Advertisement

ಜಿಲ್ಲೆಯಲ್ಲಿ ಸೋಂಕಿತರಸಂಖ್ಯೆ 1,988ಕ್ಕೆ ಏರಿಕೆ

11:27 AM Aug 04, 2020 | Suhan S |

ತುಮಕೂರು: ಜಿಲ್ಲೆಯಲ್ಲಿ ಸೋಮವಾರ ದಂದು 72 ಹೊಸ ಕೋವಿಡ್‌-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1988ಕ್ಕೆ ಏರಿಕೆಯಾಗಿ, ಸೋಂಕಿನಿಂದ ಒಬ್ಬರು ಮೃತಪಟ್ಟಿದ್ದು ಮೃತರ ಸಂಖ್ಯೆ 58ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.

Advertisement

ಜಿಲ್ಲೆಯಲ್ಲಿ ಸೋಮವಾರ ತುಮಕೂರು-28, ಕುಣಿಗಲ್‌-12, ತಿಪಟೂರು-3, ಮಧುಗಿರಿ-5, ಪಾವಗಡ – 2, ಗುಬ್ಬಿ-4, ತುರುವೇಕೆರೆ-5, ಚಿಕ್ಕನಾಯಕನಹಳ್ಳಿ-4, ಕೊರಟಗೆರೆ- 7, ಶಿರಾ-2, ಒಟ್ಟು 72 ಮಂದಿಯಲ್ಲಿ ಕೋವಿಡ್‌-19 ಸೋಂಕಿರುವುದು ದೃಢಪಟ್ಟಿದೆ ಎಂದರು.

ಜಿಲ್ಲೆಯಲ್ಲಿ ಈವರೆಗೆ 38116 ಜನರ ಗಂಟಲು ದ್ರವ ಪರೀಕ್ಷೆ ಮಾಡಲಾಗಿದ್ದು, ಅದರಲ್ಲಿ 34469 ಜನರಿಗೆ ನೆಗೆಟಿವ್‌ ಎಂದು ವರದಿ ಬಂದಿದೆ. ಅದರಲ್ಲಿ ನಿಗಾವಣೆಯಲ್ಲಿ 4094 ಜನರಿದ್ದು ಪ್ರಥಮ ಸಂಪರ್ಕ 2483, ದ್ವೀತಿಯ 1611 ಜನರಿದ್ದು 1988 ಜನರಿಗೆ ಕೋವಿಡ್  ಸೋಂಕು ಇರುವುದು ದೃಢಪಟ್ಟಿದೆ. ಅದರಲ್ಲಿ 1047 ಜನ ಗುಣಮುಖರಾಗಿದ್ದಾರೆ. ಇನ್ನೂ ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ 883 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಐಸಿಯುನಲ್ಲಿ 8 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೋವಿಡ್‌ಗೆ ಒಂದು ಸಾವು: ಕೋವಿಡ್ ಸೋಂಕಿಗೆ ಜಿಲ್ಲೆಯಲ್ಲಿ ಸೋಮವಾರ ನಗರದ ಕ್ಯಾತ್ಸಂದ್ರ ಬಡಾವಣೆಯ 76 ವರ್ಷದ ವೃದ್ಧೆ ಬಲಿಯಾಗಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next