ಚಿಕ್ಕಬಳ್ಳಾಪುರ: ಜಾಗತಿಕವಾಗಿ ಮಾನವ ಸಮುದಾಯವನ್ನು ಬೆಚ್ಚಿ ಬೀಳಿಸುತ್ತಿರುವ ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ಎಲ್ಲ ವರ್ಗಗಳಿಗಿಂತ ದಾದಿಯರ ಸೇವೆ ಇಡೀ ಮನುಕುಲಕ್ಕೆ ಮಾದರಿ ಹಾಗೂ ಆದರ್ಶವಾದದ್ದು ಎಂದು ಕೋವಿಡ್-19 ನಿಯಂತ್ರಣದ ವಿಶೇಷ ನೋಡಲ್ ಅಧಿಕಾರಿ ಭಾಸ್ಕರ್ ತಿಳಿಸಿದರು.
ನಗರದ ಜಿಲ್ಲಾಸ್ಪತ್ರೆ ಹಾಗೂ ಕೋವಿಡ್-19 ಐಸೋಲೇಷನ್ ಯಲ್ಲಿ ಮಂಗಳವಾರ ವಿಶ್ವ ದಾದಿಯರ ದಿನಾಚರಣೆ ಪ್ರಯುಕ್ತ ಕೋವಿಡ್-19 ಯಂತ್ರಣಕ್ಕಾಗಿ ಶ್ರಮಿಸುತ್ತಿರುವ ಹಿರಿಯ ಮಹಿಳಾ ಆರೋಗ್ಯ ಸಹಾಯಕರಿಗೆ ಹಾಗೂ ಶುಶ್ರೂಷಕಿಯರಿಗೆ ಮಾಸ್ಕ್ ಹಾಗೂ ಸಿಹಿ ವಿತರಿಸಿ ಅವರು ಮಾತನಾಡಿದರು.
2020 ವರ್ಷದಲ್ಲಿ ಮಾನವ ಕುಲದ ಉಳಿವಿಗಾಗಿ ಹೋರಾಡುತ್ತಿರುವ ವೈದ್ಯರ ಜೊತೆಗೆ ದಾದಿಯರ ಪರಿಶ್ರಮ ಹೆಚ್ಚು ಮಹತ್ವ ಪಡೆದುಕೊಂಡಿದೆ. ಆರೋಗ್ಯ ಕ್ಷೇತ್ರದಲ್ಲಿ ದಾದಿಯರು ವಿಶೇಷ ಛಾಪೂ ಮೂಡಿಸುವ ಕೆಲಸ ಮಾಡಿದ್ದಾರೆ.
ಅವರನ್ನು ಪ್ರತಿಯೊಬ್ಬರು ಗೌರವಿಸಬೇಕು. ಆದರೆ ಇತ್ತೀಚೆಗೆ ವೈದ್ಯರು ಮತ್ತು ಶುಶ್ರೂಷಕಿಯರ ಮೇಲೆ ಹಲ್ಲೆ ನಡೆಯುತ್ತಿರುವುದು ದುರದೃಷ್ಟಕರ ಎಂದರು.ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಮಹಾಮಾರಿ ಕೋವಿಡ್ 19 ಸೋಂಕು ತಡೆಗೆ ವೈದ್ಯರು, ಶುಶ್ರೂಷಕಿಯರು ತಮ್ಮ ಪ್ರಾಣ ಪಣಕ್ಕಿಟ್ಟು ಸೇವೆ ಸಲ್ಲಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ವಿಷ್ಣುಪ್ರಿಯ ಶಿಕ್ಷಣ ಸಂಸ್ಥೆ ವತಿಯಿಂದ ಎಲ್ಲ ಶುಶ್ರೂಕಿಯರಿಗೆ ಸಿಹಿ ಹಾಗೂ ಮಾಸ್ಕ್ ವಿತರಿಸಲಾಯಿತು. ತಹಶೀಲ್ದಾರ್ ನಾಗಪ್ರಶಾಂತ್, ಜಿಲ್ಲಾಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ.ರಮೇಶ್, ವಿಷ್ಣುಪ್ರಿಯ ಕಾಲೇಜಿನ ಅಧ್ಯಕ್ಷ ರಾಮಚಂದ್ರರರೆಡ್ಡಿ, ವಿದ್ಯಾರ್ಥಿ ಮುಖಂಡ ಎನ್.ಮಂಜುನಾಥರೆಡ್ಡಿ ಉಪಸ್ಥಿತರಿದ್ದರು.