Advertisement

ಆನ್‌ಲೈನ್‌ ತರಗತಿಗೂ ಎದುರಾಗುತ್ತಿದೆ ತಾಂತ್ರಿಕ ಸಮಸ್ಯೆ

10:06 AM Apr 09, 2020 | Sriram |

ಬೆಂಗಳೂರು: ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿರುವುದರಿಂದ ಬಹುತೇಕ ವಿಶ್ವವಿದ್ಯಾನಿಲಯಗಳು ತಮ್ಮ ವ್ಯಾಪ್ತಿಯ ಕಾಲೇಜಿನ ವಿದ್ಯಾರ್ಥಿಗಳ ಪಠ್ಯಕ್ರಮ ಪೂರ್ಣಗೊಳಿಸಲು ಆನ್‌ಲೈನ್‌ ತರಗತಿಗಳ ಮೊರೆ ಹೋಗುತ್ತಿದ್ದು, ವಿದ್ಯಾರ್ಥಿಗಳಿಗೆ ತಾಂತ್ರಿಕ ತೊಂದರೆ ಎದುರಾಗುತ್ತಿವೆ.

Advertisement

ವಿದ್ಯಾರ್ಥಿಗಳಿಗೆ “ಝೂಮ್‌ ಆ್ಯಪ್‌’ ಮೂಲಕ ಆನ್‌ಲೈನ್‌ನಲ್ಲಿ ತರಗತಿ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಆನ್‌ಲೈನ್‌ಗೆ ಬಂದ ಕೂಡಲೇ ಪ್ರಾಧ್ಯಾಪಕರು ತರಗತಿಯನ್ನು ಆರಂಭಿಸುತ್ತಾರೆ. ಇಂಟರ್‌ನೆಟ್‌ ಸಮಸ್ಯೆ ಇರುವವರಿಗೆ ಇದರಲ್ಲಿ ಸರಿಯಾಗಿ ಕೇಳಿಸುವುದೇ ಇಲ್ಲ. ಅಲ್ಲದೇ ಬಹುತೇಕ ವಿದ್ಯಾರ್ಥಿಗಳು ಈಗ ತಮ್ಮ ಮನೆಯಲ್ಲಿ ಇರುವುದರಿಂದ ಇಂಟರ್‌ನೆಟ್‌ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹೀಗಾಗಿ “ಝೂಮ್‌ ಆ್ಯಪ್‌’ ಬಳಸಿ ಆನ್‌ಲೈನ್‌ ತರಗತಿ ನಡೆಸುವುದು ಕಷ್ಟವಾಗುತ್ತಿದೆ ಎಂದು ಕೆಲವು ಪ್ರಾಧ್ಯಾಪಕರೇ ಹೇಳುತ್ತಿದ್ದಾರೆ.

ದಿನಕ್ಕೆ ಒಂದೊಂದು ವಿಷಯವನ್ನು ಆನ್‌ಲೈನ್‌ ಮೂಲಕ ನಡೆಸುವುದು ಕಷ್ಟ. ತರಗತಿಯ ವೀಡಿಯೋ ಮಾಡಿ, ಅದನ್ನು ಯೂಟ್ಯೂಬ್‌ ಅಥವಾ ಇನ್ಯಾವುದಾದರು ಮಾಧ್ಯಮದ ಮೂಲಕ ಪ್ರಸಾರ ಮಾಡುವುದು ಉತ್ತಮ. ಆನ್‌ಲೈನ್‌ ತರಗತಿ ನಿರಂತರ ಒಂದು ಗಂಟೆ ನಡೆಸಲು ಸಾಧ್ಯವಾಗುತ್ತಿಲ್ಲ. ಒಂದು ತರಗತಿಯಲ್ಲಿ ಕನಿಷ್ಠ 10-30ರಷ್ಟು ವಿದ್ಯಾರ್ಥಿಗಳು ಇರುತ್ತಾರೆ. ಅವರೆಲ್ಲರೂ ಆನ್‌ಲೈನ್‌ ಬರಬೇಕಾಗುತ್ತದೆ. ಒಬ್ಬರು ಅಥವಾ ಇಬ್ಬರಿಗಾಗಿ ಪ್ರತ್ಯೇಕ ತರಗತಿ ನಡೆಸಲು ಸಾಧ್ಯವಿಲ್ಲ. ಹಲವು ರೀತಿಯ ತಾಂತ್ರಿಕ ಸಮಸ್ಯೆಯಿದೆ. ಪರೀಕ್ಷೆಗೆ ಬೇಕಾದ ಸಿದ್ಧತೆಯ ಟಿಪ್ಸ್‌ ನೀಡಬಹುದೇ ವಿನಾ ನಿರಂತರ ತರಗತಿ ಕಷ್ಟಸಾಧ್ಯವಾಗುತ್ತಿದೆ ಎಂದು ಪ್ರಾಧ್ಯಾಪಕರೊಬ್ಬರು ಮಾಹಿತಿ ನೀಡಿದರು.

ನಿತ್ಯ ಆನ್‌ಲೈನ್‌ ತರಗತಿ ಈ ಮೂಲಕ ಫಾಲೋ ಮಾಡುವುದು ಕಷ್ಟವಾಗುತ್ತಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next