ಬೆಳ್ತಂಗಡಿ: ಅತಿಥಿ ಸೇವೆಗೆ ಮತ್ತು ಉತ್ತಮ ಗುಣಮಟ್ಟದ ಆಹಾರ ಕ್ರಮಕ್ಕೆ ಹೆಸರುವಾಸಿಯಾದ ಹೋಟೆಲ್ ದಿ ಓಷ್ಯನ್ ಪರ್ಲ್ ಉಜಿರೆಯ ಕಾಶಿ ಪ್ಯಾಲೆಸ್ ನಲ್ಲಿ ಶುಕ್ರವಾರ(ಸೆ.30) 5ನೇ ಶಾಖೆ ಲೋಕಾರ್ಪಣೆಗೊಂಡಿತು.
ಉದ್ಘಾಟನೆಯನ್ನು ಮಾತೃಶ್ರೀ ಕಾಶಿಯವರ ಉಪಸ್ಥಿತಿಯಲ್ಲಿ ಎಸ್ ಡಿಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್ ನೆರವೇರಿಸಿ, ಉಜಿರೆ ಮುನ್ನೋಟಕ್ಕೆ ಮತ್ತೊಂದು ಗರಿಯಾಗಿ ಹೋಟೆಲ್ ಉದ್ಯಮ ಪರಿಚಯಿಸುವಲ್ಲಿ ದಿ ಓಷಿಯನ್ ಪರ್ಲ್ ಯಶಸ್ವಿಯಾಗಿದೆ ಎಂದು ಶುಭಹಾರೈಸಿದರು.
ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ತುಳುನಾಡಿನ ಮಂದಿ ಜಗತ್ತಿನ ಯಾವುದೇ ಕ್ಷೇತ್ರಕ್ಕೆ ಹೋದರು ವ್ಯಾಪಾರೋದ್ಯಮದಲ್ಲಿ ಯಶಸ್ವಿಯಾಗುವುದರಲ್ಲಿ ಎರಡು ಮಾತಿಲ್ಲ. ಹೋಟೆಲ್ ಉದ್ಯಮಕ್ಕೆ ದ.ಕ.ಜಿಲ್ಲೆಯ ಖ್ಯಾತಿಯನ್ನು ಬೆಳೆಸಿದ ಜಯರಾಮ್ ಬನನ್ ಹಾಗೂ ಕ್ಯಾಂಟೀನ್ ಉದ್ಯಮದಲ್ಲಿ ಖ್ಯಾತಿ ಪಡೆದ ಶಶಿಧರ್ ಶೆಟ್ಟಿ ಅವರ ಕೊಡುಗೆ ಉಜಿರೆಯ ಮಣ್ಣಿಗೆ ಅರ್ಪಣೆಯಾಗಿದೆ ಎಂದು ಬಣ್ಣಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರು ಡಾ| ಎಂ.ಮೋಹನ್ ಆಳ್ವ, ಕಲ್ಲಡ್ಕ ಪ್ರಭಾಕರ್ ಭಟ್, ಮಾಜಿ ಸಚಿವ ಕೃಷ್ಣ ಜೆ.ಪಾಲೇಮಾರ್, ಮೂಡಬಿದಿರೆ ಶಾಸಕ ಉಮಾನಾಥ ಎ. ಕೋಟ್ಯಾನ್, ಮಂಗಳೂರು ಉತ್ತರ ಶಾಸಕ ಡಾ| ವೈ ಭರತ್ ಶೆಟ್ಟಿ,ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಉಜಿರೆ ಜನಾರ್ದನ ದೇವಸ್ಥಾನದ ಶರತ್ ಕೃಷ್ಣ ಪಡುವೆಟ್ನಾಯ, ಎಸ್ ಡಿಎಂ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರು ಪ್ರೊ.ಎಸ್ ಪ್ರಭಾಕರ್, ಉಜಿರೆ ಎಸ್ ಡಿಎಂ ಐಟಿ ಮತ್ತು ವಸತಿನಿಲಯಗಳ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರನ್ ಯಶೋವರ್ಮ, ಹರಿಕೃಷ್ಣ ಬಂಟ್ವಾಳ್, ಉಜಿರೆ ಗ್ರಾ.ಪಂ ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ, ಪಟ್ಲ ಸತೀಶ್ ಶೆಟ್ಟಿ ಸಹಿತ ಪ್ರಮುಖ ಗಣ್ಯರು ಉಪಸ್ಥಿತರಿದ್ದರು.
ಕಾಶಿ ಪ್ಯಾಲೆಸ್ ಮಾಲಕರು ಶಶಿಧರ್ ಶೆಟ್ಟಿ, ಓಷ್ಯನ್ ಪರ್ಲ್ ಗ್ರೂಪ್ ಆಫ್ ಹೋಟೆಲ್ ಅಧ್ಯಕ್ಷರು ಜಯರಾಮ್ ಬನಾನ್ ಅತಿಥಿಗಳನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಓಷ್ಯನ್ ಪರ್ಲ್ ವೈಸ್ ಪ್ರೆಸಿಡೆಂಟ್ ಗಿರೀಶನ್, ಜಿ.ಎಂ ಓಷ್ಯನ್ ಪರ್ಲ್ ನಿತ್ಯಾನಂದ ಮಂಡಲ್, ಪ್ರಾಜೆಕ್ಟ್ ಜನರಲ್ ಮ್ಯಾನೇಜರ್ ಶಶಿಕುಮಾರ್ , ಶಶಿಧರ್ ಶೆಟ್ಟಿ ಮನೆಯವರು ಉಪಸ್ಥಿತರಿದ್ದರು.
ಧರ್ಮಾಧಿಕಾರಿಗಳಿಂದ ಆಶೀರ್ವಾದ
ದಿ ಓಷ್ಯನ್ ಪರ್ಲ್ ಹೋಟೆಲ್ ಗೆ ಹಿಂದಿನ ದಿನವೇ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಡಾ.ಹೇಮಾವತಿ ವೀ.ಹೆಗ್ಗಡೆ, ಕನ್ಯಾಡಿ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಆಗಮಿಸಿ ಶುಭಹಾರೈಸಿ ಉಜಿರೆಯ ಊರಿಗೆ ಐಷಾರಾಮಿ ಹೋಟೆಲ್ ಅವಶ್ಯಕತೆಯನ್ನು ಪೂರೈಸಿರುವ ಇಬ್ಬರು ಉದ್ಯಮಿಗಳ ಕೊಡುಗೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.