Advertisement

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

01:52 AM Jul 27, 2024 | Team Udayavani |

ಹೊಸದಿಲ್ಲಿ: 2024ರ ಸಾಲಿನ ನೀಟ್‌-ಯುಜಿ ಪರೀಕ್ಷೆಯ ಪರಿಷ್ಕೃತ ಫ‌ಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‌ಟಿಎ) ಶುಕ್ರವಾರ ಬಿಡುಗಡೆ ಮಾಡಿದ್ದು, ಟಾಪರ್‌ ಸಂಖ್ಯೆ 67ರಿಂದ 17ಕ್ಕೆ ಇಳಿಕೆಯಾಗಿದೆ!

Advertisement

ಜೂ.4ರಂದು ಪ್ರಕಟವಾದ ಫ‌ಲಿ ತಾಂಶದಲ್ಲಿ 67 ಅಭ್ಯರ್ಥಿಗಳು 720 ಪೂರ್ಣಾಂಕ ಗಳಿಸಿದ್ದರು. ಈ ಪೈಕಿ 6 ವಿದ್ಯಾರ್ಥಿಗಳು ಪರೀಕ್ಷಾ ಮೌಲ್ಯ ಮಾಪ ಕರ ತಪ್ಪಿನಿಂದಾಗಿ ಟಾಪರ್‌ ಆಗಿದ್ದರೆ, ಭೌತಶಾಸ್ತ್ರದ ಪ್ರಶ್ನೆಯೊಂದಕ್ಕೆ ಸಂಬಂಧಿಸಿ ಹೆಚ್ಚುವರಿ 44 ಅಭ್ಯರ್ಥಿಗಳಿಗೆ ಗ್ರೇಸ್‌ ಮಾರ್ಕ್ಸ್  ನೀಡಿದ್ದರಿಂದ ಪೂರ್ಣಾಂಕ ಪಡೆದುಕೊಂಡಿದ್ದರು. ಸುಪ್ರೀಂ ಕೋರ್ಟ್‌ ಆದೇಶದಿಂದಾಗಿ, ಎನ್‌ಟಿಎ ಪರೀ ಕ್ಷಾ ತಪ್ಪುಗಳನ್ನು ತಿದ್ದಿಕೊಂಡಿದ್ದರಿಂದ ಅರ್ಹ ಅಭ್ಯರ್ಥಿಗಳ ಸಂಖ್ಯೆಯೂ 13,16,268ರಿಂದ 13,15,853ಕ್ಕೆ ಕುಸಿ ದಿದೆ. ಒಟ್ಟು 415 ಅಭ್ಯರ್ಥಿಗಳ ವ್ಯತ್ಯಾಸ ವಾಗಿದೆ. ಅಲ್ಲದೇ ಮೇ 5ರಂದು ನಡೆದ ಪರೀಕ್ಷೆ ವೇಳೆ ಸಮಯ ಕೊರತೆಯನ್ನು ಎದುರಿಸಿದ್ದಕ್ಕಾಗಿ 1,563 ಅಭ್ಯರ್ಥಿಗಳಿಗೆ ಎನ್‌ಟಿಎ ಮರು ಪರೀಕ್ಷೆಯನ್ನೂ ನಡೆಸಿತ್ತು. ಪ್ರಶ್ನೆ ಪತ್ರಿಕೆ ಸೋರಿಕೆ, ಅಕ್ರಮಗಳು, ಪರೀಕ್ಷೆ ವೇಳೆ ಸಮಯ ನಷ್ಟ ಸೇರಿದಂತೆ ವಿವಿಧ ಕಾರಣಕ್ಕಾಗಿ ಮೇ 5ರಂದು ನಡೆದ ನೀಟ್‌ ಪರೀಕ್ಷೆ ಭಾರೀ ವಿವಾದಕ್ಕೆ ಕಾರಣವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next