Advertisement
ಆಗಿನ್ನೂ ಮೊಬೈಲ್ ಜಮಾನಾ ಆರಂಭವಾಗಿರಲಿಲ್ಲ. ಅಂಥ ಸಂದರ್ಭದಲ್ಲಿ, ಮನೆಯಿಂದ ಹೊರಗೆ ಕರೆ ಮಾಡಲು ನೆರವಾಗಿದ್ದು ಕಾಯಿನ್ ಫೋನ್ ಬೂತ್‌ಗಳು. ಒಂದು ರೂ. ಹಾಕಿ ಅವಧಿ ಮುಗಿದು ಬೀಪ್ ಸೌಂಡು ಕೇಳಿಬಂದು, ಕಾಲ್ ಇನ್ನೇನು ಕಟ್ ಆಗಿಬಿಡಬೇಕು ಎನ್ನುವಷ್ಟರಲ್ಲಿ ಮತ್ತೂಂದು ಕಾಯಿನ್ ಹಾಕಿ ಮಾತನಾಡುವುದು ಎಲ್ಲರಿಗೂ ಅಭ್ಯಾಸವಾಗಿ ಹೋಗಿತ್ತು. ಮನೆಗಳಲ್ಲಿ ಲ್ಯಾಂಡ್‌ಲೈನ್ ಫೋನ್ ಇಲ್ಲದವರಿಗೆ ಕಾಯಿನ್ ಫೋನ್ ಬೂತ್‌ಗಳು ವರದಾನ ವಾಗಿದ್ದವು. ಹೆಚ್ಚಿನ ಶುಲ್ಕ ಬೇಡದ ಬೂತ್‌ಗಳನ್ನು ಎಲ್ಲೆಂದ ರಲ್ಲಿ ಅಳವಡಿಸಿರುತ್ತಿದ್ದುದರಿಂದ, ಅದನ್ನು ಹುಡುಕಿಕೊಂಡು ಅಲೆಯುವ ಅಗತ್ಯವೂ ಇರುತ್ತಿರಲಿಲ್ಲ.ಇಂದಿಗೂ ಕೆಲವೆಡೆಗಳಲ್ಲಿ ಕಾಯಿನ್ ಫೋನ್ ಬೂತುಗಳನ್ನು ಕಾಣಬಹುದು. ಆದರೆ ಇಂದಿನ ಅನ್‌ಲಿಮಿಟೆಡ್ ಕಾಲ್ ಭರಾಟೆ ನಡುವೆ, ಹಿಂದಿದ್ದ ಪ್ರಾಮುಖ್ಯತೆಯನ್ನು ಕಾಯಿನ್ ಬೂತ್ ಫೋನುಗಳು ಕಳೆದುಕೊಂಡಿವೆ.