Advertisement
ವಿದೇಶಿಗರಿಗೆ ವಂಚಿಸಿರುವ ಈ ಕಳ್ಳರ ಪಡೆ ಸಿಕ್ಕಿಬಿದ್ದಿದ್ದು ಮಾತ್ರ ನಗರದಲ್ಲಿ ಟಿ.ವಿ ಖರೀದಿಸುವಾಗ ಮಾಡಿದ ಅಕ್ರಮದಲ್ಲಿ. ಶ್ರೀಲಂಕಾದ ಜಾಫಾ° ಮೂಲದ ದಿವ್ಯನ್ (31), ಬೆಂಗಳೂರಿನ ಕನಕನಗರ ನಿವಾಸಿ ನವಾಜ್ ಶರೀಫ್ (22), ಎಚ್‌ಬಿಆರ್ ಲೇಔಟ್‌ನ ನದೀಮ್ ಷರೀಫ್ (30) ಬಂಧಿತರು.
Related Articles
Advertisement
ಹೇಗೆ ನಡೆಯುತ್ತಿತ್ತು ಲೂಟಿ ?: ಆರೋಪಿಗಳು ಅಮೆರಿಕಾ, ಜಪಾನ್ ಸೇರಿದಂತೆ ವಿದೇಶಗಳಲ್ಲಿನ ಕ್ರೆಡಿಟ್ ಕಾರ್ಡ್‌ದಾರರ ರಹಸ್ಯ ಮಾಹಿತಿಯನ್ನು ಹ್ಯಾಕರ್ಸ್‌ಗಳಿಂದ ಪಡೆದುಕೊಳ್ಳುತ್ತಿದ್ದರು. ಬಳಿಕ ಅಮೆಜಾನ್, ಆಲಿಬಾಬಾ ವೆಬ್‌ಸೈಟ್‌ಗಳ ಮೂಲಕ ಆನ್‌ಲೈನ್‌ನಲ್ಲಿ ಮ್ಯಾಗ್ನೆಟಿಕ್ ಸ್ವೆ„ಪಿಂಗ್ ಕಾರ್ಡ್‌ಗಳನ್ನು ಖರೀದಿಸುತ್ತಿದ್ದರು. ಹ್ಯಾಕರ್‌ಗಳಿಂದ ಪಡೆದ ಡೇಟಾಗಳನ್ನು ಮ್ಯಾಗ್ನೆಟಿಕ್ ಸ್ವೆ„ಪಿಂಗ್ ಮಿಷನ್ ಮುಖಾಂತರ ಖಾಲಿ ಕಾರ್ಡ್‌ಗಳಿಗೆ ವರ್ಗಾವಣೆ ಮಾಡುತ್ತಿದ್ದರು. ನಂತರ ಕ್ರೆಡಿಟ್ ಕಾರ್ಡ್‌ಗಳ ಮಾದರಿಯನ್ನು ಸಿದ್ದಪಡಿಸಿ, ಎಂಬೋಸ್ ಮಿಷನ್ (ಉಬ್ಬಿಸುವ ಯಂತ್ರ) ಮೂಲಕ ಕಾರ್ಡ್ ನಂಬರ್ ಮತ್ತು ಹೆಸರುಗಳನ್ನು ಎಂಬೋಸ್ ಮಾಡುತ್ತಿದ್ದರು.
ನಂತರ ಪುದುಚೇರಿ, ಹರಿಯಾಣ, ಮುಂಬೈ ಇತ್ಯಾದಿ ನಗರಗಳಲ್ಲಿನ ಏಜೆಂಟ್‌ಗಳ ಮೂಲಕ ಅಂಗಡಿಗಳಲ್ಲಿ ಉಪಯೋಗಿಸುತ್ತಿರುವ ಇಂಟರ್ ನ್ಯಾಷನಲ್ ಕ್ರೆಡಿಟ್ ಕಾರ್ಡ್ ಸ್ಪೈಪಿಂಗ್ ಮಿಷನ್‌ಗಳನ್ನು ತರಿಸಿಕೊಂಡು ಅವುಗಳ ಮೂಲಕ ತಮ್ಮ ನಕಲಿ ಕಾರ್ಡ್‌ಗಳನ್ನು ಸ್ವೆ„ಪ್ ಮಾಡಿ ಹಣ ವರ್ಗಾಯಿಸಿಕೊಳ್ಳುತ್ತಿದ್ದರು. ಅದರ ಹಣವು ಸ್ಪೈಪ್ ಮಿಷನ್ ಪಡೆದಿರುವ ಅಂಗಡಿ ಮಾಲೀಕರ ಖಾತೆಗೆ ಜಮೆಯಾಗುತ್ತಿತ್ತು. ಹೀಗೆ ಅಂಗಡಿ ಮಾಲೀಕರ ಖಾತೆಗೆ ಜಮೆಯಾದ ಹಣದ ಪೈಕಿ ಶೇ. 20ರಷ್ಟನ್ನು ಏಜೆಂಟರ್‌ಗಳಿಗೆ ನೀಡಿ ಮಿಕ್ಕ ಹಣವನ್ನು ಆರೋಪಿಗಳು ಪಡೆಯುತ್ತಿದ್ದರು.
ವಂಚನೆಯೇ ಇವರ ಅಭ್ಯಾಸ: ಆರೋಪಿಗಳ ಪೈಕಿ ಶ್ರೀಲಂಕಾದ ದಿವ್ಯನ್ ಅಕ್ರಮವಾಗಿ ಭಾರತಕ್ಕೆ ಬಂದಿದ್ದಾನೆ. ಚೆನ್ನೈನಲ್ಲಿ ನೆಲೆಸಿದ್ದ ಆತ ಅಲ್ಲಿ ಇಂತಹದ್ದೇ ಕೃತ್ಯಗಳನ್ನು ಮಾಡಿದ್ದ. ಆತನ ವಿರುದ್ಧ ಎರಡು ಪ್ರಕರಣಗಳು ಚೆನ್ನೈನ ಸಿಸಿಬಿ ಠಾಣೆಯಲ್ಲಿ ದಾಖಲಾಗಿವೆ. ಇದಾದ ಬಳಿಕ ತಲೆಮರೆಸಿಕೊಂಡು ಬೆಂಗಳೂರಿಗೆ ಬಂದಿರುವ ದಿವ್ಯನ್ ಇಲ್ಲಿಯೂ ತನ್ನ ಕೃತ್ಯ ಮುಂದುವರಿಸಿದ್ದ. ಮತ್ತೂಬ್ಬ ಆರೋಪಿ ನದೀಮ್ ಕಾಟನ್‌ಪೇಟೆ, ಉಪ್ಪಾರಪೇಟೆ ಹಾಗೂ ಮುಂಬೈನಲ್ಲಿ ಹಲವು ಠಾಣೆಗಳಲ್ಲಿ ನಡೆದ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ. ಆರೋಪಿಗಳು ವಿದೇಶಿಯರಿಗೆ ಹೆಚ್ಚು ವಂಚನೆ ಮಾಡುತ್ತಿರುವುದರಿಂದ ರಾಜ್ಯದಲ್ಲಿ ಯಾವುದೇ ದೂರುಗಳು ದಾಖಲಾಗಿಲ್ಲ.
ಸಿಕ್ಕಿಬಿದ್ದಿದ್ದು ಟಿವಿ ಖರೀದಿಸಿ ವಂಚನೆಯಲ್ಲಿ: ಮೂವರು ಆರೋಪಿಗಳು ಜೂನ್ 21ರಂದು ನಕಲಿ ಕ್ರೆಡಿಟ್ ಕಾರ್ಡ್ ಬಳಸಿ ದೊಡ್ಡಕಲ್ಲಸಂದ್ರದ ವಿಷ್ಣುಪ್ರಿಯ ಇಂಟರ್ ನ್ಯಾಷನಲ್ ಅಂಗಡಿಯಲ್ಲಿ 1.10 ಲಕ್ಷ ರೂ. ಮೌಲ್ಯದ 3 ಎಲ…ಇಡಿ ಟಿವಿಗಳನ್ನು ಖರೀದಿಸಿದ್ದರು. ಆದರೆ, ಈ ಹಣ ಮಾಲೀಕರ ಖಾತೆಗೆ ಜಮೆಯಾಗಿರಲಿಲ್ಲ. ಈ ಸಂಬಂಧ ದಾಖಲಾದ ದೂರಿನನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳು ಬಳಸುತ್ತಿದ್ದ ಮೊಬೈಲ್‌ಗಳ ನೆಟ್‌ವರ್ಕ್‌ಗಳನ್ನು ಆಧರಿಸಿ ಅವರನ್ನು ಬಂಧಿಸಿದ್ದಾರೆ.
ಕಾರ್ಡ್ ವ್ಯವಹಾರ ಸುರಕ್ಷಿತಗೊಳಿಸಲು ಬ್ಯಾಂಕ್‌ಗಳಿಗೆ ಸೂಚನೆ ಬೆಂಗಳೂರು: ಕ್ಯಾಶ್‌ಲೆಸ್ ವ್ಯವಹಾರ ಮುಂಚೂಣಿಗೆ ಬಂದಿರುವುದರಿಮದ ಇತ್ತೀಚೆಗೆ ಆನ್‌ಲೈನ್ ವಂಚನೆ ಪ್ರಕರಣಗಳೂ ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ಸೇರಿದಂತೆ ಇತರ ಬ್ಯಾಂಕ್‌ಗಳ ಹಿರಿಯ ಅಧಿಕಾರಿಗಳ ಸಭೆ ಕರೆದು ಎಟಿಎಂ ಕಾರ್ಡ್, ಕ್ರೆಡಿಟ್ ಕಾರ್ಡ್‌ಗಳನ್ನು ಇನ್ನಷ್ಟು ಆಧುನಿಕರಣಗೊಳಿಸುವಂತೆ ಸೂಚಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಹೇಳಿದ್ದಾರೆ. ಬ್ಯಾಂಕ್‌ಗಳಿಂದ ನೀಡಲಾಗುವ ಕಾರ್ಡ್‌ಗಳನ್ನು ಮತ್ತಷ್ಟು ಹೈಟೆಕ್‌ಗೊಳಿಸಿ ವಂಚನೆ ನಡೆಯದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಗ್ರಾಹಕರ ರಹಸ್ಯ ಸಂಖ್ಯೆಗಳು ಸೋರಿಕೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಲಾಗಿದೆ ಎಂದು ಸೂದ್ ತಿಳಿಸಿದರು. ಎಟಿಎಂ ಕೇಂದ್ರಗಳಲ್ಲಿ ಸ್ಕೀಮ್ಮರ್‌ಗಳನ್ನು ಅಳವಡಿಸಿ ಖಾತೆದಾರರ ಮಾಹಿತಿ ಪಡೆದು 13 ಲಕ್ಷಕ್ಕೂ ಹೆಚ್ಚಿನ ವಂಚನೆ ನಡೆಸಿರುವ 29ಕ್ಕೂ ಹೆಚ್ಚು ಪ್ರಕರಣಗಳು ನಗರದಲ್ಲಿ ದಾಖಲಾಗಿವೆ. ಇ ದನ್ನು ಗಂಭೀರವಾಗಿ ಪರಿಗಣಿಸಿ ಬ್ಯಾಂಕ್ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗಿದೆ ಎಂದು ಹೇಳಿದರು. ಅಲ್ಲದೆ, ಕಾರ್ಡ್‌ಗಳ ಬದಲು ಬ್ಯಾಂಕ್ ಗ್ರಾಹಕರಿಗೆ ಚಿಪ್ ವ್ಯವಸ್ಥೆ ಮಾಡುವಂತೆಯೂ ಸಲಹೆ ನೀಡಲಾಗಿದೆ. ಎಟಿಎಂ ಕೇಂದ್ರಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಇನ್ನಷ್ಟು ಬಿಗಿಗೊಳಿಸಿ ಅತ್ಯಾಧುನಿಕ ತಂತ್ರಜ್ಞಾನ ಬಳಸಲು ಸೂಚಿಸಿಸಲಾಗಿದೆ ಎಂದರು.