Advertisement

ಸಮಾಜದಲ್ಲಿ  ಮಾನವೀಯ ಗುಣ ಬೆಳೆಸುವುದು ಶಿಕ್ಷಣದ ಉದ್ದೇಶ: ಡಾ|ಭಟ್‌ 

12:18 PM Mar 15, 2017 | |

ಬಂಟ್ವಾಳ : ಸಾಮಾಜಿಕ ಪರಿವರ್ತನೆಯ ಕಾರ್ಯವನ್ನು ಕಳೆದ ಮೂವತ್ತಾರು ವರ್ಷಗಳಿಂದ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಮೂಲಕ ಮಾಡುತ್ತಿದ್ದು, ಇಲ್ಲಿ ಕಲಿತ ವಿದ್ಯಾರ್ಥಿಗಳು ಸಮಾಜಕ್ಕೆ, ದೇಶಕ್ಕೆ ಮಾದರಿಯಾಗಬೇಕು ಎಂಬ ಉದ್ದೇಶ ಹೊಂದಿದೆ. ಸಮಾಜದ ಬಗ್ಗೆ ಮಾನವೀಯ ಗುಣ  ಬೆಳೆಸುವ ದೃಷ್ಟಿಕೋನವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಿ ಸಮಾಜಕ್ಕೆ ಒಳಿತಾಗುವಂತೆ ಮಾಡುವುದು ಶಿಕ್ಷಣದ ಮೂಲ ಧ್ಯೇಯವಾಗಿದೆ ಎಂದು  ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್‌ ಹೇಳಿದರು.

Advertisement

ಅವರು ಮಾ.13 ರಂದು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಮಧುಕರ ಸಭಾಂಗಣದಲ್ಲಿ  ಎಸ್ಸೆಸೆಲ್ಸಿ  ವಿದ್ಯಾರ್ಥಿಗಳ ಬೀಳ್ಕೊಡುವ ದೀಪಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜ್ಞಾನ ದೇಶದ ಸಂಪತ್ತು
ಬೆಂಗಳೂರಿನ ಉದ್ಯಮಿ ಪ್ರಕಾಶ್‌ ಶೆಟ್ಟಿ  ಮಾತನಾಡಿ ಈ ದೇಶದಲ್ಲಿ ಜ್ಞಾನಕ್ಕೆ ವಿಶೇಷ ಸ್ಥಾನವಿದ್ದು, ಜ್ಞಾನವು ದೇಶದ ಸಂಪತ್ತಾಗಿದೆ. ದೇಶದ ಸಂಸ್ಕೃತಿ ಪರಂಪರೆಯನ್ನು ಪರಿಚಯಿಸುವ ಶಿಕ್ಷಣ ಇಂದಿನ ಅಗತ್ಯವಾಗಿದೆ. ಜ್ಞಾನ ವೃದ್ಧಿಯಾದಾಗ ಅಜ್ಞಾನದ ಕತ್ತಲೆ ದೂರವಾಗುತ್ತದೆ. ಹನುಮಂತನ ಭಕ್ತನಾಗಿ ರಾಷ್ಟ್ರ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಜೀವನವನ್ನು ಸಾರ್ಥಕಗೊಳಿಸಬೇಕು. ತಂದೆತಾಯಿ ಗುರುಹಿರಿಯರ ಮಾರ್ಗದರ್ಶನದಿಂದ ಜೀವನದಲ್ಲಿ ಯಶಸ್ವಿಯಾಗಬಹುದು ಎಂದರು.

ಉದ್ಯಮಿ ರಾಜೇಂದ್ರ ಮೈಸೂರು ಮಾತನಾಡಿ ತಂದೆ ತಾಯಿ ಹಿರಿಯರಲ್ಲಿ ಮುಕ್ತವಾಗಿ ಮಾತನಾಡುವ ಅಭ್ಯಾಸವನ್ನು ಮಕ್ಕಳು ಬೆಳೆಸಿಕೊಳ್ಳಬೇಕು. ದುಃಖಕ್ಕೆ ಒಳಗಾದಾಗ ತಮ್ಮ ಜೀವನ ಶೆ„ಲಿಯನ್ನು ಬದಲಾಯಿಸಿ ಸಮಾಜ ಸೇವೆ ಮಾಡುವ ಮೂಲಕ ಮನಸ್ಸಿಗೆ ಶಾಂತಿ ಪಡೆಯಬಹುದು ಎಂದರು.

ಶಾರೀರಿಕ ಶಿಕ್ಷಣ ಶಿಕ್ಷಕ ರಾಧಾಕೃಷ್ಣ ಅಡ್ಯಂತಾಯ ಹಿತವಚನ ನೀಡಿದರು. ವೇದಿಕೆಯಲ್ಲಿ ಉದ್ಯಮಿಗಳಾದ ಸುಧಾಕರ ಶೆಟ್ಟಿ ಹುಬ್ಬಳ್ಳಿ, ವಿಜಯಕುಮಾರ್‌ ಶೆಟ್ಟಿ ಹುಬ್ಬಳ್ಳಿ, ಬಾಲಕೃಷ್ಣ ಶೆಟ್ಟಿ ಮಂಗಳೂರು, ರಮಾನಂದ ಶೆಟ್ಟಿ, ವೀಣಾ ಶಶಿಧರ ಮಾರ್ಲ, ಜಿ.ಕೆ. ರಾವ್‌ ಮಂಗಳೂರು, ಡಾ| ಕಮಲಾ ಪ್ರಭಾಕರ ಭಟ್‌, ವಿದ್ಯಾಕೇಂದ್ರದ ಅಧ್ಯಕ್ಷ ಬಿ. ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಮುಖ್ಯಶಿಕ್ಷಕ ರಮೇಶ್‌ ಎನ್‌. ಮತ್ತಿತರರು ಉಪಸ್ಥಿತರಿದ್ದರು.

Advertisement

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತೂಗು ಸೇತುವೆಗಳ ರೂವಾರಿ ಗಿರೀಶ್‌ ಭಾರದ್ವಾಜ್‌ ಅವರನ್ನು ಸಮ್ಮಾನಿಸಲಾಯಿತು.  ವಿದ್ಯಾರ್ಥಿಗಳಾದ ಲೋಹಿತ್‌, ನಿವೇದಿತಾ ಅನುಭವಗಳನ್ನು ತಿಳಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಹರ್ಷಿತಾ ಕಾರ್ಯಕ್ರಮ  ನಿರೂಪಿಸಿ, ಮೇದಿನಿ ಸ್ವಾಗತಿಸಿ, ವೀಕ್ಷಿತಾ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next