Advertisement
ಸಚಿವರಿಗೆ ಪತ್ರಮೂಲತಃ ನಾವುಂದದವರಾಗಿರುವ ಅಬ್ಟಾಸ್ ಬೈಂದೂರಿನ ಯೋಜನಾ ನಗರದಲ್ಲಿ ವಾಸಿಸುತ್ತಿದ್ದಾರೆ.ಬೈಂದೂರು ವ್ಯಾಪ್ತಿಯಲ್ಲಿ ಚಿರಪರಿಚಿತರಾಗಿರುವ ಇವರು ಅಪ್ಪಟ ಸ್ವಾಭಿಮಾನದ ವ್ಯಕ್ತಿತ್ವ ಹೊಂದಿದ್ದಾರೆ.ಕಳೆದೆರಡು ವರ್ಷಗಳಿಂದ ನಡೆಯುತ್ತಿರುವ ಕುಂದಾಪುರದಿಂದ ಗೋವಾದವರೆಗಿನ ಹೆದ್ದಾರಿ ಕಾಮಗಾರಿ ವೇಳೆ ಒತ್ತಿನೆಣೆ ರಾಘವೇಂದ್ರ ಮಠದ ರಸ್ತೆ ಕೊರೆದಿರುವುದರಿಂದ ಭಕ್ತರಿಗೆ ದೇವಸ್ಥಾನ ಬೇಟಿ ಮಾಡಬೇಕಾದರೆ ಸುತ್ತು ಬಳಸಿಬರಬೇಕಾಗಿದೆ.ಇದರ ಬಗ್ಗೆ ಧ್ವನಿ ಎತ್ತಿದವರಲ್ಲಿ ಅಬ್ಟಾಸ್ ಸಾಹೇಬರು ಕೂಡ ಒಬ್ಬರಾಗಿದ್ದಾರೆ.ಈ ಕುರಿತು ಜಿಲ್ಲಾಧಿಕಾರಿಗಳಿಗೆ ಹಾಗೂ ಸಚಿವರಿಗೆ ಪತ್ರ ಬರೆದು ಉತ್ತರವನ್ನು ಕೂಡ ಪಡೆದಿದ್ದಾರೆ.ಹೆದ್ದಾರಿ ಅವ್ಯವಸ್ಥೆಯಿಂದಾಗಿ ವಿವಿಧ ಕಡೆ ನಿತ್ಯ ಸಮಸ್ಯೆಯಾಗುತ್ತಿದೆ.ಇದನ್ನು ಸರಿಪಡಿಸಬೇಕು ಅಪಘಾತ ನಿಯಂತ್ರಣವಾಗಬೇಕು ಎಂದು ದಿನಂಪ್ರತಿ ಜನಪ್ರತಿನಿಧಿಗಳ ಮನೆಗೆ ಹಾಗೂ ಕಚೆೇರಿಗಳಿಗೆ ಅಲೆಯುವುದು ಇವರ ನಿತ್ಯ ಕಾಯಕವಾಗಿದೆ.
ಬೈಂದೂರು ಹೊಸ ಬಸ್ ನಿಲ್ದಾಣದಲ್ಲಿ ಬಸ್ಸುಗಳು ಎಲ್ಲೆಂದರಲ್ಲಿ ನಿಲ್ಲುವುದನ್ನು ತಪ್ಪಿಸಲು ಹಾಗೂ ಬಸ್ಸು ನಿಲ್ದಾಣದ ಒಳಗೆ ಹೋಗಬೇಕೆಂದು ಆಗ್ರಹಿಸಿ ಸ್ವಂತ ಹಣದಲ್ಲಿ ಹೆದ್ದಾರಿ ಪಕ್ಕದಲ್ಲಿ ಸೂಚನಾ ಫಲಕ ಅಳವಡಿಸಿದ್ದಾರೆ.ಇದಲ್ಲದೆ ಆರಕ್ಷಕ ಠಾಣೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಾರ್ವಜನಿಕರಿಗಾಗುವ ತೊಂದರೆ ಕುರಿತು ಮನವರಿಕೆ ಮಾಡಿಕೊಡುವ ಹವ್ಯಾಸ ಬೆಳಸಿಕೊಂಡಿದ್ದಾರೆ.ಅದೇನೆಯಿದ್ದರು ಸಹ ಇಳಿವಯಸ್ಸಿನಲ್ಲಿ ವಿಶ್ರಾಂತಿ ಪಡೆದರೆ ಸಾಕು ಎನ್ನುವ ಮನಸ್ಥಿತಿ ಇರುವಾಗ ಸಮಾಜ ,ಸಾರ್ವಜನಿಕರು ಎನ್ನುವ ಕಾಳಜಿ ವಹಿಸಿ ತಮ್ಮಿಂದಾದ ಜನಜಾಗೃತಿ ಕುರಿತು ಹೋರಾಡುವ ಅಬ್ಟಾಸ್‌ರವರಿಗೊಂದು ಅಭಿನಂದನೆ ಹೇಳಲೇಬೇಕು. – ಅರುಣ ಕುಮಾರ್ ಶಿರೂರು