Advertisement
ರಸ್ತೆ ನಿರ್ಮಾಣದ ಉದ್ದೇಶದಿಂದ ಒತ್ತಿನೆಣೆ ಗುಡ್ಡದಲ್ಲಿ ಭಾರೀ ಪ್ರಮಾಣದ ಕಣಿವೆ ನಿರ್ಮಿಸಲಾಗಿದೆ. ಈ ಭಾಗದಲ್ಲಿ ನೀರಿನ ಒರತೆ ಅಧಿಕವಾಗಿರುವ ಜತೆಗೆ ಜೇಡಿ ಮಣ್ಣಿನಿಂದಾವೃತವಾಗಿದೆ. ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಗುಡ್ಡದ ಒಂದೊಂದೇ ಭಾಗಗಳು ಕುಸಿಯಲಾರಂಭಿಸಿವೆ.
ಒತ್ತಿನೆಣೆ ಗುಡ್ಡ ಕುಸಿಯುವ ಸಾಧ್ಯತೆ ಕುರಿತು ಆರಕ್ಷಕ ಇಲಾಖೆ ಈ ಹಿಂದೆಯೇ ಜಿಲ್ಲಾಡಳಿತಕ್ಕೆ ವರದಿ ನೀಡಿತ್ತು. ಗುಡ್ಡ ಜರಿಯುವ ಸಾಧ್ಯತೆ ಬಗ್ಗೆ ಸ್ಥಳೀಯರೂ ಭೀತಿ ವ್ಯಕ್ತಪಡಿಸಿದ್ದರು. ಆದರೆ ಕಾಮಗಾರಿ ನಿರ್ವಹಿಸುವ ಐಆರ್‌ಬಿ ಕಂಪೆನಿಯು ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೆಲಸ ಮುಂದುವರಿಸುತ್ತೇವೆ ಎಂದು ಭರವಸೆ ನೀಡಿತ್ತು. ಘಟನೆ ಸಂದರ್ಭ ಯಾವುದೇ ವಾಹದ ಸಂಚಾರ ಇಲ್ಲದ್ದರಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
Related Articles
ಇದೀಗ ಬದಲಿ ರಸ್ತೆ ನಿರ್ಮಿಸಿರುವ ಭಾಗದಲ್ಲಿ ನೀರಿನ ಹರಿವು ಅಧಿಕವಾಗಿರುವ ಕಾರಣ ರಸ್ತೆಯ ಒಳಭಾಗ ಕೊಚ್ಚಿ ಹೋಗಿದ್ದು ರಸ್ತೆ ಕುಸಿದು ಹೋಗುವ ಅಪಾಯವಿದೆ. ಸಾರ್ವಜನಿಕರು ಆಡಳಿತ ವ್ಯವಸ್ಥೆ ವಿರುದ್ಧ ರಸ್ತೆತಡೆ ನಡೆಸಿದರೆ ಇಲಾಖೆ ಕಾನೂನು ಕ್ರಮ ಕೈಗೊಳ್ಳುತ್ತದೆ. ಆದರೆ ಹೆದ್ದಾರಿ ಕಾಮಗಾರಿ ನಿರತ ಐ.ಆರ್.ಬಿ.ಕಂಪೆನಿ ನಿಯಮ ಗಾಳಿಗೆ ತೂರಿದೆ ಎಂದು ಸಾರ್ವ ಜನಿಕರು ಆರೋಪಿಸಿದ್ದಾರೆ.
Advertisement
ಎಸಿ ಭೇಟಿಸ್ಥಳಕ್ಕೆ ಭೇಟಿ ನೀಡಿರುವ ಉಪವಿಭಾಗಾಧಿಕಾರಿ ಶಿಲ್ಪಾನಾಗ್ ಅವರು ಘಟನೆಯ ಕುರಿತು ಪ್ರತಿಕ್ರಿಯಿಸಿ,ಸಾರ್ವಜನಿಕರಿಗೆ ತೊಂದರೆ ಹಾಗೂ ನಿರ್ಲಕ್ಷ é ಆರೋಪದಡಿಯಲ್ಲಿ ಕಂಪೆನಿ ವಿರುದ್ಧª ಪ್ರಕರಣ ದಾಖಲಿಸಲಾಗುತ್ತದೆ ಎಂದರು. ಮುಂದಿನ ದಿನಗಳಲ್ಲಿ ಬದಲಿ ಮಾರ್ಗವಾದ ಮಧ್ದೋಡಿ- ದೊಂಬೆ ಮಾರ್ಗವನ್ನು ಸಿದ್ಧಪಡಿಸಿ ಇಟ್ಟುಕೊಳ್ಳುವಂತೆ ಶಿಲ್ಪಾ ನಾಗ್ ಅವರು ಅಧಿಕಾರಿಗಳಿಗೆ ಸೂಚಿಸಿದರು.