ಬೆಂಗಳೂರು: ಓಕಳಿಪುರ ಜಂಕ್ಷನ್‌ನ ಅಷ್ಟಪಥ ಕಾರಿಡಾರ್ ಉದ್ದೇಶಿತ ಯೋಜನೆಯಲ್ಲಿ ಹಲವು ಕಾಮಗಾರಿಗಳು ಬಾಕಿ ಉಳಿದಿದ್ದು, ಕಾಮಗಾರಿ ಪೂರ್ಣಗೊಳ್ಳಲು ಕನಿಷ್ಠ ಒಂದು ವರ್ಷಬೇಕು ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್‌ಗುಪ್ತ ಆಯುಕ್ತ ಮಂಜುನಾಥ ಪ್ರಸಾದ್ ಹಾಗೂ ಬಿಬಿಎಂಪಿ ಯೋಜನಾ ವಿಭಾಗದಅಧಿಕಾರಿಗಳು ಬಾಕಿ ಉಳಿದ ಮೂರು ಪಥಗಳ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದರು. ಈ ವೇಳೆ ರೈಲ್ವೆ ಇಲಾಖೆಯ ಅಧಿಕಾರಿಗಳು ಗೌರವ್ ಗುಪ್ತಾ ಅವರಿಗೆ ವಿವರಣೆ ನೀಡಿದರು.
ಬೆಂಗಳೂರು- ತುಮಕೂರು ಮಾರ್ಗದ ಕೆಳಸೇತುವೆ ಕಾಮಗಾರಿಯನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುತ್ತೇವೆ. ಆದರೆ, ಬೆಂಗಳೂರು-ಚೆನ್ನೈ ರೈಲ್ವೆ ಮಾರ್ಗದ ಕೆಳಸೇತುವೆಕಾಮಗಾರಿಗೆ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ತ್ಯಾಜ್ಯ ನೀರು ಕೊಳವೆ ಅಳವಡಿಕೆ ಹಾಗೂ ಕೆಪಿಟಿಸಿಎಲ್‌ನ ಕೇಬಲ್‌ಲೈನ್ ಸ್ಥಳಾಂತರ ಕಾಮಗಾರಿ ಪೂರ್ಣಗೊಳ್ಳಬೇಕಾಗಿದ್ದು, ನಂತರ ಕೆಳ ಸೇತುವೆ ಕಾಮಗಾರಿ ಕೈಗೆತ್ತಿಕೊಳ್ಳಬೇಕಿದೆ. ಹೀಗಾಗಿ, ಕಾಮಗಾರಿ ಮುಗಿಯಲು ಕನಿಷ್ಠ ಒಂದು ವರ್ಷ ಕಾಲಾವಕಾಶ (ಸೆಪ್ಟೆಂಬರ್- 2021) ಬೇಕಾಗಿಲಿದೆ ಎಂದು ಮಾಹಿತಿ ನೀಡಿದರು.
ರೈಲ್ವೆನಿಲ್ದಾಣದ ತ್ಯಾಜ್ಯನೀರು ಕೊಳವೆ ಅಳವಡಿಕೆ ಹಾಗೂ ಕೆಪಿಟಿಸಿಎಲ್ ಕೇಬಲ್ ಸ್ಥಳಾಂತರ ಕಾಮ ಗಾರಿ ಬಗ್ಗೆ ಜಲಮಂಡಳಿ ಹಾಗೂ ಕೆಪಿಟಿಸಿಎಲ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ತ್ವರಿತವಾಗಿ ಕಾಮಗಾರಿ ಮುಗಿಸಿ, ರೈಲ್ವೆ ಇಲಾಖೆಗೆ ಅನುವು ಮಾಡಿಕೊಡುವಂತೆ ಗೌರವ್ ಗುಪ್ತಾಅಧಿಕಾರಿಗಳಿಗೆ ತಾಕೀತು ಮಾಡಿದರು.
2014ರಲ್ಲಿ ಚಾಲನೆ ನೀಡಲಾಗಿದ್ದ ಯೋಜನೆ: ಬಿಬಿಎಂಪಿಯು 2014ರಲ್ಲಿ ರೈಲ್ವೆ ಇಲಾಖೆಯ ಸಹಯೋಗದಲ್ಲಿ 103 ಕೋಟಿ ರೂ. ವೆಚ್ಚದಲ್ಲಿ ಓಕಳ್ಳಿಪುರ ಜಂಕ್ಷನ್‌ನಲ್ಲಿ ಅಷ್ಟಪಥ ಕಾರಿಡಾರ್ ಯೋಜನೆಗೆ ಚಾಲನೆ ನೀಡಿತ್ತು. ಆದರೆ, ಕಳೆದ ಆರು ವರ್ಷಗಳಿಂದ ಈ ಕಾಮಗಾರಿ ಆಮೆ ವೇಗದಲ್ಲಿ ಸಾಗುತ್ತಿದೆ. ಬೆಂಗಳೂರು- ತುಮಕೂರು ರೈಲ್ವೆ ಮಾರ್ಗದಲ್ಲಿ ಇನ್ನೊಂದು ಪಥ ಹಾಗೂ ಬೆಂಗಳೂರು-ಚೆನ್ನೈ ರೈಲ್ವೆ ಮಾರ್ಗದಲ್ಲಿ ಎರಡು ಪಥದ ಕಾಮಗಾರಿ ಮಾತ್ರ ಬಾಕಿಉಳಿದಿದ್ದು, ಇನ್ನುಳಿದ ಕಾಮಗಾರಿ ಪೂರ್ಣಗೊಂಡು ಸಂಚಾರ ಮುಕ್ತವಾಗಿದೆ.