Advertisement

Stray dog;ಒಂದು ಗಂಟೆಯೊಳಗೆ 17 ಜನರಿಗೆ ಕಚ್ಚಿದ ನಾಯಿ: ವಿಡಿಯೋ ವೈರಲ್

09:23 PM Aug 19, 2024 | Team Udayavani |

ಗೋರಖ್ ಪುರ: ಉತ್ತರಪ್ರದೇಶದ ಗೋರಖ್ ಪುರದಲ್ಲಿ ಬೀದಿನಾಯಿಯೊಂದು ಸಿಕ್ಕ ಸಿಕ್ಕವರಿಗೆ ಕಚ್ಚಿ ಭೀತಿ ಮೂಡಿಸಿದೆ. ಒಂದು ಗಂಟೆಯೊಳಗೆ ಬರೋಬ್ಬರಿ 17 ಮಂದಿಗೆ ಕಚ್ಚಿ ಅಟ್ಟಹಾಸ ಮೆರೆದಿದೆ.

Advertisement

ಆಗಸ್ಟ್ 14 ರಂದು ಘಟನೆ ನಡೆದಿದ್ದು 22 ವರ್ಷದ ಆಶಿಶ್ ಯಾದವ್ ಎಂಬಾತ ನಾಯಿಯಿಂದ ಕಚ್ಚಿಸಿಕೊಂಡ 17 ನೇ ವ್ಯಕ್ತಿಯಾಗಿದ್ದಾನೆ. . ಆಶಿಶ್ ತನ್ನ ಮನೆಯ ಹೊರಗೆ ಮೊಬೈಲ್ ನಲ್ಲಿ ಮಾತನಾಡುತ್ತಾ ಆರಾಮವಾಗಿ ನಡೆದುಕೊಂಡು ಹೋಗುತ್ತಿದ್ದಾಗ ಬೀದಿ ನಾಯಿ ದಾಳಿ ಏಕಾಏಕಿ ಆಘಾತಕ್ಕೀಡು ಮಾಡಿದೆ. ಮುಖದ ಮೇಲೂ ಹಾರಿ ಕಚ್ಚಿದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆಸ್ಪತ್ರೆಗೆ ಹೋದಾಗ ಜಿಲ್ಲಾ ಆಸ್ಪತ್ರೆಯಲ್ಲಿ ರೇಬಿಸ್ ಲಸಿಕೆ ಇಲ್ಲ ಎಂದಿದ್ದಾರೆ ಎಂದು ಯುವಕನ ತಂದೆ ವಿಜಯ್ ಯಾದವ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next