Advertisement

ಸರ್ವಜ್ಞರ ವಚನ ಸಾರ್ವಕಾಲಿಕ

11:05 AM Feb 21, 2018 | |

ಚಿತ್ತಾಪುರ: ತ್ರಿಪದಿ ಕವಿ ಸರ್ವಜ್ಞರ ವಚನಗಳು  ಸಾರ್ವಕಾಲಿಕವಾಗಿವೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ತಾಲೂಕು ಗೌರವ ಕಾರ್ಯದರ್ಶಿ ಸಿದ್ಧಲಿಂಗ ಬಾಳಿ ಹೇಳಿದರು.

Advertisement

ಪಟ್ಟಣದ ತಹಶೀಲ್‌ ಕಚೇರಿಯಲ್ಲಿ ತಾಲೂಕು ಆಡಳಿತ ವತಿಯಿಂದ ಮಂಗಳವಾರ ನಡೆದ ಸರ್ವಜ್ಞ ಜಯಂತಿ
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಸರ್ವಜ್ಞರ ವಚನಗಳು ವಿಶ್ವದಲ್ಲಿ ಶ್ರೇಷ್ಠವಾಗಿವೆ. ಎಲ್ಲವನ್ನು ಬಲ್ಲವನೇ
ಸರ್ವಜ್ಞ. ಅವರು ನೇರವಾಗಿ ನುಡಿಯುವ ಕವಿಯಾಗಿದ್ದರು. ಅವರ ವಚನಗಳಲ್ಲಿ ಆರೋಗ್ಯದ ಕುರಿತು ಸೂತ್ರಗಳು
ಅಡಗಿದ್ದವು. ಮಕ್ಕಳಿಗೆ ಅವರ ವಚನಗಳು ದಾರಿ ದೀಪವಾಗಿವೆ. ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನೆಮ್ಮದಿ ಬದುಕು ನಡೆಸಬಹುದೆಂದು ಹೇಳಿದರು.

ತಾಲೂಕು ಕುಂಬಾರ ಸಮಾಜ ಅಧ್ಯಕ್ಷ ಹಾಗೂ ರಾಜ್ಯ ಕುಂಬಾರರ ಯುವ ಸೈನ್ಯ ರಾಜ್ಯಾಧ್ಯಕ್ಷ ಜಗದೇವ ಕುಂಬಾರ
ಮಾತನಾಡಿದರು. ಗ್ರೇಡ್‌-2 ತಹಶೀಲ್ದಾರ್‌ ರವೀಂದ್ರ ದಾಮಾ ಉದ್ಘಾಟಿಸಿದರು. 

ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಹೋತಿನಮಡಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳೊಂಡಗಿ, ಗಂಗಾಧರ ಜೆಇ, ಭೀಮಣ್ಣ ಹೋತಿನಮಡಿ, ಶ್ರೀಮಂತ ಕುಂಬಾರ, ಲಕ್ಷ್ಮೀಕಾಂತ ಸಾಲಿ, ಮಹೇಶ ಕಾಶಿ,
ಸಿದ್ರಾಮಯ್ಯ ಗೊಂಬಿಮಠ, ಶಿವುಕುಮಾರ ಕುಂಬಾರ, ಸಾಬಣ್ಣ ಮೊಗಲಾ, ಕಾಶಿರಾಯ ನಂದೂರ, ದಶರಥ, ಮಧುಸೂಧನ ಘಾಳೆ, ಚಂದ್ರಶೇಖರ ಪಾಟೀಲ್‌ ಮಲಕೂಡ ಇದ್ದರು. ನರಸಪ್ಪ ಚಿನ್ನಕಟ್ಟಿ ನಿರೂಪಿಸಿದರು.

ಕವಿ ಸರ್ವಜ್ಞ ಅಜರಾಮರ: ಕಟ್ಟಿಮನಿ
ಶಹಾಬಾದ:
ತ್ರಿಕಾಲ ಜ್ಞಾನಿಯಾಗಿ, ವಾಸ್ತವಿಕೆ ಅರಿತು, ತ್ರಿಪದಿಗಳ ಮೂಲಕ ಕಂಡ ಸತ್ಯವನ್ನು ನೇರ ಮತ್ತು ನಿಷ್ಠುರವಾಗಿ ಹೇಳಿ ಸಮಾಜಕ್ಕೆ ಮಾರ್ಗದರ್ಶನ ನೀಡುವ ಮೂಲಕ ಕವಿ ಸರ್ವಜ್ಞ ಇಂದಿಗೂ ಅಜರಾಮರವಾಗಿದ್ದಾರೆ ಎಂದು ಶಿವಯೋಗಿಸ್ವಾಮಿ ಪ್ರೌಢಶಾಲೆ ಶಿಕ್ಷಕ ಶಿವಯೋಗಿ ಕಟ್ಟಿಮನಿ ಹೇಳಿದರು.

Advertisement

ನಗರದ ಶಿವಯೋಗಿಸ್ವಾಮಿ ಪ್ರೌಢಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾಡಿನೆಲ್ಲಡೆ ಸಂಚರಿಸಿ ಎಲ್ಲ ಕ್ಷೇತ್ರಗಳಲ್ಲಿ ಕಂಡ ಸತ್ಯವನ್ನು ನೇರವಾಗಿ ಹೇಳುವ ಮೂಲಕ ಸಮಾಜಕ್ಕೆ ಎಚ್ಚರಿಕೆ ನೀಡಿದ್ದಾರೆ. ವಿದ್ಯೆ, ಜಾತಿ, ಕೃಷಿ, ಮಾತು, ದುಶ್ಚಟಗಳ ಕುರಿತು ವಚನಗಳ ಮೂಲಕ ಜಾಗೃತಿ ಮೂಡಿಸಿದ್ದಾರೆ ಎಂದರು. ಸುಧಾಬಾಯಿ ಕುಲಕರ್ಣಿ, ಗಣೇಶ ಜಾಯಿ, ಮಹೇಂದ್ರ ದೊಡ್ಡಮನಿ, ನಾಗವೇಣಿ ಅವಿನಾಶ ಕಂಬಾನೂರ, ಸುರೇಶ ಕುಲಕರ್ಣಿ, ಸುನೀತಾ ಬಿರಾದಾರ, ಸವಿತಾ.ಆರ್‌ ಇದ್ದರು. 

ಭಂಕೂರ: ಗ್ರಾಮದ ವರ್ತೂರ ಪ್ರಕಾಶ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ತ್ರಿಪದಿ ಕವಿ ಸರ್ವಜ್ಞ ಜಯಂತಿ
ಆಚರಿಸಲಾಯಿತು. ಮುಖ್ಯಗುರು ಹಣಮಂತ ಕುಂಬಾರ ಮಾತನಾಡಿದರು. ಶಶಿಕಲಾ ಪೂಜಾರಿ, ಅರ್ಚನಾ ಚವ್ಹಾಣ,
ಗಂಗಮ್ಮ ತಿಪ್ಪಣನವರ್‌, ಕವಿತಾ ಬುರ್ಜಾ, ಶಂಕ್ರಮ್ಮ, ಶಿಕ್ಷಕರು ಹಾಗೂ ಶಾಲಾಮಕ್ಕಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next