿಸಬಹುದು.

Advertisement

ಚಿನ್ನದ ನಾಣ್ಯಗಳು
ಭಾರತ ಸರ್ಕಾರ ಚಿನ್ನದ ನಾಣ್ಯಗಳು, ಬಾರ್‌ಗಳನ್ನು ಬಿಡುಗಡೆ ಮಾಡಿದೆ. 5ರಿಂದ 10 ಗ್ರಾಮ್‌ ಮೌಲ್ಯದ ನಾಣ್ಯದ ಒಂದು ಕಡೆ ಅಶೋಕಚಕ್ರ, ಇನ್ನೊಂದು ಕಡೆ ಮಹಾತ್ಮ ಗಾಂಧಿ ಚಿತ್ರವಿದೆ. ಹಾಗೆಯೇ 20 ಗ್ರಾಮ್‌ನ ಬಾರ್‌ಗಳನ್ನೂ ಬಿಡುಗಡೆ ಮಾಡಿದೆ. 24 ಕ್ಯಾರಟ್‌ ಗುಣಮಟ್ಟ, 999ರಷ್ಟು ಶುದಟಛಿತೆಯನ್ನು ಹೊಂದಿವೆ. ಇವನ್ನು ಆಭರಣದಂಗಡಿಗಳು, ಬ್ಯಾಂಕ್‌ಗಳು, ಬ್ಯಾಂಕೇತರ ಫೈನಾನ್ಸ್‌ ಕಂಪನಿಗಳು, ಈಗ ಇ-ಕಾಮರ್ಸ್‌ ತಾಣಗಳಲ್ಲೂ ಖರೀದಿಸಬಹುದು. ಇವನ್ನೆಲ್ಲ ಎಂಎಂಟಿಸಿ ಕೇಂದ್ರಗಳು (ಲೋಹ ಮತ್ತು ಲವಣ ವ್ಯಾಪಾರ ನಿಗಮ) ಮರು ಖರೀದಿಯನ್ನೂ ಮಾಡುತ್ತವೆ.

ಗೋಲ್ಡ್‌ ಎಕ್ಸ್‌ಚೇಂಜ್‌ ಟ್ರೇಡೆಡ್‌ ಫ‌ಂಡ್ಸ್‌
ಇದು ಷೇರು ಖರೀದಿ ಮಾಡುವ ರೀತಿಯಲ್ಲೇ ಖರೀದಿಸಲ್ಪಡುವ ಚಿನ್ನದ ಮೌಲ್ಯವಿರುವ ಪತ್ರ. ಇದನ್ನು ಬಿಎಸ್‌ಇ ಅಥವಾ ಎನ್‌ಎಸ್‌ಇನಲ್ಲೇ ಕೊಳ್ಳಬೇಕು. ಇದಕ್ಕಾಗಿ ಒಂದು ವ್ಯಾಪಾರಿ ಖಾತೆಯಿರಬೇಕು ಹಾಗೆಯೇ ಬ್ಯಾಂಕ್‌ನಲ್ಲಿ ಒಂದು ಡಿಮ್ಯಾಟ್‌ ಖಾತೆ ಹೊಂದಿರಬೇಕು. ಇಲ್ಲಿ ನೀವು ನೇರವಾಗಿ ಚಿನ್ನ ಕೊಳ್ಳುವುದಿಲ್ಲ, ಅದರ ಮೌಲ್ಯದ ಪತ್ರವನ್ನು ಕೊಳುತ್ತೀರಿ. ಮಾರುವಾಗಲೂ ಅಷ್ಟೇ. ಇಲ್ಲಿ ಆಭರಣ ಕೊಳ್ಳುವಾಗ ಇರುವ ಖರ್ಚು ಇರುವುದಿಲ್ಲ. ಬದಲಿಗೆ ನೈಜ ಬೆಲೆಯಿರುತ್ತದೆ. ಪಾರದರ್ಶಕತೆ ಗರಿಷ್ಠ ಪ್ರಮಾಣದಲ್ಲಿರುತ್ತದೆ.

ಚಿನ್ನ ಉಳಿತಾಯ ಯೋಜನೆ
ಇದನ್ನು ಆಭರಣ ಕಂಪನಿಗಳು ನಡೆಸುತ್ತವೆ. ನಿರ್ದಿಷ್ಟ ಕಂಪನಿಗಳಲ್ಲಿ ನಿಯಮಿತವಾಗಿ ಹಣ ಪಾವತಿ ಮಾಡುತ್ತ ಹೋಗುತ್ತೀರಿ. ನಿಮ್ಮ ಯೋಜನೆಯ ಅವಧಿ ಮುಗಿದ ಕೂಡಲೇ, ಸಂಗ್ರಹವಾದ ಒಟ್ಟು ಹಣಕ್ಕೆ ಸರಿಯಾಗಿ ಚಿನ್ನ ನೀಡುತ್ತಾರೆ. ಆ ವೇಳೆ ಒಂದು ತಿಂಗಳ ನಿಮ್ಮ ಕಂತನ್ನು ತಾವೇ ಸೇರಿಸಿ ನೀಡುವ ಪದಟಛಿತಿಯೂ ಇದೆ.

ಡಿಜಿಟಲ್‌ ಚಿನ್ನ
ಈಗ ಡಿಜಿಟಲ್‌ ರೂಪದಲ್ಲೂ ಚಿನ್ನ ಖರೀದಿ ಮಾಡಬಹುದು! ಸ್ಟಾಕ್‌ ಹೋಲ್ಡಿಂಗ್‌ ಕಾರ್ಪೋರೇಶನ್‌ ಆಫ್ ಇಂಡಿಯಾ, ಪೇಟಿಎಂ, ಗೋಲ್ಡ್‌ರಶ್‌ ಮೊಬೈಲ್‌ ಆ್ಯಪ್‌ಗ್ಳ ಮೂಲಕ ಡಿಜಿಟಲ್‌ ಚಿನ್ನ ಬಿಡುಗಡೆ ಮಾಡಿದೆ. ಈ ರೀತಿಯ ಹಲವು ಹೂಡಿಕೆಯಿದೆ. ಇದಕ್ಕೆಲ್ಲ ಕೇಂದ್ರಸರ್ಕಾರದ ಎಂಎಂಟಿಸಿಯ ಆಧಾರವಿದೆ.

Advertisement

Udayavani is now on Telegram. Click here to join our channel and stay updated with the latest news.

Next