Advertisement
ಲಾಕ್‌ಡೌನ್ ಹಿನ್ನೆಲೆಯಲ್ಲಿ ಸೆಂಟ್ರಲ್ ನಿಲ್ದಾಣದಿಂದ ವಿಶೇಷ ರೈಲು ಹೊರತು ಇತರ ರೈಲುಗಳ ಸಂಚಾರ ಇಲ್ಲದಿರುವ ಹಿನ್ನೆಲೆಯಲ್ಲಿ ಮಂಗಳೂರು ಜಂಕ್ಷನ್‌ಗೆ ಬೋಗಿಯನ್ನು ತಂದು ಅಲ್ಲಿಂದ ಸಂಜೆ ಕುಂಭಕೋಣಂಗೆ ಕಳುಹಿಸಲಾಯಿತು. ಶೋರ್ನೂರು, ಈರೋಡ್ ಮೂಲಕ ಈ ಅಡಿಕೆ ಕುಂಭಕೋಣಂಗೆ ತಲುಪಲಿದೆ. ಮೊದಲಿಗೆ ಎ. 28ರಂದು ಕುಂಭಕೋಣಂಗೆ ಅಡಿಕೆಯನ್ನು ರೈಲಿನಲ್ಲಿ ಸಾಗಿಸಲಾಗಿತ್ತು.
ಕೊಂಕಣ ರೈಲ್ವೇ ಮೂಲಕ ಗುಜರಾತ್ ಸೇರಿದಂತೆ ವಿವಿಧೆಡೆ ಅಡಿಕೆಯನ್ನು ಸಾಗಿಸುವ ಕುರಿತ ಪ್ರಕ್ರಿಯೆಗಳು ನಡೆಯುತ್ತಿವೆ. ಈ ಕುರಿತು ಇತ್ತೀಚೆಗೆ ಪುತ್ತೂರು ಎಪಿಎಂಸಿಯಲ್ಲಿ ಶಾಸಕರು, ವರ್ತಕರು ಹಾಗೂ ಜನಪ್ರತಿನಿಧಿಗಳು ಹಾಗೂ ಕೊಂಕಣ ರೈಲ್ವೇಯ ಅಧಿಕಾರಿಗಳನ್ನು ಒಳಗೊಂಡ ಸಭೆ ಜರಗಿದೆ. ರೈಲಿನಲ್ಲಿ ಸಾಗಿಸಿದರೆ 3 ದಿನಗಳೊಳಗೆ ಗುಜರಾತ್ ತಲುಪಲು ಸಾಧ್ಯ. ಪ್ರಸ್ತುತ ಗೋವಾ ಬಳಿ ಸುರಂಗ ಮಾರ್ಗ ದುರಸ್ತಿ ಕಾರ್ಯ ನಡೆಯುತ್ತಿದ್ದು ಮುಕ್ತಾಯಗೊಂಡ ಬಳಿಕ ರೈಲಿನಲ್ಲಿ ಅಡಿಕೆ ಸಾಗಾಟ ಆರಂಭಗೊಳ್ಳುವ ನಿರೀಕ್ಷೆ ಇದೆ. ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ ಗೂಡ್ಸ್ ರೈಲು ಬೋಗಿಗೆ ಅಡಿಕೆ ಚೀಲಗಳ ಲೋಡಿಂಗ್ ಮಾಡಲಾಯಿತು.