Advertisement
ನಾಳೆಯಿಂದ ಸದನ ಪ್ರಾರಂಭವಾಗುವುದರಿಂದ ಪಕ್ಷದ ಹಿರಿಯ ನಾಯಕರ ಸಭೆ ಕರೆದಿದ್ದೇನೆ. ಗೋಹತ್ಯೆ ನಿಷೇಧ, ಲವ್ ಜಿಹಾದ್ ಬಗ್ಗೆ ಕಾನೂನು ತರುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ. ಇವುಗಳ ಬಗೆ ನಮ್ಮ ನಿಲುವು ಏನಿರಬೇಕು ಎನ್ನುವುದನ್ನು ಚರ್ಚಿಸಿದ್ದೇವೆ.
Related Articles
Advertisement
ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ, ಕಾರ್ಮಿಕ ಕಾಯ್ದೆ ತರಲು ಮುಂದಾಗಿದ್ದಾರೆ. ಇದರ ಬಗ್ಗೆ ಚರ್ಚೆ ಮಾಡುತ್ತೇವೆ. ಸರ್ಕಾರ ಮಿತವ್ಯಯ್ಯದ ಬದಲು ದುಂಧು ವೆಚ್ಚಕ್ಕೆ ಮುಂದಾಗಿದೆ. ಸಾಲ ಹೆಚ್ಚು ಮಾಡಿಕೊಂಡಿದ್ದಾರೆ. ಸಂಬಳ ಕೊಡಲು ದುಡ್ಡಿಲ್ಲ. ಸಾಲದ ಬಡ್ಡಿ ಕಟ್ಟಲು ಹಣ ಇಲ್ಲ ಇವರ ಬಳಿ. ನಾಳೆ ಮಧ್ಯಾಹ್ನ ಬಿಎಸಿ ಸಭೆ ಕರೆಯಲಿದ್ದಾರೆ. ಅಲ್ಲಿ ಸರ್ಕಾರದ ನಿರ್ಧಾರ ಏನಿದೆ ಎನ್ನುವುದು ತಿಳಿಸಬೇಕು ಎಂದು ಆಗ್ರಹಿಸಿದರು.
ಸದನದಲ್ಲಿ ಏಳು ದಿನಗಳಲ್ಲಿ ಎಲ್ಲ ವಿಷಯಗಳನ್ನು ಚರ್ಚೆ ಮಾಡಲು ಆಗುವುದಿಲ್ಲ. ಲವ್ ಜಿಹಾದ್ ಹಾಗೂ ಗೋಹತ್ಯೆ ಕಾಯಿದೆ ಬಿಲ್ ತರುವ ಮೊದಲೇ ವಿರೋಧಿಸುತ್ತೇವೆ. ಅಸೆಂಬ್ಲಿ ನಡೆಸಬೇಕಾ ಬೇಡವೆ ಎನ್ನುವ ಪ್ರಶ್ನೆಯೂ ಎದ್ದಿದೆ. ಪಂಚಾಯತಿ ಚುನಾವಣೆ ಇರುವುದರಿಂದ ಬಹಳ ಜನ ಶಾಸಕರು ಗೈರಾಗುವ ಸಾಧ್ಯತೆ ಇದೆ.
ಪರಿಷತ್ ಸಭಾಪತಿ ಪದಚ್ಯುತಿಗೆ ಜೆಡಿಎಸ್ ನಡೆ ಏನು ಎನ್ನುವುದು ಗೊತ್ತಾಗಬೇಕು. ದೇವೇಗೌಡರು ಜಾತ್ಯತೀತರು ಅಂತ ಹೇಳಿಕೊಳ್ಳುತ್ತಾರೆ. ಆದರೇ ಅದು ಗೊತ್ತಾಗಬೇಕಲ್ಲಾ? ಕುಮಾರಸ್ವಾಮಿಗೆ ಇಮೇಜ್ ಇದ್ದಿದ್ದರೆ ನಾನು ಪಕ್ಷ ಬಿಟ್ಟು ಬಂದ ಮೇಲೆ ಅವರ ಪಕ್ಷದ ಶಾಸಕರ ಸಂಖ್ಯೆ 59 ರಿಂದ 28ಕ್ಕೆ ಹೇಗೆ ಬಂತು ? ಆ ಮೇಲೆ ಇವರ ಪಕ್ಷದ ಶಾಸಕರ ಸಂಖ್ಯೆಯೂ ಏರಲೇ ಇಲ್ಲವಲ್ಲ. ಗುಡ್ ವಿಲ್ ಇದ್ದರೆ ತಾನೆ ಅವರಿಗೆ ಜನಪ್ರಿಯತೆ ಇರುವುದು ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: ಕಾಂಗ್ರೆಸ್ ನಲ್ಲಿ ಈಗಿರುವುದು ಬಣವಲ್ಲ, ಒಂದೇ ಬಣ್ಣ: ಹರ್ಷ ಮೊಯ್ಲಿ
ಕುಮಾರಸ್ವಾಮಿಗೆ ವ್ಯೆಯಕ್ತಿಕವಾಗಿ ಕಾಂಗ್ರೆಸ್ ಬಗ್ಗೆ ದ್ವೇಷ ಇದೆ. ಇವರು ಬಿಜೆಪಿ ಜೊತೆ ಹೋಗಿದ್ದರೆ ಸಿಎಂ ಆಗಿರುತ್ತಿದ್ದೆ ಎಂದು ಹೇಳಿದರೆ, ಇವರನ್ನು ಬಿ ಟೀಂ ಎಂದು ಕರೆಯದೆ ಮತ್ತೇನು ಹೇಳಬೇಕು. ಜೆಡಿಎಸ್ ಜೊತೆ ಸರ್ಕಾರ ಮಾಡುವ ವಿಷಯದಲ್ಲಿ, ಮೊದಲ ಮಾತುಕತೆಯಲ್ಲಿ ನಾನು ಭಾಗಿಯೇ ಆಗಿರಲಿಲ್ಲ. ನಮ್ಮ ಹೈ ಕಮಾಂಡ್ ಕೋಮುವಾದಿ ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂದು ಜೆಡಿಎಸ್ ಗೆ ಬೆಂಬಲ ಸೂಚಿಸಿದ್ದರು. ಎಂದು ತಿಳಿಸಿದರು.
ಇದನ್ನೂ ಓದಿ: ಗುಡ್ಡೆಕೊಪ್ಲದಲ್ಲಿ ಲಂಗರು ಹಾಕಿದ ಡ್ರೆಜ್ಜರ್ ಗೆ ಒಂದು ವರ್ಷ! ವಿಳಂಬವಾದ ವಿಲೇವಾರಿ ಕ್ರಮ