Advertisement
ಅವರು ಹಳೆಯಂಗಡಿಯ ನವೀಕೃತ ಸಿಎಸ್‌ಐ ಅಮ್ಮನ್ ಮೆಮೋರಿಯಲ್ ಚರ್ಚನ್ನು ರವಿವಾರ ಲೋಕಾರ್ಪಣೆಗೊಳಿಸಿ ಸಂದೇಶ ನೀಡಿದರು.ಸರ್ವರನ್ನು ಸದ್ಧರ್ಮ, ಸೌಹಾರ್ದ,ಸಮನ್ವಯಗಳಿಂದ ಒಗ್ಗೂಡಿಸುವಕೊಂಡಿಯಾಗಿ ಹಳೆಯಂಗಡಿಯ ಸಿಎಸ್‌ಐ ಅಮ್ಮನ್ ಸ್ಮಾರಕ ದೇವಾಲಯ ರಾಜ್ಯದಲ್ಲಿಯೇ ಅಪರೂಪದ ಧ್ಯಾನ ಕೇಂದ್ರವಾಗಿರುವುದು ವಿಶೇಷವಾಗಿದೆ ಎಂದರು.
Related Articles
ನವೀಕರಣಗೊಂಡ ಚರ್ಚ್‌ನ ಪುನಃ ಪ್ರತಿಷ್ಠಾಪನೆಯನ್ನು ಬಿಷಪ್‌ರಾದ ರೆ| ಮೋಹನ್ ಮನೋರಾಜ್, ರೆ| ಎಡ್ವಿನ್ ವಾಲ್ಟರ್, ರೆ| ಪ್ರಭುರಾಜ, ರೆ| ಸೆಬೆಸ್ಟಿನ್ ಜೆ. ಜತ್ತನ್ನ ಸಹಿತ ಇತರ ಧರ್ಮಗುರುಗಳು ನೆರವೇರಿಸಿದರು.
Advertisement
ಘಂಟಾ ಗೋಪುರ, ಸಭಾಂಗಣ, ಪ್ರವಚನ ಮಂಟಪವನ್ನು ಪ್ರಾರ್ಥನೆಯ ಮೂಲಕ ಅನಾವರಣಗೊಳಿಸಲಾಯಿತು. ಮಕ್ಕಳು ಹಾಗೂ ಸಭಾಸದರಿಂದ ವಿಶೇಷ ಸಂಗೀತದ ಆರಾಧನೆ, ಲಕ್ಷ ಸ್ತೋತ್ರ, ಕಾಣಿಕೆ ಸಮರ್ಪಣೆ ತುಳು ಸಂಗೀತವನ್ನು ಹಾಡುವ ಮೂಲಕ ಚರ್ಚನ್ನು ಧಾರ್ಮಿಕ ಪ್ರಾರ್ಥನಾ ವಿಧಿ ವಿಧಾನದಿಂದ ಲೋಕಾ ರ್ಪಣೆಗೊಳಿಸಲಾಯಿತು.
ಭಾಗವಹಿಸಿದ ಗಣ್ಯರು ಮಂಗಳೂರು ಮನಪಾ ನಾಮ ನಿರ್ದೇಶಿತ ಸದಸ್ಯ ಸ್ಟೀಫನ್ ಮರೋಳಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಧಿಕಾರದ ಸದಸ್ಯ ಎಚ್. ವಸಂತ ಬೆರ್ನಾಡ್, ರೆ| ಎಸ್.ಡಿ. ಐಮನ್, ಹಳೆಯಂಗಡಿ ಗ್ರಾ.ಪಂ. ಅಧ್ಯಕ್ಷೆ ಜಲಜಾ, ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಸದಸ್ಯರಾದ ಅಬ್ದುಲ್ ಖಾದರ್, ಶರ್ಮಿಳಾ ಕೋಟ್ಯಾನ್, ಅಬ್ದುಲ್ ಅಜೀಜ್, ಎಚ್. ಹಮೀದ್, ಕಾಂಗ್ರೆಸ್ ಅಲ್ಪಸಂಖ್ಯಾಕ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಸಾಹುಲ್ ಹಮೀದ್ ಕದಿಕೆ, ಕರ್ನಾಟಕ ಸದರ್ನ್ ಡಯಾಸಿಸ್‌ನ ಕೋಶಾಧಿಧಿಕಾರಿ ವಿಲ್ಫೆ†ಡ್ ಪಾಲನ್, ವಲಯಾಧ್ಯಕ್ಷ ರೆ| ಪ್ರಭುರಾಜ, ಕಟ್ಟಡ ಸಮಿತಿ ಕೋಶಾಧಿಕಾರಿ ಮೋಸೆಸ್ ಅಮ್ಮನ್ನ ಉಪಸ್ಥಿತರಿದ್ದರು.ಕಟ್ಟಡ ಸಮಿತಿ ಕಾರ್ಯದರ್ಶಿ ಶೆರ್ಲಿ ಬೆರ್ನಾಡ್ ಸ್ವಾಗತಿಸಿದರು. ಸಭಾಪಾಲಕ ರೆ| ಸೆಬೆಸ್ಟಿನ್ ಜೆ. ಜತ್ತನ್ನ ಪ್ರಸ್ತಾವನೆಗೈದರು.ಪಾಸ್ಟ್ರೆಡ್ ಸಮಿತಿ ಕಾರ್ಯದರ್ಶಿ ರೆನಿಟಾ ಎನ್. ಕರ್ಕಡ ಅವರು ವಂದಿಸಿದರು. ಪ್ರಾರ್ಥನೆ ಜೀವನಾಧಾರವಾಗಲಿ
ದೇವರ ಸಾನ್ನಿಧ್ಯಕ್ಕೆ ಮನೆ-ಮನಗಳಲ್ಲಿ ಪ್ರಾರ್ಥನೆ ನಡೆಸಬೇಕು. ಮಕ್ಕಳು ವೈಯಕ್ತಿಕ, ತಂದೆ – ತಾಯಿ ಕುಟುಂಬಕ್ಕೆ ಪ್ರಾರ್ಥಿಸಬೇಕು, ದುಷ್ಟ ಶಕ್ತಿಗಳನ್ನು ದೂರಮಾಡಲು, ಮನಸ್ಸನ್ನು ಹತೋಟಿಯಲ್ಲಿಡಲು ಪ್ರಾರ್ಥನೆ ಪರ್ಯಾಯ ಶಕ್ತಿ, ಸತ್ಯ-ನೀತಿ ಮರೆಯಾಗುತ್ತಿರುವ ಕಾಲಘಟ್ಟದಲ್ಲಿ ಮಕ್ಕಳು ಹೆತ್ತವರ ಸಂಬಂಧ ಕದಡುತ್ತಿರುವ ಈ ದಿನದಲ್ಲಿ ಪ್ರಾರ್ಥನೆ-ಧ್ಯಾನವೇ ಸೂಕ್ತ ಪರಿಹಾರ.
– ರೆ| ಮೋಹನ್ ಮನೋರಾಜ್,
ಬಿಷಪರು, ಕರ್ನಾಟಕ ಸದರ್ನ್ ಡಯಾಸಿಸ್