Advertisement
ಈಶಾನ್ಯಕ್ಕೆ ಹಾನಿಯಾಗದು: ಇದಕ್ಕೂ ಮುನ್ನ ಅಸ್ಸಾಂನಲ್ಲಿ ರ್ಯಾಲಿ ನಡೆಸಿದ ಅವರು, ಪೌರತ್ವ ವಿಧೇಯಕದಿಂದ ಅಸ್ಸಾಂಗಾಗಲೀ, ಈಶಾನ್ಯ ರಾಜ್ಯಗಳ ಹಿತಾಸಕ್ತಿಗಾಗಲೀ ಯಾವುದೇ ಹಾನಿಯಾಗದು ಎಂಬ ಭರವಸೆ ನೀಡಿದ್ದಾರೆ. ಸೂಕ್ತ ತನಿಖೆ ಮತ್ತು ರಾಜ್ಯ ಸರಕಾರದ ಶಿಫಾರಸಿನ ನಂತರವೇ ಪೌರತ್ವ ನೀಡಲಾಗುತ್ತದೆ ಎಂದಿದ್ದಾರೆ.
ಅರುಣಾಚಲಪ್ರದೇಶಕ್ಕೆ ಪ್ರಧಾನಿ ಮೋದಿ ಭೇಟಿ ನೀಡುತ್ತಿದ್ದಂತೆ ನೆರೆರಾಷ್ಟ್ರ ಚೀನಾ ಕಾಲ್ಕೆರೆದಿದೆ. “ಭಾರತ-ಚೀನಾ ಗಡಿಗೆ ಸಂಬಂಧಿಸಿ ಚೀನಾದ ನಿಲುವು ಸ್ಪಷ್ಟವಾ ಗಿದ್ದು, ಗಡಿಯ ಪೂರ್ವ ಭಾಗಕ್ಕೆ ಭಾರತೀ ಯ ನಾಯಕತ್ವವು ಭೇಟಿ ನೀಡು ವುದನ್ನು ನಾವು ವಿರೋಧಿಸುತ್ತೇವೆ. ಗಡಿ ಸಮಸ್ಯೆ ಉಲ್ಬಣಿಸುವಂಥ ಯಾವುದೇ ಕ್ರಮದಿಂದ ಭಾರತ ದೂರವಿರಬೇಕು’ ಎಂದು ಚೀನಾ ವಿದೇಶಾಂಗ ಇಲಾಖೆ ಎಚ್ಚರಿಸಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಭಾರತದ ವಿದೇಶಾಂಗ ಇಲಾಖೆ, ಅರು ಣಾಚಲವು ಭಾರತದ ಅವಿಭಾಜ್ಯ ಅಂಗ. ಭಾರತೀಯ ನಾಯಕರು ದೇಶದ ಇತರೆ ಭಾಗಗಳಿಗೆ ಹೋದಂತೆ ಅರುಣಾಚಲಕ್ಕೂ ಹೋಗು ತ್ತಿರುತ್ತಾರೆ. ಇದನ್ನು ಹಲವು ಬಾರಿ ಚೀನಾಗೆ ಸ್ಪಷ್ಟಪಡಿಸಿದ್ದೇವೆ ಎಂದಿದೆ.
Related Articles
ಪೌರತ್ವ ವಿಧೇಯಕ ಖಂಡಿಸಿ ಅಸ್ಸಾಂನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಬಿಸಿ ಪ್ರಧಾನಿ ಮೋದಿ ಅವರಿಗೂ ತಟ್ಟಿದೆ. ಎರಡು ಕಡೆ ಮೋದಿಯವರಿಗೆ ಪ್ರತಿಭಟನಾಕಾರರು ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ. ಅಲ್ಲದೆ, ಪ್ರತಿಕೃತಿಗಳನ್ನೂ ದಹಿಸಿದ್ದಾರೆ. ಜನತಾ ಭವನದ ಮುಂದೆ ಬೆತ್ತಲೆ ಪ್ರತಿಭಟನೆ ನಡೆಸಿದ ಕೃಷಕ್ ಮುಕ್ತಿ ಸಂಗ್ರಾಮ್ ಸಮಿತಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಾಯ್ ಯುವ ಪರಿಷತ್ 12 ಗಂಟೆಗಳ ಅಸ್ಸಾಂ ಬಂದ್‌ಗೆ ಕರೆ ನೀಡಿತ್ತು.
Advertisement