ಮಹಾನಗರ, ಮೇ 12: ನಗರದ ಸಂತ ತೆರೆಜಾ ಚರ್ಚ್ನಲ್ಲಿ ನರ್ಸಿಂಗ್ ಡೇ ಅನ್ನು ಆಚರಿಸಲಾಯಿತು.
ಚರ್ಚ್ನ ವ್ಯಾಪ್ತಿಯಲ್ಲಿ ಸೇವೆಯಲ್ಲಿ ನಿರತರಾಗಿರುವ 12 ದಾದಿಯರನ್ನು ಬೆಳಗ್ಗಿನ ಬಲಿಪೂಜೆಯ ಬಳಿಕ ಸಮ್ಮಾನಿಸಲಾಯಿತು.
ಚರ್ಚ್ನ ಧರ್ಮಗುರು ವಂ| ವಿನ್ಸೆಂಟ್ ವಿಕ್ಟರ್ ಮಿನೇಜಸ್ ಮಾತನಾಡಿ, ದಾದಿಯರ ಸೇವೆಯು ದೇವರ ಸೇವೆಗೆ ಸಮಾನ ಎಂದರು.
ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ಉಪನಿರ್ದೇಶಕ ವಂ| ರೋಹಿತ್ ಡಿ. ಕೋಸ್ತ, ಚರ್ಚ್ನ ಉಪಾಧ್ಯಕ್ಷ ರೋಶನ್ ಲಸ್ರಾದೊ ಉಪಸ್ಥಿತರಿದ್ದರು.
ದಾದಿಯರಾದ ಹೆಲೆನ್ ಲೋಬೋ, ಲವಿನಾ ಪಿಂಟೋ, ರೂಪಾ ವನಿತಾ ತೋರಾಸ್, ಟ್ರೀಜಾ ಫೆರ್ನಾಂಡಿಸ್, ಸಭಿನಾ ಮಿನೇಜಸ್, ಪ್ಲಾವಿಯಾ ಅಲ್ವ ರೀಸ್, ಆ್ಯನೆಟ್ ವಾಸ್, ಜೆಸಿಂತಾ ವಾಲ್ಟರ್, ಬಬಿತಾ ಪಿರೇರಾ, ಜೋಬಿತಾ, ಸಂಗೀತಾ ಕ್ರಾಸ್ತಾ, ಜೋತಿ ಅನಿತಾ ಡಿ’ಸೋಜಾ ಅವರನ್ನು ಸಮ್ಮಾನಿಸಲಾಯಿತು.