Advertisement

OnePlus 13 ಮುಂದಿನ ತಿಂಗಳು ಬಿಡುಗಡೆ

08:20 PM Dec 05, 2024 | Team Udayavani |

ಬೆಂಗಳೂರು: ಒನ್ ಪ್ಲಸ್ ಬ್ರಾಂಡ್ ನ ಅತ್ಯುನ್ನತ ಸರಣಿಯ OnePlus 13 ಮೊಬೈಲ್ 2025ರ ಜನವರಿಯಲ್ಲಿ ಜಾಗತಿಕ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ಕಂಪೆನಿ ಘೋಷಿಸಿದೆ.

Advertisement

ಸಾಮಾನ್ಯವಾಗಿ ಒನ್ ಪ್ಲಸ್ ಬಿಡುಗಡೆ ದಿನದಂದು ತನ್ನ ಫ್ಲಾಗ್ಶಿಪ್ ಮೊಬೈಲ್ನ ವಿಶೇಷಗಳನ್ನು ಪರಿಚಯಿಸುತ್ತಿತ್ತು. ಈ ಬಾರಿ ಬಿಡುಗಡೆಗೆ ಒಂದು ತಿಂಗಳು ಮೊದಲೇ ಹೊಸ ಮೊಬೈಲ್ನ ಬಗ್ಗೆ ಕೆಲವು ಮಾಹಿತಿಗಳನ್ನು ಬಿಡುಗಡೆ ಮಾಡಿದೆ.

OnePlus 13 ಮೂರು ವಿಶಿಷ್ಟ ಬಣ್ಣಗಳಲ್ಲಿ ಪ್ರಪಂಚದಾದ್ಯಂತ ಬಿಡುಗಡೆಯಾಗಲಿದೆ. ಮಿಡ್ ನೈಟ್ ಓಷನ್, ಬ್ಲ್ಯಾಕ್ ಎಕ್ಸಿಪ್ಸ್ ಮತ್ತು ಆರ್ಕಿಟಿಕ್ ಡಾನ್ ಎಂಬ ಮೂರು ಬಣ್ಣಗಳಲ್ಲಿ ಇದು ಬರಲಿದೆ. ಮುಖ್ಯ ವಿಶೇಷವೆಂದರೆ ಇದು IP68 + IP69 ರೇಟಿಂಗ್ ಪಡೆದಿರುವ ಮೊದಲ ಒನ್ ಪ್ಲಸ್ ಫೋನ್ ಆಗಿದೆ.

OnePlus 13 ಅತ್ಯಾಧುನಿಕ ಆವಿಷ್ಕಾರ, ವೇಗದ ಮತ್ತು ಸುಗಮ ಕಾರ್ಯಕ್ಷಮತೆ ಮತ್ತು AI ಅನ್ನು ಸೊಗಸಾದ, ಶೋಸ್ಟಾಪಿಂಗ್ ವಿನ್ಯಾಸದೊಂದಿಗೆ ಸಂಯೋಜಿಸುತ್ತದೆ. ಮಿಡ್ ನೈಟ್ ಓಷನ್, ಬ್ಲ್ಯಾಕ್ ಎಕ್ಲಿಪ್ಸ್ ಮತ್ತು ಆರ್ಕ್ಟಿಕ್ ಡಾನ್ ಎಂಬ ಮೂರು ಬೆರಗುಗೊಳಿಸುವ ಬಣ್ಣಗಳಲ್ಲಿ ಇದು ಲಭ್ಯವಿರುತ್ತದೆ ಮತ್ತು IP68 + IP69 ರೇಟಿಂಗ್ ಅನ್ನು ಪಡೆದುಕೊಂಡ ಮೊದಲ OnePlus ಫೋನ್ ಆಗಿದೆ, OnePlus 13 ನ ಮಿಡ್ನೈಟ್ ಓಷನ್ ಕಲರಿನ ಮಾದರಿ ಮೈಕ್ರೋ-ಫೈಬರ್ ವೀಗನ್ ಲೆದರ್ ಅನ್ನು ಒಳಗೊಂಡಿರುವ ಮೊದಲ ಫೋನ್ ಆಗಿದೆ.

OnePlus 13 ಸರಣಿಯು ಭಾರತದಲ್ಲಿ 5.5G ಸಂಪರ್ಕ ಅನುಭವವನ್ನು ನೀಡುವ ಮೊದಲ ಸ್ಮಾರ್ಟ್ಫೋನ್ ಆಗಿದೆ. ಸರಾಸರಿ 380% ಹೆಚ್ಚಿನ ವೇಗ ಹೊಂದಿದೆ. ದೆಹಲಿ ಮೆಟ್ರೋದಂತಹ ಸ್ಥಳಗಳಿಗೆ ಕಸ್ಟಮೈಸ್ ಮಾಡಿದ ಸಿಗ್ನಲ್ ಆಪ್ಟಿಮೈಸೇಶನ್ ನೀಡುತ್ತಿದೆ. ವಿವಿಧ ಸೆಟ್ಟಿಂಗ್ಗಳಲ್ಲಿ ತಡೆರಹಿತ ಸಂಪರ್ಕ ಮತ್ತು ಉತ್ತಮ ನೆಟ್ವರ್ಕ್ ದೊರಕಲಿದೆ.
OnePlus 13 ಸರಣಿಯ ಫೋನ್ ಗಳು ಭಾರತದಲ್ಲಿ, 360 ಮೀಟರ್ ವರೆಗೆ  ಬ್ಲೂಟೂತ್ ಸಂಪರ್ಕ ವ್ಯಾಪ್ತಿಯನ್ನು ಹೊಂದಿರಲಿವೆ. ಜಿಮ್ ಗಳಲ್ಲಿ ಕಸರತ್ತು ಮಾಡುವವರು, ತಮ್ಮ ಫೋನ್ ಅನ್ನು ಲಾಕರ್ ನಲ್ಲಿ ಸುರಕ್ಷಿತವಾಗಿಟ್ಟು, ಬ್ಲೂಟೂತ್ ಇಯರ್ ಫೋನ್ ಗಳನ್ನು ಬಳಸಬಹುದು.

Advertisement

OnePlus 13 ಕುರಿತು ಹೆಚ್ಚಿನ ಮಾಹಿತಿ, ಅದರ ವಿಶ್ವಾದ್ಯಂತ ಬಿಡುಗಡೆಯ ವಿವರಗಳನ್ನು ಮುಂಬರುವ ವಾರಗಳಲ್ಲಿ ಕಂಪೆನಿ ಪ್ರಕಟಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next