Advertisement

ಮಹಾಮಂಡಳ ಲಾಂಛನ ಬಿಡುಗಡೆ

11:23 AM Aug 28, 2017 | Team Udayavani |

ಬೀದರ: ನಗರದ ಗಣೇಶ ಮೈದಾನದಲ್ಲಿ ರವಿವಾರ ನಡೆದ ಕಾರ್ಯಕ್ರಮದಲ್ಲಿ ಗಣೇಶ ಮಹಾಮಂಡಳದ ಲಾಂಛನ (ಸ್ಟೀಕರ್‌) ಬಿಡುಗಡೆ ಮಾಡಲಾಯಿತು. ಮಹಾ ಮಂಡಳ ಅಧ್ಯಕ್ಷ ಚಂದ್ರಶೇಖರ ಪಾಟೀಲ ಗಾದಗಿ ಬಿಡುಗಡೆಗೊಳಿಸಿ ಮಾತನಾಡಿ, ಗಣೇಶ ಉತ್ಸವವನ್ನು ಪ್ರತಿ ವರ್ಷದಂತೆ ವಿಜೃಂಭಣೆಯಿಂದ ಆಚರಸಲಾಗುತ್ತಿದೆ. ನಗರದಲ್ಲಿ ಆ.25 ರಂದು ಮೂರ್ತಿ ಪ್ರತಿಷ್ಠಾಪನೆಗೊಂಡು ಆ.29ರಂದು ವಿಸರ್ಜನೆಗೊಳ್ಳಲಿವೆ. ಐತಿಹಾಸಿಕ ಚೌಬಾರದಿಂದ ಮಹಾಮಂಡಲ ವತಿಯಿಂದ ಎಲ್ಲಾ ಸಾರ್ವಜನಿಕ ಗಣೇಶ ಮಂಡಳಿಗಳಿಗೆ ಭವ್ಯ ಸ್ವಾಗತ ಕೋರಲಾಗುವುದು. ಆ.29ರಂದು ಮೆರವಣಿಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಚಾಲನೆ ನೀಡುವರು ಎಂದು ಹೇಳಿದರು. ಪ್ರಧಾನ ಕಾರ್ಯದರ್ಶಿ ಬಾಬು ವಾಲಿ ಮಾತನಾಡಿ, ಡಿಜೆ ಪರವಾನಗಿ ನೀಡಿ ಸಹಕರಿಸಿದ ಸಚಿವರು ಮತ್ತು ಜಿಲ್ಲಾಡಳಿತಕ್ಕೆ ಧನ್ಯವಾದಗಳು. ವಿಸರ್ಜನೆ ದಿನದಂದು ಮಧ್ಯಾಹ್ನ 3:30ಕ್ಕೆ ರಾಮ ಮಂದಿರ ಗಣೇಶನಿಗೆ ಪ್ರಥಮ ಪೂಜೆಯನ್ನು ಜಿಲ್ಲಾ ಧಿಕಾರಿ ಎಚ್‌.ಆರ್‌. ಮಹಾದೇವ, ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ದೇವರಾಜ್‌ ಮತ್ತು ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಆರ್‌. ಸೇಲ್ವಮಣಿ ನೆರವೇರಿಸುವರು ಎಂದು ತಿಳಿಸಿದರು. ಸಂಸದ ಭಗವಂತ ಖೂಬಾ, ಶಾಸಕರಾದ ರಹೀಮ್‌ ಖಾನ್‌, ರಾಜಶೇಖರ ಪಾಟೀಲ, ಪ್ರಭು ಚವ್ಹಾಣ, ಅಶೋಕ ಖೇಣಿ, ಮಲ್ಲಿಕರ್ಜುನ ಖುಬಾ, ರಘುನಾಥ ಮಲ್ಕಾಪುರೆ, ವಿಜಯ ಸಿಂಗ್‌, ಅಮರನಾಥ ಪಾಟೀಲ,
ಜಿಪಂ ಅಧ್ಯಕ್ಷೆ ಭಾರತಬಾಯಿ, ನಗರ ಸಭೆ ಅಧ್ಯಕ್ಷ ಶಾಲಿನಿ ಚಿಂತಾಮಣಿ, ಮಾಜಿ ಸಚಿವ ಬಂಡೆಪ್ಪಾ ಖಾಶೆಂಪೂರ, ಮಾಜಿ ಶಾಸಕ ಪ್ರಕಾಶ ಖಂಡ್ರೆ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ, ಪ್ರಮುಖರಾದ ಶಿವಶರಣಪ್ಪಾ ವಾಲಿ, ಗುರುನಾಥ ಕೊಳ್ಳುರ್‌, ಸೂರ್ಯಕಾಂತ ನಾಗಮಾರಪಳ್ಳಿ, ಬಲಬೀರ ಸಿಂಗ್‌, ಬಸವರಾಜ ಪಾಟೀಲ ಅಷ್ಟೂರು, ಡಿ.ವಿ. ಸಿಂಧೋಲ್‌, ಬಿ.ಜಿ. ಶೆಟಕಾರ್‌, ಶೈಲೇಂದ್ರ ಬೆಲ್ದಾಳೆ ಪಾಲ್ಗೊಳ್ಳುವರು ಎಂದರು. ಈ ವೇಳೆ ದೀಪಕ ವಾಲಿ, ರಜನೀಶ ವಾಲಿ, ರಾಜು ಚಿದ್ರಿ, ಹಣಮಂತ ಬುಳ್ಳಾ, ಮಹೇಶ ಪಾಲಂ, ಶಿವಪುತ್ರ ವೈದ್ಯ, ಸುಭಾಷ ಚೋಳಕರ್‌, ದೇವೇಂದ್ರ ಎಮ್ಮೆಕರ್‌ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next