Advertisement
ಮೊದಲ ಪಟ್ಟಿಯಲ್ಲಿ ಶಿವಮೊಗ್ಗ ಮತ್ತು ಶಿಕಾರಿಪುರದಲ್ಲಿ ಕ್ರಮವಾಗಿ ಈಶ್ವರಪ್ಪ ಮತ್ತು ಯಡಿಯೂರಪ್ಪನವರಿಗೆ ಟಿಕೆಟ್ ಪ್ರಕಟಗೊಂಡಿತ್ತು. ಎರಡನೇ ಪಟ್ಟಿಯಲ್ಲಿ ಸೊರಬದಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದ ಕುಮಾರ್ ಬಂಗಾರಪ್ಪನವರಿಗೆ ಟಿಕೆಟ್ ನೀಡಲಾಗಿದೆ.
Related Articles
Advertisement
ಬದಲಾಗಿ ತಮ್ಮದೇ ಆದ ರಾಜಕೀಯ ಅಸ್ತಿತ್ವವನ್ನು ಕಂಡುಕೊಳ್ಳುವತ್ತ ಹೆಜ್ಜೆ ಹಾಕತೊಡಗಿದ್ದಾರೆ. ಅವರ ಎದುರು ಮೂರು ಹಾದಿಗಳಿದ್ದವು. ಈ ಹಿಂದೆ ಕಾಗೋಡು ತಿಮ್ಮಪ್ಪ ಅವರು ಕರೆದು ಮಾತನಾಡಿದ್ದರು. ಪಕ್ಷಕ್ಕೆ ಬಂದು ತನ್ನ ಪರವಾಗಿ ಕೆಲಸ ಮಾಡು. ಇದು ತಮ್ಮ ಕೊನೆಯ ಚುನಾವಣೆಯಾಗಿರುವುದರಿಂದ ಮುಂದೆ ಸಾಗರದಲ್ಲಿ ಕಾಂಗ್ರೆಸ್ ಪಕ್ಷದ ಚುಕ್ಕಾಣಿ ಹಿಡಿಯಬಹುದು ಎಂಬ ಮಾತನ್ನು ಆಡಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು. ಹೀಗಾಗಿ ಕಾಂಗ್ರೆಸ್‌ನತ್ತ ಹೆಜ್ಜೆ ಇಡಬಹುದು. ಈ ಹಿಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಸಿಗದಾಗ ಜೆಡಿಎಸ್ ಸೇರಿ ಸ್ಪರ್ಧಿಸಿ ಎರಡನೇ ಸ್ಥಾನ ಗಳಿಸಿದ್ದರು. ಈಗಲೂ ಜೆಡಿಎಸ್ ಸಾಗರ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಪ್ರಕಟಿಸಿಲ್ಲ. ಹೀಗಾಗಿ ಆ ಪಕ್ಷದತ್ತ ವಲಸೆ ಹೋಗಬಹುದು. ಇಲ್ಲವೇ, ಬಿಜೆಪಿಯಲ್ಲಿಯೇ ಉಳಿದು ಮುಂದಿನ ಅವಕಾಶಕ್ಕಾಗಿ ಕಾಯುತ್ತಾ ಕುಳಿತುಕೊಳ್ಳುವುದು.
ಆದರೆ ಬೇಳೂರು ಹೊಸದೊಂದು ಹೆಜ್ಜೆ ಇಡಬಹುದು ಎಂದು ಅವರ ಆಪ್ತ ವಲಯದಿಂದ ಕೇಳಿ ಬರುತ್ತಿದೆ. ಯಾವುದೇ ಪಕ್ಷಕ್ಕೆ ಸೇರದೆ, ಪಕ್ಷೇತರರಾಗಿ ಸ್ಪರ್ಧಿಸುವುದು. ಬಿಜೆಪಿಯನ್ನು ಯಾವುದೇ ಕಾರಣಕ್ಕೂ ಟೀಕಿಸಿದೆ, ತಮಗೆ ತಪ್ಪಿದ ಅವಕಾಶವನ್ನು ಜನರೆದುರು ಹೇಳುತ್ತಾ, ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಈಗಲೂ ಇದ್ದೇನೆ ಎಂದು ಹೇಳಿಕೊಂಡು ಮೋದಿ ಹೆಸರಿನಲ್ಲಿ ಜನರ ವಿಶ್ವಾಸ ಗಳಿಸುವುದು. ಈ ನಿಟ್ಟಿನಲ್ಲಿ ಆಲೋಚಿಸುತ್ತಿರುವ ಬೇಳೂರು “ತಣ್ಣನೆಯ ಬಂಡಾಯ’ ಪ್ರದರ್ಶಿಸುವ ಸಾಧ್ಯತೆ ದಟ್ಟವಾಗಿದೆ.ಇನ್ನೂ ಭದ್ರಾವತಿಯಲ್ಲಿ ಯಾರಿಗೂ ಟಿಕೆಟ್ ಪ್ರಕಟಗೊಂಡಿಲ್ಲ. ಇದುವರೆಗೆ ಇಲ್ಲಿ ಬಿಜೆಪಿ ಗೆದ್ದಿಲ್ಲ. ಮಾತ್ರವಲ್ಲ, ಹೇಳಿಕೊಳ್ಳುವಂತಹ ಮತ ಗಳಿಕೆ ಕೂಡ ಮಾಡಿಲ್ಲ. ಹೀಗಾಗಿ ಟಿಕೆಟ್‌ಗೆ ಪೈಪೋಟಿಯೂ ಇಲ್ಲ ವಿಶೇಷ ವರದಿ