Advertisement
ಇದನ್ನು ಪಾಕ್ ಇತಿಹಾಸದಲ್ಲೇ ಅತಿ ಭೀಕರ ದುರಂತ ಎಂದು ಬಣ್ಣಿಸಲಾಗಿದೆ. ಅವರನ್ನೆಲ್ಲ ವಿವಿಧ ಆಸ್ಪತ್ರೆಗಳಿಗೆದಾಖಲಿಸಲಾಗಿದೆ. ಟ್ಯಾಂಕರ್ ಪಲ್ಟಿಯಾಗಿದೆ ಎಂದು ತಿಳಿದು ತೈಲ ಸಂಗ್ರಹಿಸಿಕೊಳ್ಳಲು ಬಂದ ನೂರಾರು ಮಂದಿ
ಸ್ಥಳೀಯರು ಬೆಂಕಿಗೆ ಆಹುತಿಯಾಗಿದ್ದಾರೆ.
Related Articles
Advertisement
ಭಾವಲ್ಪುರ ಜಿಲ್ಲಾಡಳಿತ ವಿಪತ್ತು ನಿರ್ವಹಣಾ ಘಟಕದ ಅಧಿಕಾರಿ ರಾಣಾ ಸಲೀಮ್ ಮಾತನಾಡಿ, ಈ ಘಟನೆಪಾಕಿಸ್ತಾನದ ಇತಿಹಾಸದಲ್ಲೇ ಅತ್ಯಂತ ಬೀಭತ್ಸ ಘಟನೆ ಎಂದು ಹೇಳಿದ್ದಾರೆ. ವೈದ್ಯಕೀಯ ನೆರವು ಸಿಗುವುದಕ್ಕಿಂತ
ಮೊದಲೇ 123 ಮಂದಿ ಸಾವಿಗೀಡಾಗಿದ್ದಾರೆ. ಗಾಯಾಳುಗಳ ಪೈಕಿ ಹೆಚ್ಚಿನವರ ಸ್ಥಿತಿ ಗಂಭೀರವಾಗಿಯೇ ಇದೆ. ಟ್ಯಾಂಕರ್‌ನಿಂದ ಸುಮಾರು 50 ಸಾವಿರ ಲೀಟರ್‌ಗಳಷ್ಟು ತೈಲ ಸೋರಿಕೆಯಾಗಿದೆ ಎಂದು ಅವರು ಹೇಳಿದ್ದಾರೆ. ಪ್ರತ್ಯಕ್ಷದರ್ಶಿ ಮೊಹಮ್ಮದ್ ಹನೀಫ್ ಎಂಬುವರು ಮಾಧ್ಯಮ ಪ್ರತಿನಿಧಿಗಳಿಗೆ ಆಸ್ಪತ್ರೆಯಲ್ಲಿ ಹೇಳಿದ ಪ್ರಕಾರ,
“ಉಚಿತವಾಗಿ ತೈಲ ನೀಡಲಾಗುತ್ತದೆ ಎಂದು ಸೋದರ ಸಂಬಂಧಿ ಕರೆದ. ಬಾಟಲಿಗಳನ್ನು ತೆಗೆದುಕೊಂಡು
ಮನೆಯಿಂದ ಹೊರಕ್ಕೆ ಬರುವ ವೇಳೆಯಲ್ಲಿ ಹಲವಾರು ಮಂದಿ ಹೆದ್ದಾರಿಯತ್ತ ಓಡುತ್ತಿದ್ದರು. ನಾನೂ ಅವರ ಜತೆ
ಸೇರಿಕೊಂಡೆ. ಅದೇ ಸಂದರ್ಭದಲ್ಲಿ ಟ್ಯಾಂಕರ್ ಭಾರಿ ಪ್ರಮಾಣದಲ್ಲಿ ಸ್ಫೋಟಗೊಂಡು ಬೆಂಕಿ ಹತ್ತಿಕೊಂಡಿತು. ಅದರ ಹತ್ತಿರ ಇದ್ದವರು ಸುಟ್ಟು ಕರಕಲಾಗಿ ಹೋದರು’ ಎಂದಿದ್ದಾರೆ. ವಾಹನಗಳು ಭಸ್ಮ: ಸ್ಫೋಟದಿಂದ ಉಂಟಾದ ಬೆಂಕಿಯ ಕೆನ್ನಾಲಿಗೆಗೆ ಬೈಕ್‌ಗಳು, ಕಾರುಗಳು ಸೇರಿದಂತೆ ಹಲವು
ವಾಹನಗಳು ಆಹುತಿಯಾಗಿವೆ. ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಶಭಾಜ್ ಷರೀಫ್ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್, ರಾಷ್ಟ್ರಪತಿ ಮಮೂ°ನ್ ಹುಸೇನ್, ಪಾಕಿಸ್ತಾನ ತೆಹ್ರಿಕ್-ಇ- ಇನ್ಸಾಫ್ ಮುಖ್ಯಸ್ಥ ಇಮ್ರಾನ್ ಖಾನ್, ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಬಿಲಾವಲ್ ಭುಟ್ಟೋ, ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಾಜ್ವಾ ಶೋಕ ವ್ಯಕ್ತಪಡಿಸಿದ್ದಾರೆ.